ನವದೆಹಲಿ: ಉದಯೋನ್ಮುಖ ಗಾಲ್ಪರ್, ಕರ್ನಾಟಕದ ಅದಿತಿ ಅಶೋಕ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಭಾರತೀಯ ಗಾಲ್ಫ್ ಯೂನಿಯನ್ ಶಿಫಾರಸು ಮಾಡಿದೆ. ಹೀರೋ ಇಂಡಿಯಾ ಓಪನ್ ಚಾಂಪಿಯನ್ಸ್ನ ಮಹಿಳಾ ವಿಭಾಗದ ಚಾಂಪಿಯನ್ ಆಗಿರುವ ಅದಿತಿ ರಿಯೋ ಒಲಿಂಪಿಕ್ಸ್ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದರು. ಹೀರೋ ಇಂಡಿಯಾ ಓಪನ್ ಚಾಂಪಿಯನ್ಸ್ನ ಪುರುಷರ ವಿಭಾಗದ ಚಾಂಪಿಯನ್ ಎಸ್ಎಸ್ಪಿ ಚೌರಾಸಿಯಾ ಹೆಸರನ್ನೂ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಗಾಲ್ಫ್ ಕೋಚ್ ವಿಜಯ್ ಡಿವೇಚಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಹಾಗೂ ಮುಖೇಶ್ ಕುಮಾರ್ ಹೆಸರನ್ನು ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಗಾಲ್ಫ್ ಯೂನಿಯನ್ ಶಿಫಾರಸು ಮಾಡಿದೆ.
ಬೆಮ್ ಬೆಮ್, ಜೆಜೆ ಹೆಸರು ಶಿಫಾರಸು: ಹಿರಿಯ ಆಟಗಾರರಾದ ಓಯಿನಾಮ್ ಬೆಮ್ ಬೆಮ್ ದೇವಿ, ಜೆಜೆ ಲಾಲ್ಪೆಕ್ಲೂವಾ ಮತ್ತು ಗುರ್ಪ್ರೀತ್ ಸಾಂಧು ಹೆಸರುಗಳನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 36 ವರ್ಷದ ಬೆಮ್ ಬೆಮ್ ದೇವಿ ಕಳೆದ ವರ್ಷದ ದಕ್ಷಿಣ-ಏಷ್ಯಾ ಗೇಮ್ಸ್ ಬಳಿಕ ವೃತ್ತಿಜೀವನಕ್ಕೆ ವಿದಾಯ ಘೊಷಿಸಿದ್ದರು. 26 ವರ್ಷದ ಗೋಲ್ಕೀಪರ್ ಗುರ್ಪ್ರೀತ್ ಸಂಧು ಯುರೋಪ್ನಲ್ಲಿ ಆಡಿದ ಮೊದಲ ಭಾರತೀಯ ಎನಿಸಿದ್ದಾರೆ.
-ಪಿಟಿಐ
No comments:
Post a Comment