Showing posts with label May GK. Show all posts
Showing posts with label May GK. Show all posts

Monday, May 29, 2017

ಪ್ರಚಲಿತ ವಿದ್ಯಮಾನ : ಮೇ 2017 : ಸೂರ್ಯನ ಸಮೀಪಕ್ಕೆ ನಾಸಾ ನೌಕೆ

ವಾಷಿಂಗ್ಟನ್: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂಚೂಣಿ ಯಲ್ಲಿರುವ ಅಮೆರಿಕದ ನಾಸಾ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. 2018ರಲ್ಲಿ ಸೋಲಾರ್ ಪ್ರೋಬ್ ಪ್ಲಸ್ ಹೆಸರಿನ ಅಂತರಿಕ್ಷನೌಕೆಯನ್ನು ಸೂರ್ಯನ ಸಮೀಪಕ್ಕೆ ಕಳುಹಿಸಲಿದೆ. ಈ ಯೋಜನೆ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಾಸಾ ಮೇ 31ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸೂರ್ಯನ ಹೊರ ವಾತಾವರಣ ಕರೋನಾ, ಸೂರ್ಯನ ಮೇಲ್ಮೈ (ಫೋಟೋಸ್ಪಿಯರ್)ಗಿಂತ ನೂರು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಈ ವೈಚಿತ್ರ್ಯ ಹಿಂದಿನ ಕಾರಣ ಹುಡುಕುವುದು ಈ ಯೋಜನೆಯ ಪ್ರಮುಖ ಉದ್ದೇಶ ಗಳಲ್ಲೊಂದಾಗಿದೆ. ಸೋಲಾರ್ ಪ್ರೋಬ್ ಪ್ಲಸ್ ಸೂರ್ಯನಿಗೆ 64 ಲಕ್ಷ ಕಿ.ಮೀ ಅಂತರದಲ್ಲಿ ಸಂಚರಿಸಲಿದೆ. ಈ ಮೂಲಕ ಸೂರ್ಯನಿಗೆ ಸಮೀಪದಲ್ಲಿರುವ ಬುಧಗ್ರಹಕ್ಕಿಂತಲೂ ನೌಕೆ 8 ಪಟ್ಟು ಹೆಚ್ಚು ಹತ್ತಿರ ತೆರಳಿದಂತಾಗಲಿದೆ. ಇದರಿಂದ ಸೂರ್ಯನ ಬಗ್ಗೆ ಈವರೆಗೆ ಬಹಿರಂಗಗೊಳ್ಳದ ಮಾಹಿತಿಗಳು ಲಭ್ಯವಾಗಲಿದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಆಸ್ಟ್ರೋ ಫಿಸಿಕ್ಸ್ ಮತ್ತು ಪ್ಲಾನೆಟರಿ ಸೈನ್ಸ್ ಕೇಂದ್ರದ ನಿರ್ದೇಶಕ ಜೋನಾಥನ್ ಲೂನಿನ್ ಹೇಳಿದ್ದಾರೆ. -ಏಜೆನ್ಸೀಸ್
ಯಾವ ಮಾಹಿತಿಗಳು ಲಭ್ಯ?
ವಿಶ್ವದ ಸಕಲ ಜೀವಿಗಳಿಗೆ ಆಧಾರವಾಗಿರುವ ಸೂರ್ಯನ ಬಗ್ಗೆ ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ಅಧ್ಯಯನ ಸಹಕಾರಿಯಾಗಲಿದೆ. ಸೂರ್ಯನಿಂದ ಬಿಸಿಕಣಗಳು ಗಂಟೆಗೆ 10 ಲಕ್ಷ ಮೈಲು ವೇಗದಲ್ಲಿ ಎಲ್ಲ ದಿಕ್ಕುಗಳಿಗೂ ಚಲಿಸುತ್ತವೆ. ಆದರೆ ಇದು ತನ್ನ ವೇಗವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತದೆ ಎಂಬುದು ಪ್ರಶ್ನೆಯಾಗೇ ಉಳಿದಿದ್ದು ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ. ಸೂರ್ಯನಿಂದ ಹೊರ ಚಿಮ್ಮುವ ಇಲೆಕ್ಟ್ರಾನ್ ಹಾಗೂ ಪ್ರೋಟಾನುಗಳ ಧಾರೆ ಭೂಮಿಯ ಮೇಲೆ ಭೂಕಾಂತೀಯ ಮಾರುತ ಹಾಗೂ ಅರೋರಾದಂಥ ಘಟನೆಗೆ ಕಾರಣವಾಗುತ್ತದೆ. ಧೂಮಕೇತುಗಳ ಬಾಲ ಸದಾಕಾಲ ಸೂರ್ಯನ ವಿರುದ್ಧ ದಿಕ್ಕಿಗೇ ತೋರುವುದಕ್ಕೂ ಸೌರಮಾರುತಗಳೇ ಕಾರಣ. ಸೂರ್ಯ ಹಾಗೂ ಭೂಮಿ ನಡುವಣ ಸಂಬಂಧ, ಜೀವ ವೈವಿಧ್ಯದ ಮೇಲೆ ಸೂರ್ಯನ ಪ್ರಭಾವದ ಬಗೆಗಿನ ಮಾಹಿತಿ ಈ ನೌಕೆಯಿಂದ ಲಭ್ಯವಾಗಲಿದೆ.
ನೌಕೆಗೆ ವಿಶೇಷ ರಕ್ಷಣೆ
ಸೂರ್ಯನ ವಾತಾವರಣ ವಿಪರೀತ ಬಿಸಿ ಇರುವುದರಿಂದ ಅಂತರಿಕ್ಷ ವಾಹನ ಅದನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಶಾಖ ತಾಳಲಾರದೆ ಸುಟ್ಟು ಹೋಗುತ್ತದೆ. ಆದರೆ ಈ ಅಂತರಿಕ್ಷ ನೌಕೆಗೆ ಹಿಂದೆಂದೂ ಬಳಕೆ ಮಾಡಿರದ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಈ ನೌಕೆಯನ್ನು ಶಾಖದಿಂದ ರಕ್ಷಿಸಲು 11.4 ಸೆಂಟಿ ಮೀಟರ್​ನ ಕಾರ್ಬನ್ ಕಾಂಪೋಸಿಟ್ ಹೀಟ್ ಶೀಲ್ಡ್ ಸುರಕ್ಷತಾ ಕವಚ ಸಿದ್ಧಪಡಿಸಲಾಗಿದೆ. ಇದು 1,370 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಡೆದುಕೊಳ್ಳಲಿದೆ. ಜತೆಗೆ ವಿಕಿರಣಗಳನ್ನು ಸಹಿಸಬಲ್ಲದಾಗಿದೆ.
ಉಡಾವಣೆ ದಿನಾಂಕ 2018ರ ಜುಲೈ 31- ಆಗಸ್ಟ್ 19 ನಡುವೆ
ಸೂರ್ಯನ ಸಮೀಪಕ್ಕೆ ತಲುಪುವ ನಿರೀಕ್ಷಿತ ದಿನಾಂಕ 2024 ಡಿಸೆಂಬರ್ 19
24 ಸುತ್ತು ಈ ನೌಕೆ ಸೂರ್ಯ ಸುತ್ತ 24 ಬಾರಿ ಸುತ್ತಲಿದೆ. ಪ್ರತಿ ಸುತ್ತಿನ ನಂತರವೂ ನೌಕೆ ಸೂರ್ಯನಿಗೆ ಹತ್ತಿರವಾಗುತ್ತಾ ಹೋಗುತ್ತದೆ.

Tuesday, May 23, 2017

ಪ್ರಚಲಿತ ವಿದ್ಯಮಾನ : 23 ಮೇ 2017 : ವಿಶ್ವಕಪ್​ನಲ್ಲಿ ಭಾರತಕ್ಕೆ ಸ್ವರ್ಣ

ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಮೊದಲ ಚಿನ್ನ

ಶಾಂಘೈ: ಆರ್ಚರಿ ವಿಶ್ವಕಪ್ ಚರಣವನ್ನು ಭಾರತ ತಂಡ ಸ್ವರ್ಣ ಪದಕ ಗೆಲ್ಲುವ ಮೂಲಕ ಆರಂಭಿಸಿದೆ. ಪುರುಷರ ಕಾಂಪೌಂಡ್ ಆರ್ಚರಿ ತಂಡ ಶನಿವಾರ ನಡೆದ ವಿಶ್ವಕಪ್ ಮೊದಲ ಚರಣದ ಫೈನಲ್​ನಲ್ಲಿ ಕೊಲಂಬಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಜಯಿಸಿತು.

ಇದು ವಿಶ್ವಕಪ್​ನ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದೆ. ವಿಜೇತ ತಂಡದ ಅಭಿಷೇಕ್ ವರ್ಮ, ಚಿನ್ನ ರಾಜು ಶ್ರೀಧರ್ ಹಾಗೂ ಅಮನ್​ಜೀತ್ ಸಿಂಗ್ 226-221ರಿಂದ ಕೊಲಂಬಿಯಾದ ಕ್ಯಾಮಿಲೊ ಆಂಡ್ರೆಸ್ ಕಾರ್ಡೆನಾ, ಜೋಸ್ ಕಾಲೋಸ್ ಒಸ್ಪಿನಾ ಹಾಗೂ ಡೇನಿಯಲ್ ಮುನೊಜ್​ರನ್ನು ಸೋಲಿಸಿದರು. ಭಾರತೀಯರು ಮೊದಲ ಸೆಟ್​ನಲ್ಲಿ 58-57ರ ಭರ್ಜರಿ ಮುನ್ನಡೆಯೊಂದಿಗೆ ಮೇಲುಗೈ ಕಂಡರು. ವರ್ಮ ಎರಡು ಬಾರಿ ಪೂರ್ಣ 10 ಅಂಕ ಸಂಪಾದಿಸುವ ಮೂಲಕ ಭಾರತಕ್ಕೆ 116-113ರ ಮುನ್ನಡೆ ಒದಗಿಸಿದರು. 3ನೇ ಸೆಟ್​ನಲ್ಲಿ ಕೊಲಂಬಿಯಾ 52-52ರ ಸಮಬಲದ ಹೋರಾಟದೊಂದಿಗೆ ಪ್ರತಿರೋಧ ನೀಡಿದರೂ 4 ಹಾಗೂ ನಿರ್ಣಾಯಕ ಸೆಟ್​ನಲ್ಲಿ ಭಾರತ 58-56 ಮುನ್ನಡೆಯೊಂದಿಗೆ ಗೆಲುವಿನ ಸಂಭ್ರಮಾಚರಿಸಿತು. ಅಭಿಷೇಕ್ ವರ್ಮ 2015ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್​ನ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ಪೋಲೆಂಡ್​ನಲ್ಲಿ ನಡೆದ ವಿಶ್ವಕಪ್​ನ ಅದೇ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಮಿಶ್ರ ತಂಡ ವಿಭಾಗದಲ್ಲಿ ವರ್ಮ ಕಂಚು ಪದಕ ಗೆಲ್ಲುವಲ್ಲಿ ವಿಫಲಗೊಂಡರು. ಪ್ಲೇ ಆಫ್ ಪಂದ್ಯದಲ್ಲಿ ವರ್ಮ ಮತ್ತು ಜ್ಯೋತಿ ಸುರೇಖಾ ಜೋಡಿ 151-153ರಿಂದ ಅಮೆರಿಕದ ಜೋಡಿಗೆ ಶರಣಾಯಿತು.

ಪ್ರಚಲಿತ ವಿದ್ಯಮಾನ : 23 ಮೇ 2017 : ಷರಿಯತ್ ಪ್ರಕಾರ ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕಾಗಿ ಒಂದೇ ಸಲ ತ್ರಿವಳಿ ತಲಾಕ್ ಮೊರೆ ಹೋಗದಂತೆ ಪುರುಷರಿಗೆ ಬುದ್ಧಿವಾದ ಹೇಳಲು ಮೌಲ್ವಿಗಳಿಗೆ ಸೂಚಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ಮಂಡಳಿ, ತ್ರಿವಳಿ ತಲಾಕ್ ವಿಚಾರದಲ್ಲಿ ಮೌಲ್ವಿಗಳಿಗೆ ಮಾರ್ಗದರ್ಶಿ ಸೂತ್ರಗಳ ಸುತ್ತೋಲೆಯನ್ನು ಕಳುಹಿಸಲಾಗುವುದು. ಇದರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಪತ್ನಿಗೆ ಯಾವುದೇ ಕಾರಣಕ್ಕೂ ಒಂದೇ ಬಾರಿಗೆ ತ್ರಿವಳಿ ತಲಾಕ್ ನೀಡಬಾರದು ಹಾಗೂ ವೈವಾಹಿಕ ಜೀವನ ಅಂತ್ಯಗೊಳಿಸಲು ಈ ಪದ್ಧತಿಯ ಮೊರೆ ಹೋಗಬಾರದು. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾನೂನು ಬದ್ಧವಾಗಷ್ಟೇ ವಿಚ್ಛೇದನ ಪಡೆಯಬೇಕೆಂದು ಪುರುಷರಿಗೆ ಮೌಲ್ವಿಗಳು ಬುದ್ಧಿವಾದ ಹೇಳಬೇಕು.

ವೈವಾಹಿಕ ಪದ್ಧತಿಯಲ್ಲಿ ಪತಿ-ಪತ್ನಿಯರಿಬ್ಬರಿಗೂ ವಿಚ್ಛೇದನ ಕೋರುವುದಕ್ಕೆ ಅವಕಾಶ ಕಲ್ಪಿಸುವಂತೆ ಮೌಲಿಗಳಿಗೆ ಸೂಚಿಸಲಾಗುವುದು ಎಂದಿರುವ ಮಂಡಳಿ, ಪದ್ಧತಿಯನ್ನು ನಿಷೇಧಿಸುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ಷರಿಯತ್ ಪ್ರಕಾರ, ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿಯಾಗಿದ್ದು, ಅದರಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಆಗ ಮುಖ್ಯ ನ್ಯಾ. ಜೆ.ಎಸ್. ಖೆಹರ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ದೇವರಿಗೆ ಅನಪೇಕ್ಷಿತವಾದ ಪದ್ಧತಿ, ವೈಯಕ್ತಿಕ ಕಾನೂನಿನಲ್ಲಿ ಮಾತ್ರ ಹೇಗೆ ಸಿಂಧುವಾಗುತ್ತದೆ ಎಂದು ಪ್ರಶ್ನಿಸಿತು. ಆಗ ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್ ಅವರು, ತಲಾಕ್ ಪದ್ಧತಿ ಕುರಾನ್​ನಲ್ಲಿ ಮೊದಲೇ ಉಲ್ಲೇಖವಾಗಿರಲಿಲ್ಲ. ಅದನ್ನು ನಂತರ ಸೇರಿಸಲಾಗಿದೆ ಎಂದರು.

ತ್ರಿವಳಿ ತಲಾಕ್ ಪದ್ಧತಿಯ ಔಚಿತ್ಯದ ಕುರಿತು ಹಲವು ಸಂಘಟನೆಗಳು ಹಾಗೂ ಮುಸ್ಲಿಂ ಮಹಿಳೆಯರು ವೈಯಕ್ತಿಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸಾಂವಿದಾನಿಕ ಪೀಠ, ಮೇ 18ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ರಾಜಿ ಸಂಧಾನ ಅಗತ್ಯ: ಮುಸ್ಲಿಂ ಧರ್ಮದ ಪ್ರಕಾರ, ತ್ರಿವಳಿ ತಲಾಕ್​ಗೆ ಅವಕಾಶವಿಲ್ಲ. ಪತಿ- ಪತ್ನಿ ತಮ್ಮ ವೈಮನಸ್ಯವನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಷರಿಯತ್ ಪ್ರಕಾರ, ಅಕಾರಣವಾಗಿ ವಿಚ್ಛೇದನ ಇಲ್ಲವೇ ಒಂದೇ ಬಾರಿಗೆ ಮೌಖಿಕ ವಿಚ್ಛೇದನ ನೀಡುವುದು ಸರಿಯಾದ ಕ್ರಮವಲ್ಲ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ ಎಂದು ಮಂಡಳಿ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಸಾಮುದಾಯಿಕ ಜಾಗೃತಿಗೆ ಕ್ರಮ: ತ್ರಿವಳಿ ತಲಾಕ್ ಪದ್ಧತಿ ವಿರುದ್ಧ ಬೃಹತ್ ಪ್ರಮಾಣದ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಕೈಗೊಂಡು ಜನರು ತೀರಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ವಿಚ್ಛೇದನದ ಮೊರೆ ಹೋಗಬೇಕು. ಆದರೆ, ಅದಕ್ಕಾಗಿ ಸಾಮಾಜಿಕ ಜಾಲತಾಣಗಳು, ವೆಬ್​ಸೈಟ್​ಗಳು, ಇಮಾಮ್ ಹಾಗೂ ಮಸೀದಿಯಲ್ಲಿನ ಭಾಷಣಕಾರರ ನೆರವು ಪಡೆದು ಎಲ್ಲ ವರ್ಗದ ಮುಸ್ಲಿಂ ಸಮುದಾಯಕ್ಕೆ ಈ ಸಂದೇಶ ತಲುಪಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಪ್ರಚಲಿತ ವಿದ್ಯಮಾನ : 23 ಮೇ 2017 : ಹಳಿ ಮೇಲಿನ ವಿಮಾನ!

ಮುಂಬೈ: ದೇಶದ ಮೊದಲ ಐಷಾರಾಮಿ ರೈಲು ತೇಜಸ್ ಎಕ್ಸ್​ಪ್ರೆಸ್​ಗೆ ಮುಂಬೈನಲ್ಲಿ ಸೋಮವಾರ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದರು. ಈ ರೈಲು ಮುಂಬೈ-ಗೋವಾ ನಡುವೆ ತ್ವರಿತ ಸಂಪರ್ಕ ಸಾಧನವಾಗಿ ಕಾರ್ಯನಿರ್ವಹಿಸಲಿದೆ.
ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ತೇಜಸ್ ಎಕ್ಸ್​ಪ್ರೆಸ್ ಪ್ರಥಮ ಐಷಾರಾಮಿ ರೈಲಾಗಿದೆ. ಇದರಲ್ಲಿ ಮಾಹಿತಿ, ಮನರಂಜನೆಯ ಜತೆಗೆ ವೈಫೈ, ಸಿಸಿ ಕ್ಯಾಮರಾ, ಅಗ್ನಿ ಹಾಗೂ ಹೊಗೆ ಪತ್ತೆ ವ್ಯವಸ್ಥೆ, ಟೀ, ಕಾಫಿ ಪೂರೈಸುವ ಯಂತ್ರಗಳು ಸೇರಿ ಹಲವು ಆಧುನಿಕ ಸೌಲಭ್ಯ ಲಭ್ಯವಿವೆ.
ಸಾಮರ್ಥ್ಯವೇನು?
ತೇಜಸ್ ಎಕ್ಸ್​ಪ್ರೆಸ್​ನಲ್ಲಿ 56 ಸೀಟುಗಳ ಒಂದು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಹಾಗೂ ತಲಾ 78 ಸೀಟು ಸಾಮರ್ಥ್ಯವುಳ್ಳ 12 ಎಸಿ ಬೋಗಿಗಳಿವೆ. ಎಕ್ಸಿಕ್ಯೂಟಿವ್ ಕ್ಲಾಸ್​ಗೆ ಆಹಾರ ಸಹಿತ 2,680 ರೂ. ಹಾಗೂ ಆಹಾರರಹಿತ 2,525 ರೂ. ದರ ನಿಗದಿಪಡಿಸಲಾಗಿದೆ. ಎಸಿ ಬೋಗಿಗೆ ಆಹಾರ ಸಮೇತ 1,280 ರೂ. ಹಾಗೂ ಆಹಾರರಹಿತ ಟಿಕೆಟ್​ಗೆ 1,155 ರೂ. ದರ ನಿಗದಿಯಾಗಿದೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ಆಹಾರ ನಿರಾಕರಿಸಿದವರೂ ನಂತರ, ರೈಲಿನಲ್ಲಿ 50 ರೂ. ಪಾವತಿಸಿ ಆಹಾರ ಸೇವೆ ಪಡೆಯಬಹುದಾಗಿದೆ.

ಪ್ರಚಲಿತ ವಿದ್ಯಮಾನ : 23 ಮೇ 2017 : ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ಪರ ಮೋದಿ ಬ್ಯಾಟಿಂಗ್

ಅಹಮದಾಬಾದ್: ಏಷ್ಯಾದಲ್ಲಿ ಚೀನಾದ ಪ್ರಭುತ್ವಕ್ಕೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ಸಂಬಂಧ ಬೆಸೆಯಲು ‘ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್’ ಯೋಜನೆಯನ್ನು ಅನುಷ್ಠಾನಗೊಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್​ನ 52ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ‘ಒನ್ ಬೆಲ್ಟ್, ಒನ್ ರೋಡ್’ ಆರ್ಥಿಕ ಕಾರಿಡಾರ್ ರೂಪಿಸಲು ಚೀನಾ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ನಾನು ಜಪಾನ್​ಗೆ ತೆರಳಿದ್ದ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಶೀಂಜೋ ಅಬೆ ಅವರೊಂದಿಗೆ ಏಷ್ಯಾ ಮತ್ತು ಆಫ್ರಿಕಾ ನಡುವೆ ಅಭಿವೃದ್ಧಿ ಕಾರಿಡಾರ್ ರೂಪಿಸುವ ಮಹತ್ವದ ಕುರಿತು ಚರ್ಚೆ ನಡೆಸಿದ್ದೆ. ಭಾರತ ಮತ್ತು ಜಪಾನ್ ಸಂಶೋಧನಾ ಸಂಸ್ಥೆಗಳು ಈಗಾಗಲೇ ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ರೂಪಿಸುವ ಸಂಬಂಧ ವರದಿ ಸಿದ್ದಪಡಿಸಿದ್ದು, ಶೀಘ್ರ ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಪ್ರಾರಂಭಿಸಲಾಗುವುದು. ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ರಾಷ್ಟ್ರಗಳು ಕೌಶಲ್ಯ ವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ, ಉತ್ಪಾದನೆ ಮತ್ತು ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಆಫ್ರಿಕಾ ರಾಷ್ಟ್ರಗಳಿಗೆ ನೆರವು ನೀಡಲಿದೆ ಎಂದು ಮೋದಿ ತಿಳಿಸಿದರು.

ಕಳೆದ 20 ವರ್ಷಗಳಲ್ಲಿ ಆಫ್ರಿಕಾ ರಾಷ್ಟ್ರಗಳಲ್ಲಿ ಭಾರತ ಸುಮಾರು 54 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. 2014ರಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಫ್ರಿಕಾ ದೇಶಗಳೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಆರ್ಥಿಕ ಸಂಬಂಧವನ್ನು ವೃದ್ಧಿಗೊಳಿಸಲು ಒತ್ತು ನೀಡಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.

Monday, May 15, 2017

ಪ್ರಚಲಿತ ವಿದ್ಯಮಾನ : 16 ಮೇ 2017 : ಕುಲಭೂಷಣ್​ ಗಲ್ಲು ಶಿಕ್ಷೆ- ಪಾಕ್​ ಗೆ ಆರಂಭಿಕ ಹಿನ್ನಡೆ

ಹೇಗ್​: ಭಾರತೀಯ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌ ಗಲ್ಲು ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ವಾದ ಪ್ರತಿವಾದ ಮಂಡಿಸಿದ್ದು, ಆರಂಭದಲ್ಲೇ ಪಾಕ್​ ಗೆ ಹಿನ್ನಡೆಯಾಗಿದೆ.

18 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದ್ದವು. ಈ ವೇಳೆ ಪಾಕಿಸ್ತಾನದ ನಿಜ ಬಣ್ಣವನ್ನು ಭಾರತ ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಪರ ವಕೀಲರು 90 ನಿಮಿಷಗಳ ಕಾಲ ವಾದ ಮಂಡಿಸಿದರು.

ಭಾರತ ಪರ ವಕೀಲ ಹರೀಶ್​ ಸಾಳ್ವೆ, ನ್ಯಾಯಾಧೀಶ ಜಸ್ಟಿನ್​ ರೋನಿ ಅಬ್ರಾಹಾಂ ಎದುರು ಹಲವು ಸಾಕ್ಷ್ಯಗಳನ್ನ ಸಲ್ಲಿಸಿದರು. 2016ರ ಮಾರ್ಚ್​ನಲ್ಲಿ ಇರಾನ್​ನಿಂದ ಕುಲಭೂಷಣ್​ರನ್ನ ಅಪಹರಿಸಿದ್ದ ಪಾಕಿಸ್ತಾನ, ಅವರನ್ನು ಗುಪ್ತಚರ ಇಲಾಖೆ ಅಧಿಕಾರಿ ಎಂದು ಬಿಂಬಿಸಿತ್ತು. ಈ ಕುರಿತು ಸಾಕ್ಷ್ಯ ನೀಡಲು ಮನವಿ ಮಾಡಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ಭಾರತದ ವಾದ ಮುಗಿಯುತ್ತಿದ್ದಂತೆ ಪಾಕಿಸ್ತಾನ ತನ್ನ ಪ್ರತಿವಾದ ಮಂಡಿಸಿತು. ಕೇವಲ ಕುಲಭೂಷಣ್​ ತಪ್ಪೊಪ್ಪಿಕೊಂಡಿದ್ದ ವಿಡಿಯೋವನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪಾಕ್‌ ಸಲ್ಲಿಸಿದೆ. ಆದರೆ ಈ ವಿಡಿಯೋ ಪ್ರಸಾರ ಮಾಡೋಕೆ ನ್ಯಾಯಾಧೀಶರು ಅವಕಾಶ ನೀಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಅಲ್ಲದೇ ತನ್ನ ವಾದದಲ್ಲಿ ಬರಿ ಸುಳ್ಳು, ಕಪೋಲಕಲ್ಪಿತ ವಿಚಾರಗಳು, ಸಾಕ್ಷ್ಯಗಳನ್ನ ತಿರುಚಿ, ಅದನ್ನೇ ಸತ್ಯ ಎಂದು ಬಿಂಬಿಸಲು ಪಾಕಿಸ್ತಾನ ಪರ ವಕೀಲರು ನಡೆಸಿದ ಕಸರತ್ತು ವಿಫಲಗೊಂಡಿದೆ.

ಇದರಿಂದ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯವನ್ನ ದಿಕ್ಕು ತಪ್ಪಿಸೋ ಕೆಲಸವನ್ನಾಗಿ ಭಾರತ ಮಾಡುತ್ತಿದೆ ಅಂತಾ ಇಲ್ಲ ಸಲ್ಲದ ಆರೋಪಿಸಿದೆ.

ಪಾಕಿಸ್ತಾನದ ಸುಳ್ಳು ವಾದ..!
ಶಾಂತಿಯುತವಾಗಿ ಪರಸ್ಪರ ಸಮಸ್ಯೆಗೆ ಪರಿಹಾರ
ನೆರೆ ರಾಷ್ಟ್ರಗಳ ಜೊತೆಗೆ ಶಾಂತಿ ಬಯಸುವ ಪಾಕಿಸ್ತಾನ
ಕುಲಭೂಷಣ್​​ ಜಾಧವ್​​ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ
ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ದುರ್ಬಳಕೆ
ಜಾಧವ್​ ಬಳಿ ಮುಸ್ಲಿಂ ಹೆಸರಿನ ಭಾರತದ ಪಾಸ್​ಪೋರ್ಟ್​ ಲಭ್ಯ
ತಾನು ಗುಪ್ತಚರ ಇಲಾಖೆ ಅಧಿಕಾರಿ ಅಂತ ತಪ್ಪೊಪ್ಪಿಗೆ ಹೇಳಿಕೆ
ಜಾಧವ್​ ತಪ್ಪೊಪ್ಪಿಕೊಂಡಿರೋ ವಿಡಿಯೋ ಹಸ್ತಾಂತರಿಸಿದ ಪಾಕ್​
ಬಲೂಚಿಸ್ತಾನದಲ್ಲಿ ಇರಾನ್​ನಿಂದ ಬಂದಿದ್ದ ಜಾಧವ್​ ಬಂಧನ
ಗುಪ್ತಚರ ಅಧಿಕಾರಿಗಳಿಗೆ ಶಿಕ್ಷೆ ನೀಡಿದರೆ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಲ್ಲ

–ಏಜೆನ್ಸೀಸ್​

Tuesday, May 2, 2017

ಪ್ರಚಲಿತ ವಿದ್ಯಮಾನ : 03 ಮೇ 2017 : ವಿಶ್ವದ ಹಿರಿಯಜ್ಜ ಇನ್ನಿಲ್ಲ

ಜಕಾರ್ತಾ: 146 ವರ್ಷದ ವ್ಯಕ್ತಿ ಎಂದೇ ಹೇಳಲಾಗುತ್ತಿದ್ದ ಇಂಡೋನೇಷ್ಯಾದ ಸೊಡಿಮೆಡ್ಜೋ ಕೇಂದ್ರ ಜಾವಾ ಹಳ್ಳಿಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಈತ 1870 ಡಿಸೆಂಬರ್​ನಲ್ಲಿ ಜನಿಸಿದ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಇಂಡೋನೇಷ್ಯಾದಲ್ಲಿ 1900ರ ನಂತರ ಜನಿಸಿದವರ ಹೆಸರು ಜನ್ಮ ದಾಖಲೆಗಳಲ್ಲಿ ನಮೂದಾಗಿದೆ. ಸೊಡಿಮೆಡ್ಜೋ ಜನ್ಮ ದಿನಾಂಕದ ಬಗ್ಗೆ ನಿಖರ ಮಾಹಿತಿ ನೀಡುವ ಅಧಿಕೃತ ದಾಖಲೆಗಳು ದೇಶದಲ್ಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 12ರಂದು ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ನಂತರ ಮನೆಗೆ ಕರೆತರಲಾಗಿತ್ತು. ಕಳೆದ ಭಾನುವಾರ ಅವರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಎರಡು ವಿಶ್ವಯುದ್ಧ ನೋಡಿದ್ದರು!: ಎರಡು ವಿಶ್ವಯುದ್ಧಗಳನ್ನು ನೋಡಿ, ಜೀವಂತ ಇರುವ ಬೆರಳಣಿಕೆ ವ್ಯಕ್ತಿಗಳಲ್ಲಿ ಸೊಡಿಮೆಡ್ಜೋ ಕೂಡ ಒಬ್ಬರಾಗಿದ್ದರು. ಒಂದನೇ ವಿಶ್ವಯುದ್ಧ ಸಂದರ್ಭದಲ್ಲಿ ಇವರಿಗೆ 43 ವರ್ಷ, 2ನೇ ವಿಶ್ವಯುದ್ಧ ಮುಗಿಯುವ ವೇಳೆ ಇವರ ವಯಸ್ಸು 70 ಆಗಿತ್ತು.
ಪ್ರೀತಿ-ವಿಶ್ವಾಸ ಕಾರಣ: ಸೊಡಿಮೆಡ್ಜೋ ಈ ಹಿಂದೆ ಮಾಧ್ಯಮಗಳಿಗೆ ಹಲವು ಸಂದರ್ಶನಗಳನ್ನು ನೀಡಿದ್ದರು. ಅವರ ದೀರ್ಘಾಯುಷ್ಯದ ರಹಸ್ಯ ಕೇಳಿದಾಗ ‘ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳುವವರು, ಹೆಚ್ಚು ತಾಳ್ಮೆ ಹಾಗೂ ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ. ಇದು ನನ್ನನ್ನು ಇಷ್ಟು ವರ್ಷ ಬದುಕುವಂತೆ ಮಾಡಿದೆ ಎಂದಿದ್ದರು.
-ಏಜೆನ್ಸೀಸ್ 

ಪ್ರಚಲಿತ ವಿದ್ಯಮಾನ : 02 ಮೇ 2017 : ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಚೀನಾ ಆಸಕ್ತಿ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹಾದುಹೋಗಲಿರುವುದೇ ಚೀನಾದ ಈ ಆಸಕ್ತಿಗೆ ಕಾರಣ ಎನ್ನಲಾಗಿದೆ.

ಬೀಜಿಂಗ್: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಚೀನಾ ಆಸಕ್ತಿ ತೋರಿದೆ ಎಂದು ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಪತ್ರಿಕೆ ಗ್ಲೋಬಲ್ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹಾದುಹೋಗಲಿರುವುದೇ ಚೀನಾದ ಈ ಆಸಕ್ತಿಗೆ ಕಾರಣ ಎನ್ನಲಾಗಿದೆ. ಈ ಯೋಜನೆಗೆ ಚೀನಾ ಹೂಡಿಕೆ ಮಾಡುತ್ತಿದೆ. ಸುಮಾರು ₹ 3.2 ಲಕ್ಷ ಕೋಟಿ ಮೊತ್ತದ ಯೋಜನೆ ಇದಾಗಿದೆ.
ರೊಹಿಂಗ್ಯಾ ವಿವಾದಕ್ಕೆ ಸಂಬಂಧಿಸಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ನಡುವೆ ಚೀನಾ ಮಧ್ಯಸ್ಥಿಕೆ ವಹಿಸಿರುವುದನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, 'ಇತರ ದೇಶಗಳ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸದಿರಲು ಚೀನಾ ಬದ್ಧವಾಗಿದೆ. ಹಾಗೆಂದು, ಸಾಗರೋತ್ತರ ಹೂಡಿಕೆ ಮಾಡುವ ಉದ್ಯಮಿಗಳ ಬೇಡಿಕೆಗಳ ವಿಚಾರದಲ್ಲಿ ಸುಮ್ಮನಿರಲಾಗದು’ ಎಂದೂ ಹೇಳಲಾಗಿದೆ.
‘ಬೃಹತ್ ಪ್ರಮಾಣದ ಹೂಡಿಕೆಗಳನ್ನು ಮಾಡುವ ಮೂಲಕ ವಿವಿಧ ದೇಶಗಳ ಜತೆ ಚೀನಾ ರಸ್ತೆ ಸಂಪರ್ಕ ಸಾಧಿಸಿದೆ. ಕಾಶ್ಮೀರ ವಿಚಾರವೂ ಸೇರಿದಂತೆ ಪ್ರಾದೇಶಿಕ ಸಂಘರ್ಷಗಳನ್ನು ಕೊನೆಗಾಣಿಸುವ ಬಗ್ಗೆಯೂ ಚೀನಾವೀಗ ಆಸಕ್ತಿವಹಿಸಿದೆ’ ಎಂದು ಲೇಖನದಲ್ಲಿ ಹೇಳಲಾಗಿದೆ.

Monday, May 1, 2017

ಪ್ರಚಲಿತ ವಿದ್ಯಮಾನ : 02 ಮೇ 2017 : ಅಯೋಧ್ಯೆಯಲ್ಲಿ ಅಭಿವೃದ್ಧಿಮಂತ್ರದ ಅನುರಣನ

ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಕಟ್ಟಡ ಉರುಳಿ ಇಂದಿಗೆ 24 ವರ್ಷ. ಸುಪ್ರೀಂ ಕೋರ್ಟ್ ಆದೇಶದಂತೆ ಅಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ಆದರೆ, ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅಯೋಧ್ಯೆ ಮತ್ತೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕ ಯೋಜನೆಗಳನ್ನು ಪ್ರಕಟಿಸಿ, ಮತಬೇಟೆಗೆ ಹೊರಟಿವೆ.

ಅಂದು ಏನಾಯಿತು?
ಉತ್ತರಪ್ರದೇಶದಲ್ಲಿ 1991ರಲ್ಲಿ ಮುಲಾಯಂ ಸರ್ಕಾರ ಪತನವಾಗಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೇಂದ್ರದಲ್ಲೂ ಅದೇ ಅವಧಿಯಲ್ಲಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಎರಡನೇ ಬಾರಿಗೆ ಕರಸೇವೆ ಆಯೋಜಿಸಲಾಯಿತು. ಈ ಕರಸೇವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 4ರಂದೇ ಅಯೋಧ್ಯೆಯಲ್ಲಿ ಲಕ್ಷಾಂತರ ರಾಮಭಕ್ತರು ಜಮಾಯಿಸಿದ್ದರು. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಡಿ.6ರಂದು ನಿಗದಿಯಂತೆ ಕರಸೇವೆ ನಡೆಯುತ್ತಿತ್ತು. ಅಂದು ಪೂರ್ವಾಹ್ನ 11 ಗಂಟೆಯವರೆಗೂ ಎಲ್ಲ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತಿದ್ದವು, ನಿಗದಿಯಂತೆ ವಿಹಿಂಪ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಕೆಲ ಯುವ ಕರಸೇವಕರು ವಿವಾದಿತ ಬಾಬ್ರಿ ಕಟ್ಟಡದ ಗುಮ್ಮಟವನ್ನು ಏರಿ ನೋಡುನೋಡುತ್ತಿದ್ದಂತೆ ಅದನ್ನು ಧ್ವಂಸಗೊಳಿಸಿದರು. ಇದರಿಂದ ಭಾವೋದ್ರೇಕಕ್ಕೆ ಒಳಗಾದ ಸಾವಿರಾರು ಕಾರ್ಯಕರ್ತರು ಕೆಲ ಹೊತ್ತಲ್ಲೇ ವಿವಾದಿತ ಕಟ್ಟಡವನ್ನು ಇಡಿಯಾಗಿ ನೆಲಸಮ ಮಾಡಿದ್ದರು. ಇತ್ತ ಲಾಲಕೃಷ್ಣ ಆಡ್ವಾಣಿ, ಸಾಧಿ್ವ ಉಮಾಭಾರತಿ ಸೂಚನೆ ನೀಡುತ್ತಿದ್ದರೂ ಕಿವಿಗೊಡದ ಕರಸೇವಕರ ಪಡೆ ಸಂಜೆ 7 ಗಂಟೆ ಹೊತ್ತಿಗೆ ಆ ಕಟ್ಟಡವನ್ನು ಧ್ವಂಸಗೊಳಿಸಿಯೇ ನಿರಾಳವಾಯಿತು. ಕರಸೇವೆ ಬಳಿಕ ನಡೆದ ಹಲವು ಸಂಘರ್ಷಗಳಲ್ಲಿ 50 ಕರಸೇವಕರು ಪ್ರಾಣ ಕಳೆದುಕೊಳ್ಳಬೇಕಾಯಿತು.
ಇಂದೇನು?: ಇತ್ತೀಚಿನ ವರ್ಷಗಳಲ್ಲಿ ಅಯೋಧ್ಯೆ ಶಾಂತವಾಗಿದೆ. ಜನರು ಮಂದಿರ-ಮಸೀದಿಗಿಂತ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ ಎಂದು ಹೇಳುತ್ತಿದ್ದಾರೆ. ಯುವಕರು ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದಾರೆ. ಮಾತ್ರವಲ್ಲ, ಚುನಾವಣೆ ಬಂದಾಗ ಮಾತ್ರ ರಾಜಕೀಯ ಪಕ್ಷಗಳು ಅಯೋಧ್ಯೆಯನ್ನು ನೆನಪಿಸಿಕೊಳ್ಳುತ್ತವೆ, ಆ ಬಳಿಕ ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಇಲ್ಲಿನ ಜನರ ಕಷ್ಟಕಾರ್ಪಣ್ಯಗಳನ್ನು ಕೇಳುವುದಿಲ್ಲ ಎಂದು ದೂರುತ್ತಿರುವ ಜನತೆ, ಇನ್ಮುಂದೆ ನಾವು ಮತಬ್ಯಾಂಕ್ ರಾಜಕೀಯಕ್ಕೆ ಬಲಿ ಆಗೋದಿಲ್ಲ ಎಂದು ಹೇಳಲು ಮರೆಯುವುದಿಲ್ಲ. ಹಾಗಾಗಿಯೇ, ಅಯೋಧ್ಯೆಯನ್ನು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿಸುವ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿವೆ. ರಾಮ ಜನ್ಮಭೂಮಿ ಪ್ರದೇಶದಿಂದ 15 ಕಿಲೋಮೀಟರ್ ದೂರದಲ್ಲಿ ರಾಮಾಯಣ ಸಂಗ್ರಹಾಲಯ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 25 ಎಕರೆಯಲ್ಲಿ ನಿರ್ವಣವಾಗಲಿರುವ ಈ ಮ್ಯೂಸಿಯಂ ಭಗವಾನ್ ಶ್ರೀರಾಮನ ಜೀವನ ಮತ್ತು ಮೌಲ್ಯಗಳನ್ನು ದರ್ಶಿಸಲಿದೆ. ರಾಮಾಯಣದ ಘಟನಾವಳಿಗಳು ಇಲ್ಲಿ ಬಿಂಬಿತವಾಗಲಿವೆ. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಇದನ್ನು ನಿರ್ವಿುಸುವ ಉದ್ದೇಶವಿದ್ದು, ರಾಮ ಹಾಗೂ ರಾಮಾಯಣ ಕುರಿತಾದ ಪ್ರತಿ ಮಾಹಿತಿ ಸಿಗಲಿದೆ. ಈ ಮ್ಯೂಸಿಯಂ ನಿರ್ವಣಕ್ಕಾಗಿ ಕೇಂದ್ರ ಸರ್ಕಾರ 150 ಕೋಟಿ ರೂಪಾಯಿ ಮಂಜೂರು ಮಾಡಲಿದೆ.
ಚುನಾವಣೆಯ ಕೇಂದ್ರಬಿಂದು
ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಮತ್ತೆ ರಾಜಕಾರಣದ ಕೇಂದ್ರಬಿಂದುವಾಗುತ್ತಿದೆ. ಆಡಳಿತಾರೂಢ ಸಮಾಜವಾದಿ ಪಕ್ಷ ಅಯೋಧ್ಯೆಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರೆ, ಕೇಂದ್ರ ಸರ್ಕಾರ ಅಯೋಧ್ಯೆಯನ್ನು ಸಾಂಸ್ಕೃತಿಕ ಲೋಕದ ವಿಶಿಷ್ಟ ಸ್ಥಾನವಾಗಿಸಲಾಗುವುದು ಎಂದು ಹೇಳುತ್ತಿದೆ. ಈ ಮಧ್ಯೆ, ರಾಮಮಂದಿರ ನಿರ್ವಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆ ಬಿಜೆಪಿಯೊಳಗಿನಿಂದಲೇ ಕೇಳಿಬರುತ್ತಿದ್ದು, ಸಂಘಪರಿವಾರ ಇದಕ್ಕೆ ದನಿಗೂಡಿಸಿದೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಮ ಮಂದಿರ ವಿಷಯದ ಬಗ್ಗೆ ಜಾಣಮರೆವು ತೋರುತ್ತಿದ್ದಾರೆ ಎಂದು ಬಿಜೆಪಿಯ ಕೆಲ ಹಿರಿತಲೆಗಳು ಅತೃಪ್ತಿ ಹೊರಹಾಕಿವೆ. ಮತ್ತೊಂದೆಡೆ, ಅಯೋಧ್ಯೆಯಲ್ಲಿ ಬಾಬ್ರಿ ಕಟ್ಟಡವಿದ್ದ ಜಾಗದಲ್ಲಿ ಮಸೀದಿ ನಿರ್ವಿುಸಬೇಕು ಎಂದು ಮುಸ್ಲಿಂ ಸಂಘಟನೆಗಳು ಆಗ್ರಹಿಸಿವೆ.
ಸ್ಥಳೀಯರು ಏನಂತಾರೆ?: ಅಯೋಧ್ಯೆ ಅಶಾಂತಿಯ, ಕೋಮುಗಲಭೆಯ ತಾಣವಾಗಿ ಅಲ್ಲ, ಅದು ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬಿಂಬಿತವಾಗಬೇಕು. ಐತಿಹಾಸಿಕ ನಗರಿಯು ಪ್ರವಾಸಿಗರ ಭೇಟಿ, ಉತ್ತಮ ಕ್ಷಣಗಳಿಗೆ ಸಾಕ್ಷಿಯಾಗಬೇಕು. ಹಾಗಾಗಿ, ಅಯೋಧ್ಯೆಯನ್ನು ‘ವಿವಾದಿತ’ ಎಂದು ಬಿಂಬಿಸದೆ ಪ್ರೇಕ್ಷಣೀಯ ತಾಣವಾಗಿ ಬಿಂಬಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಮಾತ್ರವಲ್ಲ, ಸಾಕಷ್ಟು ಯುವಕರು ಪ್ರವಾಸಿಗರಿಗೆ ಗೈಡ್ ಆಗಿ ಕಾರ್ಯನಿರ್ವಹಿಸುತ್ತ, ಪ್ರವಾಸೋದ್ಯಮದಿಂದ ಆದಾಯ ಪಡೆದುಕೊಳ್ಳುತ್ತಿದ್ದಾರೆ.
ಜನರೇ ನಿರ್ಧರಿಸಬೇಕು: ಮಂದಿರ ನಿರ್ವಣವಾಗಬೇಕೆ? ಮಸೀದಿ ನಿರ್ವಣವಾಗಬೇಕೆ? ಎಂಬ ನಿರ್ಧಾರವನ್ನು ಅವಳಿ ನಗರಗಳ (ಅಯೋಧ್ಯೆ-ಫೈಜಾಬಾದ್) ಜನರಿಗೆ ಬಿಟ್ಟುಕೊಡಬೇಕು. ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದಾಗಿಯೇ ಈ ವಿವಾದ ಬಗೆಹರಿಯದೆ ಉಳಿದಿದೆ. ಆದ್ದರಿಂದ, ಸೌಹಾರ್ದಯುತ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ಥೀಮ್ ಪಾರ್ಕ್
ಸರಯೂ ನದೀತೀರದಲ್ಲಿ ರಾಮಲೀಲಾ ಥೀಮ್ ಪಾರ್ಕ್ ನಿರ್ಮಾಣ ಮಾಡಲು ನಿರ್ಧರಿಸಿರುವ ಉತ್ತರಪ್ರದೇಶ ಸರ್ಕಾರ ಈ ಸಂಬಂಧಿತ ಪ್ರಕ್ರಿಯೆಗಳಿಗೆ ವೇಗ ನೀಡಲು ನಿರ್ಧರಿಸಿದೆ. ಚುನಾವಣೆ ನೀತಿಸಂಹಿತೆ ಜಾರಿಯಾದರೆ ಹೊಸ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಅವಕಾಶ ದೊರೆಯುವುದಿಲ್ಲವಾದ್ದರಿಂದ ಆದಷ್ಟು ಬೇಗನೆ ಈ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಿರ್ಧರಿಸಿದ್ದಾರೆ.
ಲಿಬರ್ಹಾನ್ ಆಯೋಗ
ಘಟನೆಯ 10 ದಿನಗಳ ಬಳಿಕ ಅಂದರೆ ಡಿ.16ರಂದು ಕೇಂದ್ರ ಸರ್ಕಾರ ಪ್ರಕರಣದ ಸಮಗ್ರ ತನಿಖೆಗಾಗಿ ಲಿಬರ್ಹಾನ್ ಆಯೋಗ ರಚಿಸಿತು. ಈ ಆಯೋಗ 17 ವರ್ಷಗಳ ಬಳಿಕ 2009ರಲ್ಲಿ ವರದಿ ಸಲ್ಲಿಸಿತು. ಈ ಆಯೋಗ ಯಾವುದೇ ಸಂಘಟನೆ, ವ್ಯಕ್ತಿಯನ್ನು ಅಪರಾಧಿ ಎಂದು ಹೇಳದೆ ಹಲವು ಸಂಘಟನೆ, ವ್ಯಕ್ತಿಗಳದ್ದು ಸ್ವಲ್ಪ ಸ್ವಲ್ಪ ದೋಷವಿದೆ ಎಂದಿತು. ಆದರೆ, ಆಯೋಗ ಸಲ್ಲಿಸಿದ ವರದಿಯಲ್ಲಿ ಯಾವುದೇ ಹೊಸ ಮಾಹಿತಿಗಳಿರಲಿಲ್ಲ. 17 ವರ್ಷದ ಹಿಂದೆ ಎಲ್ಲರಿಗೂ ಗೊತ್ತಿದ್ದ ಮಾಹಿತಿಗಳನ್ನೇ ಆಯೋಗ ಮತ್ತೆ ಆಲಾಪಿಸಿತ್ತು.
 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣದ ಕುರಿತಂತೆ ಯಾವುದೇ ರಾಜಕೀಯ ಪಕ್ಷಗಳು ಗಂಭೀರವಾಗಿಲ್ಲ. ಅವು ಬರೀ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಂಡಿವೆ. ವಾಸ್ತವದಲ್ಲಿ, ರಾಮ ಮಂದಿರ ನಿರ್ವಣದ ವಿಷಯವನ್ನು ರಾಜಕೀಯೀಕರಣಗೊಳಿಸಿದ್ದೇ ಬಿಜೆಪಿ. ಆದರೆ, ಮಂದಿರ ನಿರ್ವಿುಸುವ ಬಗ್ಗೆ ಅದಕ್ಕೆ ಯಾವುದೇ ಬದ್ಧತೆ ಇದ್ದಂತಿಲ್ಲ. ಜನಸಾಮಾನ್ಯರು ರಾಜಕೀಯ ಪಕ್ಷಗಳ ತಂತ್ರಗಾರಿಕೆಯನ್ನು ಅರಿಯದೆ ಹೋದರು. ಆದರೀಗ, ಅವರೂ ಜಾಗೃತರಾಗಿದ್ದು ಮೋಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕು.
| ಮಹಂತ್ ರಾಮ್ಾಸ, ನಿಮೋಹಿ ಅಖಾಡಾ ಮುಖ್ಯಸ್ಥರು

ಜನರ ಧಾರ್ವಿುಕ ನಂಬಿಕೆಗಳನ್ನು ರಾಜಕೀಯಕ್ಕೆ ಬಳಸಬಾರದು. ಮುಖ್ಯವಾಗಿ, ಅಯೋಧ್ಯೆಯ ವಿಷಯದಲ್ಲಿ. ಧರ್ಮದಲ್ಲಿ ರಾಜಕೀಯ ಬೆರೆಸುವ ಎಲ್ಲ ಶಕ್ತಿ, ಪಕ್ಷಗಳನ್ನು ನಾನು ಖಂಡಿಸುತ್ತೇನೆ. ಮಂದಿರ-ಮಸೀದಿ ವಿವಾದದಲ್ಲಿ ಜನರನ್ನು, ಅವರ ಮನಸ್ಸುಗಳನ್ನು ವಿಭಜಿಸಬಾರದು. ಉದ್ಯೋಗಾವಕಾಶ, ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನ ಹರಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.
| ಮೌಲಾನಾ ಯಾಸೂಬ್ ಅಬ್ಬಾಸಿ ಚಿಂತಕ

ಪ್ರಚಲಿತ ವಿದ್ಯಮಾನ : 02 ಮೇ 2017 : ಪಾಕ್ ದಾಳಿಗೆ ಪ್ರತೀಕಾರ

ಉರಿ ಸೇನಾನೆಲೆ ದಾಳಿ ಘಟನೆ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನಾ ಶಿಬಿರಗಳ ಮೇಲೆ ನಡೆಸಿದ್ದ ಸರ್ಜಿಕಲ್ ದಾಳಿಗೆ ಬೆದರಿ ಕಳೆದ 6 ತಿಂಗಳಿನಿಂದ ಬಾಲ ಮುದುರಿಕೊಂಡಿದ್ದ ಪಾಕಿಸ್ತಾನದ ಪೈಶಾಚಿಕ ಮುಖವಾಡ ಮತ್ತೊಮ್ಮೆ ಕಳಚಿಬಿದ್ದಿದೆ. ಕಳೆದೊಂದು ತಿಂಗಳಿನಿಂದ 7ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕ್ ಯೋಧರು ಸೋಮವಾರ ಮತ್ತೊಮ್ಮೆ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಕೊಂದಿದ್ದಲ್ಲದೆ, ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಪಾಕ್​ನ ಪಾತಕದಿಂದ ಕೆರಳಿರುವ ಕೇಂದ್ರ ಸರ್ಕಾರ ಸೂಕ್ತ ತಿರುಗೇಟು ನೀಡಲು ಸೇನಾಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಈ ಬೆಂಬಲ ಸಿಕ್ಕ ಬೆನ್ನಲ್ಲೇ ಪಾಕ್ ವಿರುದ್ಧ ಮುಗಿಬಿದ್ದ ಭಾರತೀಯ ಸೇನೆ ಶತ್ರು ರಾಷ್ಟ್ರದ 2 ಸೇನಾ ಬಂಕರ್ ಧ್ವಂಸಗೊಳಿಸಿ 7 ಯೋಧರ ಹತ್ಯೆಗೈದಿದೆ. ಆ ಮೂಲಕ ಮತ್ತೊಮ್ಮೆ ಸರ್ಜಿಕಲ್ ದಾಳಿಗೆ ಸಿದ್ಧ ಎಂಬ ಎಚ್ಚರಿಕೆ ರವಾನಿಸಿದೆ. ಈ ದುರ್ಘಟನೆ ಬೆನ್ನಲ್ಲೇ ಕುಲ್ಗಾಂನಲ್ಲಿ ಬ್ಯಾಂಕ್ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ತಂಡ ಇಬ್ಬರು ಸಿಬ್ಬಂದಿ ಹಾಗೂ ಐವರು ಪೊಲೀಸರನ್ನು ಕೊಂದು 50 ಲಕ್ಷ ರೂ. ದೋಚಿರುವುದು ಪರಿಸ್ಥಿತಿಯ ಬಿಗುವನ್ನು ಹೆಚ್ಚಿಸಿದೆ.

