ನವದೆಹಲಿ: ಭಾರತವು 450 ಕೋಟಿ ರೂಪಾಯಿ ವೆಚ್ಚದ ‘ದಕ್ಷಿಣ ಏಷ್ಯಾ ಉಪಗ್ರಹ’ವನ್ನು ಮೇ 5ರಂದು ಉಡಾವಣೆ ಮಾಡಲಿದೆ . ನೆರೆಹೊರೆಯ ರಾಷ್ಟ್ರಗಳಿಗೆ ಇದು ಭಾರತದ ಅತ್ಯಮೂಲ್ಯ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ತಮ್ಮ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
ಎಂಟು ಸಾರ್ಕ್ ರಾಷ್ಟ್ರಗಳ ಪೈಕಿ ಏಳು ರಾಷ್ಟ್ರಗಳು ಈ ಯೋಜನೆಯಲ್ಲಿ ಪಾಲ್ಗೊಂಡಿವೆ. ಪಾಕಿಸ್ತಾನ ಮಾತ್ರ ಭಾರತದ ‘ಕೊಡುಗೆ’ಯನ್ನು ಬಯಸುವುದಿಲ್ಲ ಎಂದು ಹೇಳಿ ಈ ಯೋಜನೆಗೆ ಸೇರ್ಪಡೆಯಾಗಲು ನಿರಾಕರಿಸಿದೆ.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಪರಿಕಲ್ಪನೆಯ ಅಡಿಯಲ್ಲೇ ಮುಂದುವರಿಯಲು ನಾವು ನಿರಂತರ ಯತ್ನಿಸುತ್ತಿದ್ದೇವೆ. ಈ ಪರಿಕಲ್ಪನೆ ಕೇವಲ ಭಾರತಕ್ಕೆ ಸೀಮಿತವಲ್ಲ, ಜಾಗತಿಕವಾಗಿ, ವಿಶೇಷವಾಗಿ ನೆರೆಹೊರೆಯ ರಾಷ್ಟ್ರಗಳಿಗೂ ಪ್ರಸ್ತುತವೇ ಆಗಿದೆ’ ಎಂದು ಪ್ರಧಾನಿ ನುಡಿದರು.
‘ನೆರೆಹೊರೆಯ ದೇಶ ಜತೆ ಸಹಕಾರ ಇರಬೇಕು, ಹಾಗೆಯೇ ಆ ರಾಷ್ಟ್ರಗಳ ಅಭಿವೃದ್ಧಿಯೂ ಆಗಬೇಕು. ಮೇ 5ರಂದು ಭಾರತವು ದಕ್ಷಿಣ ಏಷ್ಯಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಉಪಗ್ರಹದ ಲಾಭ ವ್ಯಾಪಕವಾಗಿದ್ದು ಯೋಜನೆಯಲ್ಲಿ ಪಾಲ್ಗೊಂಡಿರುವ ಎಲ್ಲ ರಾಷ್ಟ್ರಗಳ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲಿದೆ’ ಎಂದು ಪ್ರಧಾನಿ ಹೇಳಿದರು. ‘ಇದು ಭಾರತ ನೀಡುತ್ತಿರುವ ‘ಬೆಲೆ ಕಟ್ಟಲಾಗದ ಕೊಡುಗೆ’. ದಕ್ಷಿಣ ಏಷ್ಯಾ ಬಗೆಗಿನ ನಮ್ಮ ಬದ್ಧತೆಗೆ ಸೂಕ್ತ ಉದಾಹರಣೆ. ಇಡೀ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಇದು ಮಹತ್ವದ ಕಾಣಿಕೆ ಸಲ್ಲಿಸಲಿದೆ’ ಎಂದು ಪ್ರಧಾನಿ ನುಡಿದರು.
ಯಾವ್ಯಾವ ರಾಷ್ಟ್ರಗಳಿಗೆ ಅನುಕೂಲ: ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯಿಂದ ಭಾರತದ ಹೊರತಾಗಿ ನೇಪಾಳ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ರಾಷ್ಟ್ರಗಳಿಗೆ ಅನುಕೂಲವಾಗಲಿದೆ.
ನೈಸರ್ಗಿಕ ಸಂಪನ್ಮೂಲದ ಮ್ಯಾಪಿಂಗ್, ಟೆಲಿ-ಮೆಡಿಸಿನ್, ಶಿಕ್ಷಣ, ಐಟಿ ಸಂಪರ್ಕ ಮತ್ತು ಜನರ ನಡುವಣ ಸಂಪರ್ಕಕ್ಕೆ ಇದು ಅನುಕೂಲ ಒದಗಿಸುತ್ತದೆ. ಡಿಟಿಎಚ್, ಕೆಲವೊಂದು ವಿಸ್ಯಾಟ್ ಸಾಮರ್ಥ್ಯನ್ನು ಎಲ್ಲ 7 ರಾಷ್ಟ್ರಗಳಿಗೂ ಒದಗಿಸುವ ಈ ಉಪಗ್ರಹ ದಕ್ಷಿಣ ಏಷ್ಯಾ ರಾಷ್ಟ್ರಗಳ ಮಧ್ಯೆ ಸಂಪರ್ಕ ಕಲ್ಪಿಸಿ ಪ್ರಾಕೃತಿಕ ದುರಂತಗಳಾದಾಗ ಪರಸ್ಪರ ನೆರವಾಗಲು ಅನುಕೂಲ ಕಲ್ಪಿಸುತ್ತದೆ.
