ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ ಮಹಿಳೆಯರ ವಿಭಾಗದಲ್ಲಿ ಶುಕ್ರವಾರ ಭಾರತದ ಸಾಕ್ಷಿ ಮಲಿಕ್, ವಿನೇಶ್ ಪೋಗತ್ ಮತ್ತು ದಿವ್ಯಾ ಕಕ್ರನ್ ಬೆಳ್ಳಿ ಪದಕ ಜಯಿಸಿದರೆ, ರೀತು ಪೋಗತ್ ಕಂಚಿನ ಪದಕ ಜಯಿಸಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು 60 ಕೆ.ಜಿ. ವಿಭಾಗದ ಫೈನಲ್ನಲ್ಲಿ ಜಪಾನ್ನ ರಿಸಾಕೋ ಕವಾಯಿ ಅವರ ವಿರುದ್ಧ 0-10 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ರಿಯೋ ಒಲಿಂಪಿಕ್ಸ್ನಲ್ಲಿ ಕಾಲಿಗಾಗಿದ್ದ ಗಾಯದಿಂದ ಚೇತರಿಸಿಕೊಂಡು ಮತ್ತೆ ಕುಸ್ತಿ ಅಖಾಡಕ್ಕಿಳಿದಿರುವ ವಿನೇಶ್ ಪೋಗತ್ ಅವರು 55 ಕೆ.ಜಿ. ವಿಭಾಗದ ಫೈನಲ್ನಲ್ಲಿ ಜಪಾನ್ನ ಸೇ ನಂಜೋ ಅವರ ವಿರುದ್ಧ 4-8 ಅಂಕಗಳ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.
69 ಕೆ.ಜಿ. ವಿಭಾಗದಲ್ಲಿ ಭಾರತದ ದಿವ್ಯ ಕಕ್ರನ್ ಅವರು ಜಪಾನ್ನ ಸಾರಾ ದೋಶೋ ಅವರ ವಿರುದ್ಧ 0-8 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ರೀತು ಪೋಗತ್ 48 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಯಾವುದೇ ಸ್ಪರ್ಧೆಯಲ್ಲಿದೆ ಕಂಚಿನ ಪದಕ ಜಯಿಸಿದರು. ರೀತು ಪೋಗತ್ ಎದುರಾಳಿ ಚೀನಾ ಸುನ್ ಯನಾನ್ ಅವರು ಗಾಯಗೊಂಡು ನಿವೃತ್ತಿ ಘೊಷಿಸಿದ್ದರಿಂದ ರೀತುಗೆ ಕಂಚಿನ ಪದಕ ಒಲಿಯಿತು.

No comments:
Post a Comment