ಈ ಮಾತುಕತೆಯು ಪರಸ್ಪರ ಸ್ನೇಹತ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಒಕ್ಕೂಟದ ಪ್ರತೀಕವಾಗಿರಲಿದೆ. ನರೇಂದ್ರ ಮೋದಿಯವರು ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮದ್ ಅಬ್ಬಾಸ್‌ರನ್ನು ನವದೆಹಲಿಯಲ್ಲಿರುವ ಹೈದರಾಬಾದ್ ಹೊಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ.
ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಸಂಬಂಧ, ಪ್ರಾದೇಶಿಕ ವಿಚಾರ ಮತ್ತು ಅಂತರರಾಷ್ಟ್ರೀಯ ಶಾಂತಿ ಕುರಿತು ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಮಾತುಕತೆ ನಡೆಸಿದ್ದಾರೆ.
ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವುದು ಮಾತುಕತೆಯ ಪ್ರಮುಖ ಉದ್ದೇಶವಾಗಿತ್ತು ಎನ್ನಲಾಗಿದೆ.
‘ಈ ಮಾತುಕತೆಯು ಪರಸ್ಪರ ಸ್ನೇಹದ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಒಕ್ಕೂಟದ ಪ್ರತೀಕವಾಗಿರಲಿದೆ. ನರೇಂದ್ರ ಮೋದಿಯವರು ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮದ್ ಅಬ್ಬಾಸ್‌ರನ್ನು ನವದೆಹಲಿಯಲ್ಲಿರುವ ಹೈದರಾಬಾದ್ ಹೊಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲೇ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಬ್ಬಾಸ್ ಅವರನ್ನು ಉದ್ದೇಶಿಸಿ, ‘ಪ್ಯಾಲೆಸ್ಟೀನ್ ವಿಚಾರಗಳಲ್ಲಿ ಭಾರತದ ಸಹಕಾರ ಯಾವಾಗಲು ಇರಲಿದೆ’ ಎಂದು ಹೇಳಿದ್ದರು.
ನಾಲ್ಕುದಿನದ ಭಾರತ ಭೇಟಿಗಾಗಿ ಭಾನುವಾರವೇ ಭಾರತಕ್ಕೆ ಆಗಮಿಸಿರುವ ಅಬ್ಬಾಸ್‌ರನ್ನು ಮಂಗಳವಾರ ಬೆಳಿಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದರು.
ಜುಲೈನಲ್ಲಿ ಮೋದಿ ಅವರು ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ಅಬ್ಬಾಸ್ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ಭಾರತ ತನ್ನ ರಾಜಕೀಯ ಬೆಂಬಲ ಸದಾ ಪ್ಯಾಲೆಸ್ಟೀನ್ ಗೆ ಇರಲಿದೆ ಎಂದು ಹೇಳಿದೆ.

No comments:
Post a Comment