ಲಂಡನ್: ಇಂಗ್ಲೆಂಡಿನ ಸಂಸದೀಯ ಚುನಾವಣೆಯಲ್ಲಿ ಲೇಬರ್ ಪಾರ್ಟಿಯಿಂದ ಲಂಡನ್ನ ಪುಟ್ನೀ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕರ್ನಾಟಕ ಮೂಲದ ಎನ್ಆರ್ಐ ಡಾ. ನೀರಜ್ ಪಾಟೀಲ್ ಅವರ ಚುನಾವಣಾ ಪ್ರಚಾರಕ್ಕೆ ಕ್ರಿಯೊಡಾನ್ ಉತ್ತರ ಕ್ಷೇತ್ರದ ಸಂಸದ ಮತ್ತು ಶ್ಯಾಡೋ ಸ್ಥಳೀಯ ಸರ್ಕಾರದ ಸಚಿವ ಸ್ಟೀವ್ ರೀಡ್ ಅಲ್ಲಿನ ಬೆಂಗಳೂರು ಸ್ಟ್ರೀಟ್ ಪ್ರದೇಶದಿಂದ ಚಾಲನೆ ನೀಡಿದ್ದಾರೆ.
ಡಾ. ನೀರಜ್ ಪಾಟೀಲ್ ಅವರು ಅಪಘಾತ ಮತ್ತು ತುರ್ತು ಚಿಕಿತ್ಸಾ ವೈದ್ಯರಾಗಿದ್ದು, ಲ್ಯಾಂಬೆತ್ನ ಮಾಜಿ ಮೇಯರ್ ಕೂಡ ಆಗಿದ್ದಾರೆ. ಜೂನ್ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿ, ಬ್ರಿಟನ್ ಶಿಕ್ಷಣ ಸಚಿವ ಜಸ್ಟಿನ್ ಗ್ರೀನಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.
ಪುಟ್ನೀ, ಬಟ್ಟರ್ಸೀ ಮತ್ತು ಟೂಟಿಂಗ್ ಎಂಬ ಮೂರು ಸಂಸದೀಯ ಕ್ಷೇತ್ರಗಳಿರುವ ಲಂಡನ್ ಬೋರೋಗ್ ಆಫ್ ವಾಂಡ್ಸ್ವರ್ತ್ನಲ್ಲಿ ಬೆಂಗಳೂರು ಸ್ಟ್ರೀಟ್ ಪ್ರದೇಶವಿದೆ. 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತು ಆಡಳಿತದ ಸಮಯದಲ್ಲಿ ಬೆಂಗಳೂರು ರೆಜಿಮೆಂಟ್ಗೆ ಅಲ್ಲಿನ ಕೇಂದ್ರದಲ್ಲಿ ನೇಮಕಾತಿ ನಡೆಸುತ್ತಿದ್ದರಿಂದ ಆ ಪ್ರದೇಶಕ್ಕೆ ಬೆಂಗಳೂರು ಸ್ಟ್ರೀಟ್ ಎಂಬ ಹೆಸರು ಬಂದಿದೆ. -ಏಜೆನ್ಸೀಸ್

No comments:
Post a Comment