ಅರಬ್ಬಿ ಸಮುದ್ರ ಹಾಗೂ ನಮ್ಮ ದೇಶದೊಳಗೆ ಎಲ್ಲೇ ಹೋಗುವುದಾದರೂ ಇನ್ನು ಮುಂದೆ ದಾರಿ ತಪ್ಪೀತೆಂಬ ಆತಂಕ ಬೇಕಿಲ್ಲ. ಹೌದು, ಸ್ವದೇಶಿ ನಿರ್ವಿುತ ಜಾಗತಿಕ ಸ್ಥಳಗುರುತಿಸುವಿಕೆ ವ್ಯವಸ್ಥೆ(ಜಿಪಿಎಸ್) ‘ನಾವಿಕ್’ನ ನೆರವು ಬರುವ ವರ್ಷವೇ ಭಾರತೀಯರಿಗೆ ಸಿಗಲಿದೆ. ಈಗಾಗಲೇ ಅಸ್ವದೇಶಿ ಜಿಪಿಎಸ್ ಕಾರ್ಯಾರಂಭಿಸಿದ್ದು, 2018ರ ಆರಂಭದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ಏನಿದು ಯೋಜನೆ?
ಐಆರ್ಎನ್ಎಸ್ಎಸ್ನ ಮಹತ್ವದ ಘಟ್ಟ ಕಳೆದ ವರ್ಷ ಏ.28ರಂದು ಪೂರ್ಣಗೊಂಡಿದ್ದು, ಏಳು ಉಪಗ್ರಹಗಳನ್ನು ಹಂತ ಹಂತವಾಗಿ ನಿಗದಿತ ಕಕ್ಷೆ ಸೇರಿಸುವ ಗುರಿಯೂ ಯಶಸ್ವಿಯಾಗಿದೆ. ಇಸ್ರೋ ಈ ಕೆಲಸವನ್ನು ಐಆರ್ಎನ್ಎಸ್ಎಸ್-1ಜಿ ಮೂಲಕ ಯಶಸ್ವಿಯಾಗಿ ನೆರವೇರಿಸಿದೆ. ಆ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನಾವಿಕ್(ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲೇಷನ್) ಹೆಸರನ್ನು ಇಟ್ಟಿದ್ದರು.
ತಪ್ಪಲಿದೆ ಅವಲಂಬನೆ
ಅಮೆರಿಕ ಜಿಪಿಎಸ್ ಪ್ರಾಜೆಕ್ಟನ್ನು 1973ರಲ್ಲಿ ಅಭಿವೃದ್ಧಿ ಪಡಿಸಿದ ಬಳಿಕ ದಶಕಗಳಿಂದ ಭಾರತ ಜಿಪಿಎಸ್ಗಾಗಿ ಅಮೆರಿಕವನ್ನೇ ಅವಲಂಬಿಸಿದೆ. ಆದಾಗ್ಯೂ, 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಅಮೆರಿಕ ಜಿಪಿಎಸ್ ನೆರವನ್ನು ನೀಡಲು ನಿರಾಕರಿಸಿತ್ತು. ಈ ನಿರಾಕರಣೆಯೇ ಸ್ವದೇಶಿ ಜಿಪಿಎಸ್ ಅಗತ್ಯವನ್ನು ಮನಗಾಣಿಸಿತು. ಇದರ ಪರಿಣಾಮವೇ ನಾವಿಕ್ ಉದಯವಾಗಿದೆ.
ಅಮೆರಿಕ ಡ/ಠ ಭಾರತ
ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳಿವೆ. ಇದು ಇಡೀ ಜಗತ್ತನ್ನೇ ವ್ಯಾಪಿಸುತ್ತದೆ. ಆದರೆ, ಭಾರತದ ನಾವಿಕ್ ಎಂಬ ಜಿಪಿಎಸ್ ವ್ಯವಸ್ಥೆ ಭಾರತ ಹಾಗೂ ಅರಬ್ಬಿ ಸಮುದ್ರದ ವ್ಯಾಪ್ತಿಗಷ್ಟೇ ಸೀಮಿತವಾಗಿದ್ದರೂ ಅಮೆರಿಕದ ವ್ಯವಸ್ಥೆಗಿಂತಲೂ ಹೆಚ್ಚು ನಿಖರವಾದುದಾಗಿದೆ. ನಾವಿಕ್ ಸ್ಥಳ ಸ್ಥಿರೀಕರಿಸುವಲ್ಲಿ 5 ಮೀಟರ್ನ ನಿಖರತೆ ತೋರಿದರೆ, ಜಿಪಿಎಸ್ 20-30 ಮೀಟರ್ ನಿಖರತೆ ತೋರುತ್ತದೆ.
ಜಿಪಿಎಸ್ ಅಗತ್ಯ/ವ್ಯಾಪ್ತಿ
ರಸ್ತೆ, ವಾಯು ಮತ್ತು ನೌಕಾಯಾನದ ಸಂದರ್ಭದಲ್ಲಿ ಮಾರ್ಗದರ್ಶನ ಪಡೆಯಲು ಸದ್ಯ ಅಮೆರಿಕದ ಜಿಪಿಎಸ್ ಸೌಲಭ್ಯವನ್ನು ಬಳಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇಸ್ರೊ ಯೋಜನೆ ಕೈಗೆತ್ತಿಕೊಂಡಿದೆ. ಉಪಗ್ರಹಗಳ ಸಂಕೇತಗಳು ಭಾರತಕ್ಕೆ ಮಾತ್ರವಲ್ಲ, ಸುತ್ತಲಿನ 1,500 ಕಿ.ಮೀ. ಪರಿಧಿಯಲ್ಲಿರುವ ಸಮೀಪದ ದೇಶಗಳಿಗೂ ಲಭ್ಯವಾಗಲಿವೆ.
ಯಾವ ದೇಶದ್ದು ಯಾವ ವ್ಯವಸ್ಥೆ
- ಅಮೆರಿಕ-ಜಿಪಿಎಸ್
- ರಷ್ಯಾ -ಜಿಎಲ್ಒಎನ್ಎಎಸ್ಎಸ್
- ಐರೋಪ್ಯ ಒಕ್ಕೂಟ – ಗೆಲಿಲಿಯೋ
- ಚೀನಾ – ಬೈಡೋ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ಅಭಿವೃದ್ಧಿ ಹಂತದಲ್ಲಿದೆ)
ಎರಡು ಸೇವೆ ಲಭ್ಯ
ಜಿಪಿಎಸ್ ಕಾರ್ಯಾರಂಭ ಮಾಡಿದ ಬಳಿಕ ಎರಡು ರೀತಿಯ- ಎಸ್ಪಿಎಸ್ ( ಸ್ಟ್ಯಾಂಡರ್ಡ್ ಪೊಜಿಷನಿಂಗ್ ಸರ್ವೀಸ್) ಹಾಗೂ ನಿರ್ಬಂಧಿತ ಸೇವೆ (ಆರ್ಎಸ್) ಸೇವೆ ಲಭ್ಯವಾಗಲಿದೆ. ಮೊದಲ ಸೇವೆಯು ಎಲ್ಲರಿಗೂ ಸಿಕ್ಕರೆ, ಎರಡನೆಯದು ಸರ್ಕಾರಕ್ಕೆ ಮಾತ್ರ.
No comments:
Post a Comment