ಮುಂಬೈ: ಮಹಾರಾಷ್ಟ್ರದಲ್ಲಿ ಸಹ್ಯಾದ್ರಿಯ ಮಹಾಬಲೇಶ್ವರ- ಪಂಚಗನಿ ಗಿರಿಧಾಮದ ಮಧ್ಯೆ ಇರುವ ಭಿಲಾರ್ ಗ್ರಾಮ ಇನ್ನು ಮುಂದೆ ಭಾರತದ ಮೊತ್ತ ಮೊದಲ ‘ಪುಸ್ತಕಗಳ ಗ್ರಾಮ’ವೆಂದೇ ಹೆಸರುವಾಸಿಯಾಗಲಿದೆ. ಮೇ 4ರಂದು ಈ ಪುಸ್ತಕಗ್ರಾಮವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಪುಸ್ತಕಗಳನ್ನು ಸಂಗ್ರಹಿಸಲು ಹಳ್ಳಿಯಲ್ಲಿರುವ ಮನೆಗಳು, ಶಾಲೆಗಳು, ದೇವಸ್ಥಾನಗಳು ಹಾಗೂ ಕೆಲವು ಸಾರ್ವಜನಿಕ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸುಮಾರು 15,000 ಪುಸ್ತಕಗಳನ್ನು ಪ್ರವಾಸಿಗರಿಗಾಗಿ ಒದಗಿಸಲಾಗುವುದು. ಗ್ರಾಮದಲ್ಲಿನ ಕಲಾವಿದರು ಪುಸ್ತಕದ ಓದಿಗೆ ನಿಗದಿಪಡಿಸಲಾದ ಸ್ಥಳಗಳನ್ನು ವಿಶೇಷವಾಗಿ ಅಲಂಕರಿಸಿ ಸಜ್ಜುಗೊಳಿಸುತ್ತಿದ್ದು, 25ಕ್ಕೂ ಹೆಚ್ಚು ಸಾಹಿತ್ಯ ಪ್ರಕಾರಗಳನ್ನು ಗ್ರಾಮದಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ಭಾರತದ ಮೊದಲ ಪುಸ್ತಕಗಳ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಹಾರಾಷ್ಟ್ರದ ಸಂಸ್ಕೃತಿ ಹಾಗೂ ಮರಾಠಿ ಭಾಷಾ ಇಲಾಖೆಯ ಸಚಿವ ವಿನೋದ್ ತಾವಡೆ ಶುಕ್ರವಾರ ತಿಳಿಸಿದರು. ಇಂಗ್ಲೆಂಡಿನ ವೇಲ್ಸ್ನಗರದಲ್ಲಿರುವ ಹೇ ಆನ್ ವೇ ಎಂಬ ಗ್ರಾಮ ಪುಸ್ತಕದ ಅಂಗಡಿಗಳು ಹಾಗೂ ಸಾಹಿತ್ಯೋತ್ಸವಗಳಿಗೆಂದೇ ