Thursday, April 27, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಅಂಚೆ ಕಚೇರೀಲಿ ಔಷಧ!

ನವದೆಹಲಿ: ಅಂಚೆ ಕಚೇರಿಗಳಲ್ಲಿ ಇನ್ಮುಂದೆ ಅಂಚೆ ಸೇವೆಯ ಜತೆಗೆ ಆರೋಗ್ಯ ಸೇವೆ, ಹವಾಮಾನ ಮಾಹಿತಿ ಸಹ ದೊರೆಯಲಿದೆ. ಈ ಸಂಬಂಧ ಆರೋಗ್ಯ ಇಲಾಖೆ ಮತ್ತು ಭೂ ವಿಜ್ಞಾನ ಸಚಿವಾಲಯ ಮಾತುಕತೆ ನಡೆಸುತ್ತಿದ್ದು, ಇನ್ನೆರಡು ತಿಂಗಳೊಳಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ.
ಆರೋಗ್ಯ ಸಚಿವಾಲಯ ಅಂಚೆ ಕಚೇರಿಗಳನ್ನು ಬಳಸಿಕೊಂಡು ಕೆಲ ಅಗತ್ಯ ಔಷಧಗಳನ್ನು ವಿತರಿಸಲು ಚಿಂತನೆ ನಡೆಸುತ್ತಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಔಷಧದ ಅಗತ್ಯತೆ ಇದ್ದರೂ, ಸೂಕ್ತ ಲಭ್ಯತೆ ಇಲ್ಲದಿದ್ದು, ಅಂಚೆ ಕಚೇರಿ ಮೂಲಕ ತಲುಪಿಸಲು ಉದ್ದೇಶಿಸಲಾಗಿದೆ. ಪತ್ರ ವ್ಯವಹಾರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಬ್ಬಿರುವ ಅಂಚೆ ಇಲಾಖೆಯ ಜಾಲದ ಮೂಲಕ ಮತ್ತು ಸಿಬ್ಬಂದಿ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಅಂಚೆ ಇಲಾಖೆಯ ಕಾರ್ಯದರ್ಶಿ ಬಿ.ವಿ. ಸುಧಾಕರ್ ಪ್ರಕಾರ, ಅಂಚೆ ಇಲಾಖೆಯ ಮೂಲಕ ಹವಾಮಾನ ಮಾಹಿತಿಯನ್ನು ಸಂಗ್ರಹಿಸಿ ರೈತರಿಗೆ, ಕಡಲತೀರದ ಮೀನುಗಾರರಿಗೆ ನೀಡಲಾಗುತ್ತದೆ. ಭೂ ವಿಜ್ಞಾನ ಸಚಿವಾಲಯ ಮತ್ತು ಜನರ ಮಧ್ಯೆ ಸಂಪರ್ಕ ಕೊಂಡಿಯಾಗಿ ಅಂಚೆ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...