ಉರಿ ಸೇನಾನೆಲೆ ದಾಳಿ ಘಟನೆ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನಾ ಶಿಬಿರಗಳ ಮೇಲೆ ನಡೆಸಿದ್ದ ಸರ್ಜಿಕಲ್ ದಾಳಿಗೆ ಬೆದರಿ ಕಳೆದ 6 ತಿಂಗಳಿನಿಂದ ಬಾಲ ಮುದುರಿಕೊಂಡಿದ್ದ ಪಾಕಿಸ್ತಾನದ ಪೈಶಾಚಿಕ ಮುಖವಾಡ ಮತ್ತೊಮ್ಮೆ ಕಳಚಿಬಿದ್ದಿದೆ. ಕಳೆದೊಂದು ತಿಂಗಳಿನಿಂದ 7ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕ್ ಯೋಧರು ಸೋಮವಾರ ಮತ್ತೊಮ್ಮೆ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಕೊಂದಿದ್ದಲ್ಲದೆ, ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಪಾಕ್ನ ಪಾತಕದಿಂದ ಕೆರಳಿರುವ ಕೇಂದ್ರ ಸರ್ಕಾರ ಸೂಕ್ತ ತಿರುಗೇಟು ನೀಡಲು ಸೇನಾಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಈ ಬೆಂಬಲ ಸಿಕ್ಕ ಬೆನ್ನಲ್ಲೇ ಪಾಕ್ ವಿರುದ್ಧ ಮುಗಿಬಿದ್ದ ಭಾರತೀಯ ಸೇನೆ ಶತ್ರು ರಾಷ್ಟ್ರದ 2 ಸೇನಾ ಬಂಕರ್ ಧ್ವಂಸಗೊಳಿಸಿ 7 ಯೋಧರ ಹತ್ಯೆಗೈದಿದೆ. ಆ ಮೂಲಕ ಮತ್ತೊಮ್ಮೆ ಸರ್ಜಿಕಲ್ ದಾಳಿಗೆ ಸಿದ್ಧ ಎಂಬ ಎಚ್ಚರಿಕೆ ರವಾನಿಸಿದೆ. ಈ ದುರ್ಘಟನೆ ಬೆನ್ನಲ್ಲೇ ಕುಲ್ಗಾಂನಲ್ಲಿ ಬ್ಯಾಂಕ್ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ತಂಡ ಇಬ್ಬರು ಸಿಬ್ಬಂದಿ ಹಾಗೂ ಐವರು ಪೊಲೀಸರನ್ನು ಕೊಂದು 50 ಲಕ್ಷ ರೂ. ದೋಚಿರುವುದು ಪರಿಸ್ಥಿತಿಯ ಬಿಗುವನ್ನು ಹೆಚ್ಚಿಸಿದೆ.
ಜಮ್ಮು: ನಿರಂತರ ಗುಂಡಿನ ಚಕಮಕಿಯಿಂದ ರಣರಂಗದಂತಾಗಿರುವ ಪೂಂಚ್ನ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪಾಕ್ ಪಡೆಗಳು ಸೋಮವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದು ದೇಹವನ್ನು ವಿರೂಪಗೊಳಿಸಿ ಶಿರಚ್ಛೇದ ಮಾಡಿವೆ. ಈ ಕ್ರೌರ್ಯದ ಬೆನ್ನಲ್ಲೇ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತೀಯ ಸೇನೆ ಪಾಕ್ ಸೇನಾ ಬಂಕರ್ಗಳನ್ನು ಧ್ವಂಸಗೊಳಿಸಿ 7 ಯೋಧರ ಹತ್ಯೆಗೈದಿದೆ.
ಪಾಕ್ ಸೇನೆಯ ಘಟಕವಾದ ಗಡಿ ಕಾರ್ಯಪಡೆ (ಬಾರ್ಡರ್ ಆಕ್ಷನ್ ಟೀಂ-ಬ್ಯಾಟ್) ಕೃಷ್ಣ ಘಾಟಿ ಪ್ರಾಂತ್ಯದಲ್ಲಿ ಈ ಕೃತ್ಯ ಎಸಗಿದೆ. ಭಾರತೀಯ ಸೇನೆಯ ಓರ್ವ ಯೋಧ ಮತ್ತು ಬಿಎಸ್ಎಫ್ನ ಹೆಡ್ ಕಾನ್ಸ್ಟೆಬಲ್ರ ಮೃತದೇಹವನ್ನು ವಿರೂಪಗೊಳಿಸಲಾಗಿದೆ ಎಂದು ಸೇನೆ ಹೇಳಿದ್ದರೆ, ಮತ್ತೆ ಕೆಲವು ಮೂಲಗಳ ಪ್ರಕಾರ ಇಬ್ಬರು ಯೋಧರ ಶಿರಚ್ಛೇದಗೊಳಿಸಲಾಗಿದೆ.
