ನವದೆಹಲಿ: ಭಾರತೀಯರನ್ನು ಬಾಹ್ಯಾಕಾಶಕ್ಕೆ ಭಾರತ ದಿಂದಲೇ ಕಳುಹಿಸುವ ಸಾಮರ್ಥ್ಯದ ಇನ್ನೂರು ಆನೆ ತೂಕದ ಸ್ವದೇಶ ನಿರ್ವಿುತ ಜಿಎಸ್ಎಲ್ವಿಎಂಕೆ 3ರ ಪರೀಕ್ಷಾರ್ಥ ಉಡಾವಣೆ ಜೂನ್ 5ಕ್ಕೆ ನಿಗದಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಈಗಾಗಲೇ ಈ ರಾಕೆಟನ್ನು ಉಡಾವಣೆಗೆ ಸಜ್ಜುಗೊಳಿಸ ಲಾಗಿದೆ. ಭಾರತದಲ್ಲೇ ತಯಾರಿಸಲಾದ ಇದುವರೆಗಿನ ಅತಿತೂಕದ ರಾಕೆಟ್ ಇದಾಗಿದೆ. ಇದುವರೆಗಿನ ಅತಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದೆ. ಈ ಉಡಾವಣೆ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಹೊಸದೊಂದು ದಾಖಲೆ ಬರೆಯಲಿದ್ದು, ಭವಿಷ್ಯದಲ್ಲಿ 2-3 ಗಗನಯಾನಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ಯಬಲ್ಲದು. ‘300 ಕೋಟಿ ರೂ. ವೆಚ್ಚದ ಸಂಪೂರ್ಣ ಸ್ವದೇಶಿ ನಿರ್ವಿುತ ಜಿಎಸ್ಎಲ್ವಿಎಂಕೆ3 ಯಶಸ್ವಿಯಾಗಿ ಉಡಾವಣೆ ಮಾಡುವುದಕ್ಕೆ ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ’ ಎಂದು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್ಕುಮಾರ್ ಹೇಳಿದ್ದಾರೆ.
-ಏಜೆನ್ಸೀಸ್
-ಏಜೆನ್ಸೀಸ್
No comments:
Post a Comment