ನವದೆಹಲಿ: ಒಂದೇ ಪುಟದ ಅತ್ಯಂತ ಸರಳ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಅರ್ಜಿ ನಮೂನೆಯನ್ನು ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ. ನೋಟು ನಿಷೇಧದ ಬಳಿಕ ತಮ್ಮ ಖಾತೆಗೆ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತ ಜಮೆ ಮಾಡಿದ್ದರೆ ಆ ಬಗ್ಗೆ ಕಡ್ಡಾಯವಾಗಿ ವಿವರಣೆ ನೀಡಬೇಕು ಮತ್ತು ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು.
ಈ ಹಿಂದೆ 7 ಪುಟಗಳ ಆದಾಯ ತೆರಿಗೆ ರಿಟರ್ನ್ ಅರ್ಜಿ ಭರ್ತಿ ಮಾಡಬೇಕಿತ್ತು. ಪ್ರಸ್ತುತ ಬಿಡುಗಡೆಗೊಂಡಿರುವ ಫಾಮ್ರ್ 1(ಸಹಜ್)ನಲ್ಲಿ 50 ಲಕ್ಷ ರೂ. ವರೆಗೆ ವೇತನದ ಆದಾಯವುಳ್ಳ ವ್ಯಕ್ತಿ ಸ್ವತಃ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಐಟಿಆರ್ 1 ಅರ್ಜಿಯನ್ನು ವೇತನ ಪಡೆಯುವ ನೌಕರರು ಮತ್ತು ಉದ್ಯಮಕ್ಕೆ ಹೊರತಾದ ಇತರ ನಾಗರಿಕರು ಸಲ್ಲಿಸಬೇಕಿತ್ತು. ಇನ್ನು ಮುಂದೆ ಈ ಎರಡು ವರ್ಗದ ಮಂದಿ ಆಧಾರ್ ಮತ್ತು ಪಾನ್ ಸಂಖ್ಯೆಗಳನ್ನು ನೀಡಬೇಕು.
ಪಾನ್ ಹೊಂದಿರುವ 29 ಕೋಟಿ ಜನರ ಪೈಕಿ ಕೇವಲ 6 ಕೋಟಿ ಜನರು ಮಾತ್ರವೇ ಈಗ ಸರಕಾರಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ. ಐಟಿಆರ್ 1ರ ಇ-ಫೈಲಿಂಗ್ಅನ್ನು ಏಪ್ರಿಲ್ 1ರಿಂದಲೇ ಮಾಡಬಹುದು. ಅಂತೆಯೇ ಜುಲೈ 31ರ ವರೆಗಿನ ಗಡುವಿನ ತನಕ ಐಟಿಆರ್ಗಳನ್ನು ಸಲ್ಲಿಸುವುದಕ್ಕೆ ಅವಕಾಶವಿದೆ.
-ಏಜೆನ್ಸೀಸ್
No comments:
Post a Comment