ಗಸ್ತು ಯೋಧರೇ ಗುರಿ: ಪಾಕ್ನ ಬ್ಯಾಟ್ ಪಡೆಯು ಭಾರತದ ಗಸ್ತುಯೋಧರನ್ನು ಗುರಿಯಾಗಿಸಿಕೊಂಡು ಬೆಳಗಿನ ಜಾವ 8.30ಕ್ಕೆ ರಾಕೆಟ್ ಮತ್ತು ಮೋರ್ಟಾರ್ ಬಾಂಬ್ ದಾಳಿ ನಡೆಸಿದೆ. ಇದು ಪಾಕ್ ಸೇನೆಯ ಪೂರ್ವಯೋಜಿತ ಕೃತ್ಯವಾಗಿದ್ದು, ಭಾರತೀಯ ಗಡಿಪ್ರದೇಶದಲ್ಲಿ ಸುಮಾರು 250 ಮೀ. ಪ್ರವೇಶಿಸಿ ದಾಳಿಗೆ ಸಂಚು ರೂಪಿಸಿದೆ. ಭಾರತೀಯ ಯೋಧರು ಗಸ್ತಿನಲ್ಲಿ ತೆರಳುವ ವೇಳೆ ಅವರತ್ತ ‘ಬ್ಯಾಟ್’ ದಾಳಿ ನಡೆಸಿದೆ. ಈ ಸಂದರ್ಭ ತಂಡವು ಹಿಂದಿರುಗಿದೆ. ಆಗ ಹಿಂದೆ ಉಳಿದಿದ್ದ ಇಬ್ಬರು ಯೋಧರ ಮೇಲೆ ಮುಗಿಬಿದ್ದ ಬ್ಯಾಟ್, ಅವರನ್ನು ಕೊಂದು ದೇಹವನ್ನು ಹೊತ್ತೊಯ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಭಾರತದ ಆರೋಪವನ್ನು ಪಾಕ್ ಸೇನೆ ನಿರಾಕರಿಸಿದೆ.
ಇಬ್ಬರು ಹುತಾತ್ಮ: 22 ಸಿಖ್ ಇನ್ಫ್ಯಾಂಟ್ರಿಯ ನಾಯ್್ಕ ಸುಬೇದಾರ್ ಪರಂಜೀತ್ ಸಿಂಗ್ ಮತ್ತು ಬಿಎಸ್ಎಫ್ನ 200ನೇ ಬೆಟಾಲಿಯನ್ನ ಹೆಡ್ ಕಾನ್ಸ್ಟೆಬಲ್ ಪ್ರೇಮ್ ಸಾಗರ್ ಹುತಾತ್ಮರಾದ ಯೋಧರಾಗಿದ್ದಾರೆ. ಬಿಎಸ್ಎಫ್ನ ಮತ್ತೋರ್ವ ಕಾನ್ಸ್ಟೆಬಲ್ ರಾಜೀಂದರ್ ಸಿಂಗ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿ ನಡೆಸಿದ್ದ ಪಾಕ್ ಪಡೆಗೆ ಭಾರತೀಯ ಪಡೆಗಳು ಪ್ರತ್ಯುತ್ತರ ನೀಡಿವೆ.
ಪ್ರತೀಕಾರಕ್ಕೆ ಬೆಚ್ಚಿದ ಪಾಕ್: ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಪಾಕ್ಗೆ ತಿರುಗೇಟು ನೀಡಿದ ಭಾರತೀಯ ಸೇನೆ ಕಿರ್ಪನ್ ಹಾಗೂ ಪಿಂಪರ್ ಪ್ರದೇಶದ ಎದುರಿರುವ ಎರಡು ಸೇನಾ ಬಂಕರ್ಗಳನ್ನು ನಾಶಪಡಿಸಿ ಏಳು ಯೋಧರನ್ನು ಹತ್ಯೆಗೈದಿದೆ. ಭಾರತದ ಕಾರ್ಯಾಚರಣೆಯಿಂದ ಪಾಕಿಸ್ತಾನದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ನಾಶವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಕಾಶ್ಮೀರಕ್ಕೆ ಭೇಟಿ ನೀಡಿ ಸೇನಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಸೇನೆಗೆ ಸ್ವಾತಂತ್ರ್ಯ ನೀಡಿದ ಕೇಂದ್ರ: ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ತೀರ್ವನಿಸಿರುವ ಕೇಂದ್ರ ಸರ್ಕಾರ ಯೋಧರ ಹತ್ಯಾಕಾಂಡಕ್ಕೆ ಯಾವ ರೀತಿ ಪ್ರತೀಕಾರ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆಯನ್ನು ಸೇನಾಪಡೆಗೆ ನೀಡಿದೆ. ಭಾರತೀಯ ಯೋಧರ ಆತ್ಮಾರ್ಪಣೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ನೀಡಿರುವ ಹೇಳಿಕೆ ಸೇನಾಪಡೆಗೆ ಸ್ವಾತಂತ್ರ್ಯ ನೀಡಿರುವ ಸ್ಪಷ್ಟ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಕೂಡ ಪ್ರತೀಕಾರ ಕೈಗೊಳ್ಳಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಯೋಧರ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿರುವ ವಿಎಚ್ಪಿ ಭಾರತ ಕೂಡ ಇಂಥದ್ದೇ ಪ್ರತೀಕಾರ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಪಾಕ್ ಕೃತ್ಯ ಖಂಡಿಸಿರುವ ಬಜರಂಗದಳ ಕೂಡ ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದೆ.