ಉಪಗ್ರಹ ವೃತ್ತಾಂತ: ದಕ್ಷಿಣ ಏಷ್ಯಾ ಉಪಗ್ರಹದ (ಎಸ್ಎಎಸ್) ತೂಕ 2230 ಕಿಲೋ ಗ್ರಾಂ. ಇದರ ನಿರ್ವಣಕ್ಕೆ ತಗುಲಿದ ಸಮಯ 3 ವರ್ಷ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪೂರ್ಣವಾಗಿ ಸಂಪರ್ಕ ಉಪಗ್ರಹವಾಗಿ ಬಳಕೆ. 12 ಕೆಯು ಬ್ಯಾಂಡ್ ಟ್ರಾನ್ಸ್ಪಾಂಡರ್ಗಳನ್ನು ಹೊಂದಿದ್ದು, ನೆರೆಹೊರೆಯ ರಾಷ್ಟ್ರಗಳು ಇದನ್ನು ಸಂಪರ್ಕ ವೃದ್ಧಿಗೆ ಉಚಿತವಾಗಿ ಬಳಸಿಕೊಳ್ಳಬಹುದು. ಪ್ರತಿಯೊಂದು ರಾಷ್ಟ್ರವೂ ಕನಿಷ್ಠ ಒಂದು ಟ್ರಾನ್ಸ್ ಪಾಂಡರ್ ಸಂಪರ್ಕ ಪಡೆಯಲಿದ್ದು, ಇದನ್ನು ಬಳಸಿ ತಮ್ಮದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದು. ಇದರ ಜತೆಗೇ ದಕ್ಷಿಣ ಏಷ್ಯಾ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಬಹುದು.
ಅಪೂರ್ವ ರಾಜನೀತಿ: ದಕ್ಷಿಣ ಏಷ್ಯಾ ಪ್ರದೇಶದ ರಾಷ್ಟ್ರಗಳಿಗಾಗಿ 450 ಕೋಟಿ ರೂಪಾಯಿ ಮೊತ್ತದ ವಿಶೇಷ ಸಂಪರ್ಕ ‘ಉಪಗ್ರಹ’ ಕೊಡುಗೆ ಒದಗಿಸುವ ಮೂಲಕ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ಪರಾಕ್ರಮ ತೋರಿಸುತ್ತಿರುವ ಭಾರತ ಇದೇ ಮೊತ್ತ ಮೊದಲ ಬಾರಿಗೆ ‘ಬಾಹ್ಯಾಕಾಶ ರಾಜನೀತಿ’ಯನ್ನು ಪ್ರದರ್ಶಿಸಿದೆ.
ಪ್ರಧಾನಿ ಆದೊಡನೆ ಪ್ರಸ್ತಾಪ: ಪ್ರಧಾನಿ ಮೋದಿ ಅವರು 2014ರಲ್ಲಿ ನೇಪಾಳದಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಅಭಿವೃದ್ಧಿಯಲ್ಲಿ ಹಂಚಿಕೊಳ್ಳಬಹುದಾದ ಮಾಹಿತಿ ಉಪಗ್ರಹವನ್ನು ಭಾರತವು ಉಡಾವಣೆ ಮಾಡುವ ಏಕಪಕ್ಷೀಯ ಪ್ರಸ್ತಾಪವನ್ನು ಪ್ರಕಟಿಸಿದ್ದರು. ಮೊದಲಿಗೆ ಇದನ್ನು ‘ಸಾರ್ಕ್ ಉಪಗ್ರಹ’ ಎಂಬುದಾಗಿ ಹೆಸರಿಸಲಾಗಿತ್ತು. ಪಾಕಿಸ್ತಾನವು ಯೋಜನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬಳಿಕ ದಕ್ಷಿಣ ಏಷ್ಯಾ ಉಪಗ್ರಹ ಎಂಬುದಾಗಿ ಹೆಸರಿಸಲಾಯಿತು.
ಚಂದ್ರ ಗ್ರಾಮ ಚೀನಾ, ಯೂರೋಪ್ ಯೋಜನೆ: ಚಂದ್ರನ ಮೈಲ್ಮೈಯಲ್ಲಿ ವಿವಿಧ ರೀತಿಯ ಸಂಶೋಧನೆ ಮತ್ತು ವಾಣಿಜ್ಯ ಉದ್ದೇಶಗಳಿಗೋಸ್ಕರ ಚೀನಾ ಮತ್ತು ಯೂರೋಪ್ ಜಂಟಿಯಾಗಿ ಚಂದ್ರ ಗ್ರಾಮ ನಿರ್ವಣಕ್ಕೆ ಮುಂದಾಗಿವೆ. ಚಂದ್ರನಲ್ಲಿ ಗಣಿಗಾರಿಕೆ ಮತ್ತು ಸ್ಪೇಸ್ ಟೂರಿಸಂನಂತಹ ಕಾರ್ಯಕ್ಕೆ ಚಂದ್ರ ಗ್ರಾಮ ಯೋಜನೆ ಬಳಕೆಯಾಗಲಿದೆ. ಬಾಹ್ಯಾಕಾಶ ಆಧಾರಿತ ವಿವಿಧ ಸಂಶೋಧನೆ ಮತ್ತು ಉದ್ಯಮಕ್ಕಾಗಿ ಜಾಗತಿಕ ಪೈಪೋಟಿ ನಡೆಯುತ್ತಿರುವ ಸಮಯದಲ್ಲೇ ಉಭಯ ರಾಷ್ಟ್ರಗಳು ಚಂದ್ರ ಗ್ರಾಮ ನಿರ್ವಣಕ್ಕೆ ಮುಂದಾಗಿರುವುದು ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗೆ ದಾರಿ ಮಾಡಿಕೊಡಲಿದೆ.

No comments:
Post a Comment