ಜಮ್ಮು: ನಿರಂತರ ಗುಂಡಿನ ಚಕಮಕಿಯಿಂದ ರಣರಂಗದಂತಾಗಿರುವ ಪೂಂಚ್​ನ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪಾಕ್ ಪಡೆಗಳು ಸೋಮವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದು ದೇಹವನ್ನು ವಿರೂಪಗೊಳಿಸಿ ಶಿರಚ್ಛೇದ ಮಾಡಿವೆ. ಈ ಕ್ರೌರ್ಯದ ಬೆನ್ನಲ್ಲೇ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತೀಯ ಸೇನೆ ಪಾಕ್ ಸೇನಾ ಬಂಕರ್​ಗಳನ್ನು ಧ್ವಂಸಗೊಳಿಸಿ 7 ಯೋಧರ ಹತ್ಯೆಗೈದಿದೆ.

ಪಾಕ್ ಸೇನೆಯ ಘಟಕವಾದ ಗಡಿ ಕಾರ್ಯಪಡೆ (ಬಾರ್ಡರ್ ಆಕ್ಷನ್ ಟೀಂ-ಬ್ಯಾಟ್) ಕೃಷ್ಣ ಘಾಟಿ ಪ್ರಾಂತ್ಯದಲ್ಲಿ ಈ ಕೃತ್ಯ ಎಸಗಿದೆ. ಭಾರತೀಯ ಸೇನೆಯ ಓರ್ವ ಯೋಧ ಮತ್ತು ಬಿಎಸ್​ಎಫ್​ನ ಹೆಡ್ ಕಾನ್ಸ್​ಟೆಬಲ್​ರ ಮೃತದೇಹವನ್ನು ವಿರೂಪಗೊಳಿಸಲಾಗಿದೆ ಎಂದು ಸೇನೆ ಹೇಳಿದ್ದರೆ, ಮತ್ತೆ ಕೆಲವು ಮೂಲಗಳ ಪ್ರಕಾರ ಇಬ್ಬರು ಯೋಧರ ಶಿರಚ್ಛೇದಗೊಳಿಸಲಾಗಿದೆ.

ಗಸ್ತು ಯೋಧರೇ ಗುರಿ: ಪಾಕ್​ನ ಬ್ಯಾಟ್ ಪಡೆಯು ಭಾರತದ ಗಸ್ತುಯೋಧರನ್ನು ಗುರಿಯಾಗಿಸಿಕೊಂಡು ಬೆಳಗಿನ ಜಾವ 8.30ಕ್ಕೆ ರಾಕೆಟ್ ಮತ್ತು ಮೋರ್ಟಾರ್ ಬಾಂಬ್ ದಾಳಿ ನಡೆಸಿದೆ. ಇದು ಪಾಕ್ ಸೇನೆಯ ಪೂರ್ವಯೋಜಿತ ಕೃತ್ಯವಾಗಿದ್ದು, ಭಾರತೀಯ ಗಡಿಪ್ರದೇಶದಲ್ಲಿ ಸುಮಾರು 250 ಮೀ. ಪ್ರವೇಶಿಸಿ ದಾಳಿಗೆ ಸಂಚು ರೂಪಿಸಿದೆ. ಭಾರತೀಯ ಯೋಧರು ಗಸ್ತಿನಲ್ಲಿ ತೆರಳುವ ವೇಳೆ ಅವರತ್ತ ‘ಬ್ಯಾಟ್’ ದಾಳಿ ನಡೆಸಿದೆ. ಈ ಸಂದರ್ಭ ತಂಡವು ಹಿಂದಿರುಗಿದೆ. ಆಗ ಹಿಂದೆ ಉಳಿದಿದ್ದ ಇಬ್ಬರು ಯೋಧರ ಮೇಲೆ ಮುಗಿಬಿದ್ದ ಬ್ಯಾಟ್, ಅವರನ್ನು ಕೊಂದು ದೇಹವನ್ನು ಹೊತ್ತೊಯ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಭಾರತದ ಆರೋಪವನ್ನು ಪಾಕ್ ಸೇನೆ ನಿರಾಕರಿಸಿದೆ.

ಇಬ್ಬರು ಹುತಾತ್ಮ: 22 ಸಿಖ್ ಇನ್​ಫ್ಯಾಂಟ್ರಿಯ ನಾಯ್್ಕ ಸುಬೇದಾರ್ ಪರಂಜೀತ್ ಸಿಂಗ್ ಮತ್ತು ಬಿಎಸ್​ಎಫ್​ನ 200ನೇ ಬೆಟಾಲಿಯನ್​ನ ಹೆಡ್ ಕಾನ್ಸ್​ಟೆಬಲ್ ಪ್ರೇಮ್ ಸಾಗರ್ ಹುತಾತ್ಮರಾದ ಯೋಧರಾಗಿದ್ದಾರೆ. ಬಿಎಸ್​ಎಫ್​ನ ಮತ್ತೋರ್ವ ಕಾನ್ಸ್​ಟೆಬಲ್ ರಾಜೀಂದರ್ ಸಿಂಗ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿ ನಡೆಸಿದ್ದ ಪಾಕ್ ಪಡೆಗೆ ಭಾರತೀಯ ಪಡೆಗಳು ಪ್ರತ್ಯುತ್ತರ ನೀಡಿವೆ.

ಪ್ರತೀಕಾರಕ್ಕೆ ಬೆಚ್ಚಿದ ಪಾಕ್: ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಪಾಕ್​ಗೆ ತಿರುಗೇಟು ನೀಡಿದ ಭಾರತೀಯ ಸೇನೆ ಕಿರ್ಪನ್ ಹಾಗೂ ಪಿಂಪರ್ ಪ್ರದೇಶದ ಎದುರಿರುವ ಎರಡು ಸೇನಾ ಬಂಕರ್​ಗಳನ್ನು ನಾಶಪಡಿಸಿ ಏಳು ಯೋಧರನ್ನು ಹತ್ಯೆಗೈದಿದೆ. ಭಾರತದ ಕಾರ್ಯಾಚರಣೆಯಿಂದ ಪಾಕಿಸ್ತಾನದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ನಾಶವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಕಾಶ್ಮೀರಕ್ಕೆ ಭೇಟಿ ನೀಡಿ ಸೇನಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಸೇನೆಗೆ ಸ್ವಾತಂತ್ರ್ಯ ನೀಡಿದ ಕೇಂದ್ರ: ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ತೀರ್ವನಿಸಿರುವ ಕೇಂದ್ರ ಸರ್ಕಾರ ಯೋಧರ ಹತ್ಯಾಕಾಂಡಕ್ಕೆ ಯಾವ ರೀತಿ ಪ್ರತೀಕಾರ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆಯನ್ನು ಸೇನಾಪಡೆಗೆ ನೀಡಿದೆ. ಭಾರತೀಯ ಯೋಧರ ಆತ್ಮಾರ್ಪಣೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ನೀಡಿರುವ ಹೇಳಿಕೆ ಸೇನಾಪಡೆಗೆ ಸ್ವಾತಂತ್ರ್ಯ ನೀಡಿರುವ ಸ್ಪಷ್ಟ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಕೂಡ ಪ್ರತೀಕಾರ ಕೈಗೊಳ್ಳಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಯೋಧರ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿರುವ ವಿಎಚ್​ಪಿ ಭಾರತ ಕೂಡ ಇಂಥದ್ದೇ ಪ್ರತೀಕಾರ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಪಾಕ್ ಕೃತ್ಯ ಖಂಡಿಸಿರುವ ಬಜರಂಗದಳ ಕೂಡ ರಾಷ್ಟ್ರವ್ಯಾಪಿ ಬಂದ್​ಗೆ ಕರೆ ನೀಡಿದೆ.

