ವಿಶ್ವಸಂಸ್ಥೆ: ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಈ ವರ್ಷ ಶೇ. 7.1ರಷ್ಟಾಗುವ ನಿರೀಕ್ಷೆಯಿದ್ದು, 2018ರಲ್ಲಿ ಶೇ. 7.5ರ ಗಡಿ ಸಮೀಪಿಸಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಇದೇ ವೇಳೆಗೆ, ಸರ್ಕಾರಿ ರಂಗದ ಬ್ಯಾಂಕ್ಗಳಲ್ಲಿ ‘ಕೆಟ್ಟ ಸಾಲ’ಗಳ ಪ್ರಮಾಣ ಹೆಚ್ಚುವುದರಿಂದ ಆಗುವ ತೊಂದರೆಗಳು ಅಧಿಕಗೊಳ್ಳುವ ಅಪಾಯವೂ ಇದೆ ಎಂದು ವರದಿ ಎಚ್ಚರಿಸಿದೆ.
ಏಷ್ಯಾ ಮತ್ತು ಪೆಸಿಫಿಕ್ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗವು ‘ದಿ ಇಕನಾಮಿಕ್ ಅಂಡ್ ಸೋಷಿಯಲ್ ಸರ್ವೆ ಆಫ್ ಏಷ್ಯಾ ಆಂಡ್ ಪೆಸಿಫಿಕ್ 2017’ ವಾರ್ಷಿಕ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ನೋಟು ಅಮಾನ್ಯೀಕರಣದ ಬಳಿಕ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಯಾಗಿರುವುದು ಮತ್ತು ಸಾರ್ವಜನಿಕ ಬಳಕೆ ಹಾಗೂ ಮೂಲಸೌಕರ್ಯ ವೆಚ್ಚ ಹೆಚ್ಚಿರುವ ಪರಿಣಾಮ ಭಾರತದಲ್ಲಿ ಆರ್ಥಿಕ ಪ್ರಗತಿ ಶೇ. 7.1ರಲ್ಲಿ ಸ್ಥಿರಗೊಳ್ಳಲಿದೆ ಎಂದು ವರದಿ ಹೇಳಿದೆ. ಹಣದುಬ್ಬರ 2017 ಮತ್ತು 2018ರಲ್ಲಿ ಶೇ. 5.3ರಿಂದ ಶೇ. 5.5ಕ್ಕೆ ತಲುಪಲಿದೆ. ಇದು ಅಧಿಕೃತ ಗುರಿ ಶೇ. 4.5ರಿಂದ ಶೇ. 5ಕ್ಕಿಂತ ಸ್ವಲ್ಪ ಹೆಚ್ಚು.
-ಏಜೆನ್ಸೀಸ್
No comments:
Post a Comment