ನವದೆಹಲಿ: ಕಲ್ಲು ತೂರಾಟಗಾರರಿಂದ ತಪ್ಪಿಸಿಕೊಳ್ಳಲು ಸೇನಾ ಅಧಿಕಾರಿಯೊಬ್ಬರು ಮಾನವ ಗುರಾಣಿ ಬಳಸಿದ್ದರ ಕುರಿತಾದ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅನುಮೋದಿಸಿದ್ದಾರೆ.
ಕಾಶ್ಮೀರದಲ್ಲಿ ಕೆಟ್ಟ ಪರಿಸ್ಥಿತಿ ಎದುರಾಗಿದ್ದು, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ಸಂಪೂರ್ಣ ಬೆಂಬಲವಿದೆ ಎಂದು ವೆಂಕಯ್ಯನಾಯ್ಡು ಟ್ವೀಟ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಚಾಸಾರ ನಿಯಂತ್ರಣಕ್ಕೆ ಸೇನೆ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ಈ ಮಧ್ಯೆ ಕಲ್ಲು ತೂರಾಟಗಾರರನ್ನು ಹಿಮ್ಮೆಟ್ಟಿಸಲು ಸೇನಾ ಮೇಜರ್ ಲೀತುಲ್ ಗೊಗೊಯಿ ತಮ್ಮ ವಾಹನಕ್ಕೆ ಕಲ್ಲು ತೂರಾಟಗಾರನೊಬ್ಬನನ್ನು ಮಾನವ ಗುರಾಣಿಯನ್ನಾಗಿಸಿ, ಸಿಕ್ಕಿಸಿ, ರೌಂಡ್ಸ್ ಹೊಡೆಸಿದ್ದರು. ಅವರ ಈ ಮೇಜರ್ ಕಾರ್ಯಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತಾದರೂ, ಕೆಲವರು ವಿರೋಧಿಸಿದ್ದರು.
ಈ ಸಂಬಂಧ ಭೂಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ಅವರು ತಮ್ಮ ಯೋಧರ ಮೇಲೆ ದಾಳಿ ನಡೆಯುವಾಗ ”ನೀವು ಕೈಕಟ್ಟಿಕೊಂಡು ಸುಮ್ಮನಿರಿ. ಮುಂದೆ ಅನಾಹುತ ನಡೆದು, ನಿಮ್ಮ ಮೃತದೇಹವನ್ನು ಸಕಲ ಗೌರವಗಳೊಂದಿಗೆ ನಿಮ್ಮ ಮನೆಗೆ ಕಳುಹಿಸಿಕೊಡುತ್ತೇನೆ” ಎಂದು ಹೇಳಲು ಸಾಧ್ಯವೇ? ಅವರ ಆತ್ಮರಕ್ಷಣೆಯನ್ನು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಖಡಕ್ ಪ್ರತಿಕ್ರಿಯೆ ನೀಡಿದ್ದರು.
-ಏಜೆನ್ಸೀಸ್

No comments:
Post a Comment