ಪಾಕ್ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಪಾಕ್​ನೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಈ ಸನ್ನಿವೇಶ ನಿರ್ವಹಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕೆಂದೂ ಅವರು ವಿರೋಧ ಪಕ್ಷಗಳಿಗೆ ಸೂಚಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಾಜಪೇಯಿ ನೀಡಿದ್ದ ಸಲಹೆಯನ್ನು ಸ್ಮರಿಸಿದ ದಿಗ್ವಿಜಯ್ ಸಿಂಗ್, ‘ನಮ್ಮ ನೀತಿಗಳನ್ನು ಬದಲಾಯಿಸಿಕೊಳ್ಳಬಹುದು; ಆದರೆ ನಮ್ಮ ನೆರೆರಾಷ್ಟ್ರವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಮಾತನ್ನು ಪುನರುಚ್ಚರಿಸಿದ್ದಾರೆ. ಪಾಕ್ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ ಮತ್ತೊಬ್ಬ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಪ್ರಯತ್ನಿಸಬೇಕೇ ಹೊರತು ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಮೃತದೇಹ ವಿರೂಪ ಇದೇ ಮೊದಲಲ್ಲ
ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ ಅವರ ಮೃತದೇಹವನ್ನು ಪಾಕ್ ಪಡೆಗಳು ವಿರೂಪಗೊಳಿಸುತ್ತಿರುವುದು ಇದೇ ಮೊದಲಲ್ಲ. ಜುಲೈ1999 ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕ್ಯಾ. ಸೌರಭ್ ಕಾಲಿಯರನ್ನು ಬಂಧಿಸಿದ್ದ ಪಾಕ್ ಸೇನೆ ಅವರ ದೇಹವನ್ನು ವಿರೂಪಗೊಳಿಸಿ ಬಳಿಕ ಹಸ್ತಾಂತರಿಸಿತ್ತು.
  • ಫೆ. 2000 ನೌಶೆರಾ ಸೆಕ್ಟರ್​ನಲ್ಲಿ 24 ವರ್ಷದ ಭಾರತೀಯ ಯೋಧ ಭಾಸಹೇಬ್ ಮಾರುತಿ ತಾಳೇಕರ್ ಅವರ ಶಿರಚ್ಛೇದಗೊಳಿಸಿತ್ತು.
  • ಜೂ. 2008 ಗೋರ್ಖಾ ರೈಫಲ್ಸ್​ನ ಯೋಧನನ್ನು ಸೆರೆಹಿಡಿದಿದ್ದ ಬ್ಯಾಟ್, ಆತನ ಶಿರಚ್ಛೇದಗೊಳಿಸಿತ್ತು.
  • ಜ. 2013 ಇಬ್ಬರು ಯೋಧರನ್ನು ಹತ್ಯೆಗೈದ ಬಳಿಕ ಪಾಕ್ ಪಡೆ ಓರ್ವ ಯೋಧನ ಶಿರಚ್ಛೇದಗೊಳಿಸಿತ್ತು.
  • ಅ.2016 ಕುಪ್ವಾರದಲ್ಲಿ ಓರ್ವ ಯೋಧನ ಹತ್ಯೆ ಬಳಿಕ ಆತನ ಮೃತದೇಹವನ್ನು ವಿರೂಪಗೊಳಿಸಿತ್ತು.
  • ನ. 2016 ಮೂವರು ಯೋಧರನ್ನು ಹತ್ಯೆಗೈದ ಪಾಕ್ ಸೇನೆ, ಅವರಲ್ಲೊಬ್ಬನ ದೇಹವನ್ನು ವಿರೂಪಗೊಳಿಸಿತ್ತು.

Sunday, April 30, 2017

ಪ್ರಚಲಿತ ವಿದ್ಯಮಾನ : 01 ಮೇ 2017 : SAARC satellite to be launched on May 5

The “South Asia satellite” being built by India for use by countries of the South Asian Association for Regional Cooperation (SAARC) region will be launched on May 5.

This was announced by Prime Minister Narendra Modi in his Mann ki Batt radio address on Sunday in which he said the capacities of the satellite and the facilities it provides “will go a long way in addressing South Asia’s economic and developmental priorities.”

“Natural resources mapping, tele-medicine, the field of education, deeper IT connectivity or fostering people to people contact — this satellite will prove to be a boon in the progress of the entire region. It is an important step by India to enhance co-operation with the entire South Asia… it is an invaluable gift. This is an appropriate example of our commitment towards South Asia,” Mr. Modi said in his address.

The satellite was announced by Mr. Modi during the 2014 SAARC summit in Nepal and all SAARC countries have since joined it except Pakistan.

The total cost of launching the satellite is estimated to be about ₹235 crore and the cost associated with the launch will be met by the Government of India, Minister of State for Atomic Energy and Space, Dr Jitendra Singh had stated earlier in the Parliament.

The satellite called GSAT-09 enables full range of applications and services in the areas of telecommunication and broadcasting applications viz. Television, Direct-to-Home (DTH), Very Small Aperture Terminals (VSATs), Tele-education, Telemedicine and Disaster Management Support.

The 2,230 kg satellite was built by the Indian Space Research Organisation (ISRO) and has 12 Ku-band transponders. It is cuboid in shape and built around a central cylinder has a mission life of over 12 years.

It will be launched from Satish Dhawan Space Centre in Sriharikota using a Geostationary Launch Vehicle (GSLV) Mk-II launch vehicle.

The GSLV-F09 is about 50m tall and is the 11th flight of the GSLV. It is also the its fourth consecutive flight with the indigenous Cryogenic Upper Stage (CUS) engine.

Reference: Hindu

ಪ್ರಚಲಿತ ವಿದ್ಯಮಾನ : 01 ಮೇ 2017 : ಪ್ಯಾರಿಸ್ ಹವಾಮಾನ ಒಪ್ಪಂದ ಸದ್ಯವೇ ಪ್ರಮುಖ ನಿರ್ಧಾರ

ತಮ್ಮ ನೂರು ದಿನಗಳ ಆಡಳಿತ ಪೂರ್ಣಗೊಂಡ ನಿಮಿತ್ತ ಪೆನ್ಸಿಲ್ವೇನಿಯಾದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಪ್ಯಾರಿಸ್ ಒಪ್ಪಂದವು ಏಕಪಕ್ಷೀಯ ಎಂದು ದೂರಿದರು...

ವಾಷಿಂಗ್ಟನ್ : ‘ಏಕಪಕ್ಷೀಯವಾದ ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತು ಸದ್ಯದಲ್ಲೇ ದೊಡ್ಡ ನಿರ್ಧಾರ ಕೈಗೊಳ್ಳುತ್ತೇನೆ’ ಅಮೆರಿಕ ಅಧ್ಯಕ್ಷ ಟ್ರಂಪ್ ಭರವಸೆ ನೀಡಿದ್ದಾರೆ.ಹೆಚ್ಚು  ವಾಯುಮಾಲಿನ್ಯಕ್ಕೆ ಕಾರಣವಾಗಿರುವ ರಷ್ಯಾ, ಚೀನಾ, ಭಾರತ ದೇಶಗಳನ್ನು ಬಿಟ್ಟು, ಅಮೆರಿಕವನ್ನು ಮಾತ್ರ ಹವಾಮಾನ ವೈಪರೀತ್ಯ ನಿಧಿಗೆ ಹಣ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ನೂರು ದಿನಗಳ ಆಡಳಿತ ಪೂರ್ಣಗೊಂಡ ನಿಮಿತ್ತ ಪೆನ್ಸಿಲ್ವೇನಿಯಾದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಪ್ಯಾರಿಸ್ ಒಪ್ಪಂದವು ಏಕಪಕ್ಷೀಯ ಎಂದು ದೂರಿದರು.ಮಾಧ್ಯಮಗಳ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ. ‘ಸುಳ್ಳು ಸುದ್ದಿ’ ಮೂಲಕ ಮಾಧ್ಯಮಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದಿದ್ದಾರೆ.

‘ವಾಷಿಂಗ್ಟನ್‌ನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ನೀರಸ ಔತಣಕೂಟದಲ್ಲಿ ಭಾಗಿಯಾಗುವ ಬದಲು ನಿಮ್ಮೊಂದಿಗೆ ಬೆರೆಯಲು ಸಂತಸವಾಗುತ್ತಿದೆ’ ಎಂದು ಹೇಳಿದ್ದಾರೆ.

‘ಅಧ್ಯಕ್ಷರನ್ನು ಹೊರತುಪಡಿಸಿ, ಗಣ್ಯರು, ರಾಜಕೀಯ ನಾಯಕರು, ಹಾಲಿವುಡ್ ನಟರು ಹಾಗೂ ಖ್ಯಾತ ಪತ್ರಕರ್ತರು ಔತಣಕ್ಕೆ ಅಲ್ಲಿ ಸೇರಿದ್ದಾರೆ.  ಪರಸ್ಪರು ಸಾಂತ್ವನ ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ. ಆದರೆ ಮುಂದಿನ ವರ್ಷದ ಔತಣಕೂಟಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ. 30 ವರ್ಷಗಳಲ್ಲಿ ಔತಣಕೂಟಕ್ಕೆ ಗೈರುಹಾಜರಾದ ಅಮೆರಿಕದ  ಮೊದಲ ಅಧ್ಯಕ್ಷ ಎನಿಸಿದ್ದಾರೆ.

ಶ್ವೇತಭವನದ ಆನೆಯೇ ಇಲ್ಲ: ಹಾಸ್ಯ ಕಲಾವಿದ ಹಸನ್ ಮಿನಹಾಜ್ ವ್ಯಂಗ್ಯ
‘ಆನೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಸಿಕ್ಕರೂ, ಆನೆ ಮಾತ್ರ ಸಿಗಲಿಲ್ಲ’

ಭಾರತ ಸಂಜಾತ ಅಮೆರಿಕನ್ ಹಸನ್ ಮಿನಹಾಜ್ ಅವರು ಔತಣಕೂಟಕ್ಕೆ ಗೈರಾದ ಟ್ರಂಪ್ ಅವರನ್ನು ಕುರಿತು ವ್ಯಂಗ್ಯವಾಗಿ ಹೇಳಿದ ಮಾತಿದು.
ಹಸನ್ ಅವರ ಹಾಸ್ಯ ಧಾಟಿಗೆ ಔತಣಕೂಟಕ್ಕೆ ಸೇರಿದ ಜನರಿಂದ ಭಾರಿ ಕರತಾಡನ ಸಿಕ್ಕಿತು.

‘ನಮ್ಮ ದೇಶದ ನಾಯಕ ಇಲ್ಲಿಲ್ಲ. ಏಕೆಂದರೆ ಅವರು ರಷ್ಯಾದ ಮಾಸ್ಕೊದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿಗೆ ಪ್ರಯಾಣಿಸಲು ದೀರ್ಘ ಅವಧಿ ಹಿಡಿಯುತ್ತದೆ. ಅವರು ಈಗ ಪೆನ್ಸಿಲ್ವೇನಿಯಾದಲ್ಲಿ ಇದ್ದಾರೆ ಎಂದು ತಿಳಿಯಿತು. ಏಕೆಂದರೆ ಅವರು ಜೋಕ್ ಸ್ವೀಕರಿಸಲಾರರು’ ಎಂದು ಟ್ರಂಪ್ ಅವರನ್ನು ವ್ಯಂಗ್ಯ ಮಾಡಿದರು.

ಪ್ರಚಲಿತ ವಿದ್ಯಮಾನ : 01 ಮೇ 2017 : ಬಾಹ್ಯಾಕಾಶ ರಾಜತಂತ್ರ

ನವದೆಹಲಿ: ಭಾರತವು 450 ಕೋಟಿ ರೂಪಾಯಿ ವೆಚ್ಚದ ‘ದಕ್ಷಿಣ ಏಷ್ಯಾ ಉಪಗ್ರಹ’ವನ್ನು ಮೇ 5ರಂದು ಉಡಾವಣೆ ಮಾಡಲಿದೆ . ನೆರೆಹೊರೆಯ ರಾಷ್ಟ್ರಗಳಿಗೆ ಇದು ಭಾರತದ ಅತ್ಯಮೂಲ್ಯ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ತಮ್ಮ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.