ಪಾಕ್ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಪಾಕ್ನೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಈ ಸನ್ನಿವೇಶ ನಿರ್ವಹಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕೆಂದೂ ಅವರು ವಿರೋಧ ಪಕ್ಷಗಳಿಗೆ ಸೂಚಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಾಜಪೇಯಿ ನೀಡಿದ್ದ ಸಲಹೆಯನ್ನು ಸ್ಮರಿಸಿದ ದಿಗ್ವಿಜಯ್ ಸಿಂಗ್, ‘ನಮ್ಮ ನೀತಿಗಳನ್ನು ಬದಲಾಯಿಸಿಕೊಳ್ಳಬಹುದು; ಆದರೆ ನಮ್ಮ ನೆರೆರಾಷ್ಟ್ರವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಮಾತನ್ನು ಪುನರುಚ್ಚರಿಸಿದ್ದಾರೆ. ಪಾಕ್ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ ಮತ್ತೊಬ್ಬ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಪ್ರಯತ್ನಿಸಬೇಕೇ ಹೊರತು ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಮೃತದೇಹ ವಿರೂಪ ಇದೇ ಮೊದಲಲ್ಲ
ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ ಅವರ ಮೃತದೇಹವನ್ನು ಪಾಕ್ ಪಡೆಗಳು ವಿರೂಪಗೊಳಿಸುತ್ತಿರುವುದು ಇದೇ ಮೊದಲಲ್ಲ. ಜುಲೈ1999 ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕ್ಯಾ. ಸೌರಭ್ ಕಾಲಿಯರನ್ನು ಬಂಧಿಸಿದ್ದ ಪಾಕ್ ಸೇನೆ ಅವರ ದೇಹವನ್ನು ವಿರೂಪಗೊಳಿಸಿ ಬಳಿಕ ಹಸ್ತಾಂತರಿಸಿತ್ತು.
- ಫೆ. 2000 ನೌಶೆರಾ ಸೆಕ್ಟರ್ನಲ್ಲಿ 24 ವರ್ಷದ ಭಾರತೀಯ ಯೋಧ ಭಾಸಹೇಬ್ ಮಾರುತಿ ತಾಳೇಕರ್ ಅವರ ಶಿರಚ್ಛೇದಗೊಳಿಸಿತ್ತು.
- ಜೂ. 2008 ಗೋರ್ಖಾ ರೈಫಲ್ಸ್ನ ಯೋಧನನ್ನು ಸೆರೆಹಿಡಿದಿದ್ದ ಬ್ಯಾಟ್, ಆತನ ಶಿರಚ್ಛೇದಗೊಳಿಸಿತ್ತು.
- ಜ. 2013 ಇಬ್ಬರು ಯೋಧರನ್ನು ಹತ್ಯೆಗೈದ ಬಳಿಕ ಪಾಕ್ ಪಡೆ ಓರ್ವ ಯೋಧನ ಶಿರಚ್ಛೇದಗೊಳಿಸಿತ್ತು.
- ಅ.2016 ಕುಪ್ವಾರದಲ್ಲಿ ಓರ್ವ ಯೋಧನ ಹತ್ಯೆ ಬಳಿಕ ಆತನ ಮೃತದೇಹವನ್ನು ವಿರೂಪಗೊಳಿಸಿತ್ತು.
- ನ. 2016 ಮೂವರು ಯೋಧರನ್ನು ಹತ್ಯೆಗೈದ ಪಾಕ್ ಸೇನೆ, ಅವರಲ್ಲೊಬ್ಬನ ದೇಹವನ್ನು ವಿರೂಪಗೊಳಿಸಿತ್ತು.
No comments:
Post a Comment