ಎಂಟು ಸಾರ್ಕ್ ರಾಷ್ಟ್ರಗಳ ಪೈಕಿ ಏಳು ರಾಷ್ಟ್ರಗಳು ಈ ಯೋಜನೆಯಲ್ಲಿ ಪಾಲ್ಗೊಂಡಿವೆ. ಪಾಕಿಸ್ತಾನ ಮಾತ್ರ ಭಾರತದ ‘ಕೊಡುಗೆ’ಯನ್ನು ಬಯಸುವುದಿಲ್ಲ ಎಂದು ಹೇಳಿ ಈ ಯೋಜನೆಗೆ ಸೇರ್ಪಡೆಯಾಗಲು ನಿರಾಕರಿಸಿದೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಪರಿಕಲ್ಪನೆಯ ಅಡಿಯಲ್ಲೇ ಮುಂದುವರಿಯಲು ನಾವು ನಿರಂತರ ಯತ್ನಿಸುತ್ತಿದ್ದೇವೆ. ಈ ಪರಿಕಲ್ಪನೆ ಕೇವಲ ಭಾರತಕ್ಕೆ ಸೀಮಿತವಲ್ಲ, ಜಾಗತಿಕವಾಗಿ, ವಿಶೇಷವಾಗಿ ನೆರೆಹೊರೆಯ ರಾಷ್ಟ್ರಗಳಿಗೂ ಪ್ರಸ್ತುತವೇ ಆಗಿದೆ’ ಎಂದು ಪ್ರಧಾನಿ ನುಡಿದರು.

‘ನೆರೆಹೊರೆಯ ದೇಶ ಜತೆ ಸಹಕಾರ ಇರಬೇಕು, ಹಾಗೆಯೇ ಆ ರಾಷ್ಟ್ರಗಳ ಅಭಿವೃದ್ಧಿಯೂ ಆಗಬೇಕು. ಮೇ 5ರಂದು ಭಾರತವು ದಕ್ಷಿಣ ಏಷ್ಯಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಉಪಗ್ರಹದ ಲಾಭ ವ್ಯಾಪಕವಾಗಿದ್ದು ಯೋಜನೆಯಲ್ಲಿ ಪಾಲ್ಗೊಂಡಿರುವ ಎಲ್ಲ ರಾಷ್ಟ್ರಗಳ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲಿದೆ’ ಎಂದು ಪ್ರಧಾನಿ ಹೇಳಿದರು. ‘ಇದು ಭಾರತ ನೀಡುತ್ತಿರುವ ‘ಬೆಲೆ ಕಟ್ಟಲಾಗದ ಕೊಡುಗೆ’. ದಕ್ಷಿಣ ಏಷ್ಯಾ ಬಗೆಗಿನ ನಮ್ಮ ಬದ್ಧತೆಗೆ ಸೂಕ್ತ ಉದಾಹರಣೆ. ಇಡೀ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಇದು ಮಹತ್ವದ ಕಾಣಿಕೆ ಸಲ್ಲಿಸಲಿದೆ’ ಎಂದು ಪ್ರಧಾನಿ ನುಡಿದರು.

ಯಾವ್ಯಾವ ರಾಷ್ಟ್ರಗಳಿಗೆ ಅನುಕೂಲ: ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯಿಂದ ಭಾರತದ ಹೊರತಾಗಿ ನೇಪಾಳ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ರಾಷ್ಟ್ರಗಳಿಗೆ ಅನುಕೂಲವಾಗಲಿದೆ.

ನೈಸರ್ಗಿಕ ಸಂಪನ್ಮೂಲದ ಮ್ಯಾಪಿಂಗ್, ಟೆಲಿ-ಮೆಡಿಸಿನ್, ಶಿಕ್ಷಣ, ಐಟಿ ಸಂಪರ್ಕ ಮತ್ತು ಜನರ ನಡುವಣ ಸಂಪರ್ಕಕ್ಕೆ ಇದು ಅನುಕೂಲ ಒದಗಿಸುತ್ತದೆ. ಡಿಟಿಎಚ್, ಕೆಲವೊಂದು ವಿಸ್ಯಾಟ್ ಸಾಮರ್ಥ್ಯನ್ನು ಎಲ್ಲ 7 ರಾಷ್ಟ್ರಗಳಿಗೂ ಒದಗಿಸುವ ಈ ಉಪಗ್ರಹ ದಕ್ಷಿಣ ಏಷ್ಯಾ ರಾಷ್ಟ್ರಗಳ ಮಧ್ಯೆ ಸಂಪರ್ಕ ಕಲ್ಪಿಸಿ ಪ್ರಾಕೃತಿಕ ದುರಂತಗಳಾದಾಗ ಪರಸ್ಪರ ನೆರವಾಗಲು ಅನುಕೂಲ ಕಲ್ಪಿಸುತ್ತದೆ.

ಉಪಗ್ರಹ ವೃತ್ತಾಂತ: ದಕ್ಷಿಣ ಏಷ್ಯಾ ಉಪಗ್ರಹದ (ಎಸ್​ಎಎಸ್) ತೂಕ 2230 ಕಿಲೋ ಗ್ರಾಂ. ಇದರ ನಿರ್ವಣಕ್ಕೆ ತಗುಲಿದ ಸಮಯ 3 ವರ್ಷ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪೂರ್ಣವಾಗಿ ಸಂಪರ್ಕ ಉಪಗ್ರಹವಾಗಿ ಬಳಕೆ. 12 ಕೆಯು ಬ್ಯಾಂಡ್ ಟ್ರಾನ್ಸ್​ಪಾಂಡರ್​ಗಳನ್ನು ಹೊಂದಿದ್ದು, ನೆರೆಹೊರೆಯ ರಾಷ್ಟ್ರಗಳು ಇದನ್ನು ಸಂಪರ್ಕ ವೃದ್ಧಿಗೆ ಉಚಿತವಾಗಿ ಬಳಸಿಕೊಳ್ಳಬಹುದು. ಪ್ರತಿಯೊಂದು ರಾಷ್ಟ್ರವೂ ಕನಿಷ್ಠ ಒಂದು ಟ್ರಾನ್ಸ್ ಪಾಂಡರ್ ಸಂಪರ್ಕ ಪಡೆಯಲಿದ್ದು, ಇದನ್ನು ಬಳಸಿ ತಮ್ಮದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದು. ಇದರ ಜತೆಗೇ ದಕ್ಷಿಣ ಏಷ್ಯಾ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಬಹುದು.

ಅಪೂರ್ವ ರಾಜನೀತಿ: ದಕ್ಷಿಣ ಏಷ್ಯಾ ಪ್ರದೇಶದ ರಾಷ್ಟ್ರಗಳಿಗಾಗಿ 450 ಕೋಟಿ ರೂಪಾಯಿ ಮೊತ್ತದ ವಿಶೇಷ ಸಂಪರ್ಕ ‘ಉಪಗ್ರಹ’ ಕೊಡುಗೆ ಒದಗಿಸುವ ಮೂಲಕ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ಪರಾಕ್ರಮ ತೋರಿಸುತ್ತಿರುವ ಭಾರತ ಇದೇ ಮೊತ್ತ ಮೊದಲ ಬಾರಿಗೆ ‘ಬಾಹ್ಯಾಕಾಶ ರಾಜನೀತಿ’ಯನ್ನು ಪ್ರದರ್ಶಿಸಿದೆ.

ಪ್ರಧಾನಿ ಆದೊಡನೆ ಪ್ರಸ್ತಾಪ: ಪ್ರಧಾನಿ ಮೋದಿ ಅವರು 2014ರಲ್ಲಿ ನೇಪಾಳದಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಅಭಿವೃದ್ಧಿಯಲ್ಲಿ ಹಂಚಿಕೊಳ್ಳಬಹುದಾದ ಮಾಹಿತಿ ಉಪಗ್ರಹವನ್ನು ಭಾರತವು ಉಡಾವಣೆ ಮಾಡುವ ಏಕಪಕ್ಷೀಯ ಪ್ರಸ್ತಾಪವನ್ನು ಪ್ರಕಟಿಸಿದ್ದರು. ಮೊದಲಿಗೆ ಇದನ್ನು ‘ಸಾರ್ಕ್ ಉಪಗ್ರಹ’ ಎಂಬುದಾಗಿ ಹೆಸರಿಸಲಾಗಿತ್ತು. ಪಾಕಿಸ್ತಾನವು ಯೋಜನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬಳಿಕ ದಕ್ಷಿಣ ಏಷ್ಯಾ ಉಪಗ್ರಹ ಎಂಬುದಾಗಿ ಹೆಸರಿಸಲಾಯಿತು.

ಚಂದ್ರ ಗ್ರಾಮ ಚೀನಾ, ಯೂರೋಪ್ ಯೋಜನೆ: ಚಂದ್ರನ ಮೈಲ್ಮೈಯಲ್ಲಿ ವಿವಿಧ ರೀತಿಯ ಸಂಶೋಧನೆ ಮತ್ತು ವಾಣಿಜ್ಯ ಉದ್ದೇಶಗಳಿಗೋಸ್ಕರ ಚೀನಾ ಮತ್ತು ಯೂರೋಪ್ ಜಂಟಿಯಾಗಿ ಚಂದ್ರ ಗ್ರಾಮ ನಿರ್ವಣಕ್ಕೆ ಮುಂದಾಗಿವೆ. ಚಂದ್ರನಲ್ಲಿ ಗಣಿಗಾರಿಕೆ ಮತ್ತು ಸ್ಪೇಸ್ ಟೂರಿಸಂನಂತಹ ಕಾರ್ಯಕ್ಕೆ ಚಂದ್ರ ಗ್ರಾಮ ಯೋಜನೆ ಬಳಕೆಯಾಗಲಿದೆ. ಬಾಹ್ಯಾಕಾಶ ಆಧಾರಿತ ವಿವಿಧ ಸಂಶೋಧನೆ ಮತ್ತು ಉದ್ಯಮಕ್ಕಾಗಿ ಜಾಗತಿಕ ಪೈಪೋಟಿ ನಡೆಯುತ್ತಿರುವ ಸಮಯದಲ್ಲೇ ಉಭಯ ರಾಷ್ಟ್ರಗಳು ಚಂದ್ರ ಗ್ರಾಮ ನಿರ್ವಣಕ್ಕೆ ಮುಂದಾಗಿರುವುದು ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗೆ ದಾರಿ ಮಾಡಿಕೊಡಲಿದೆ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...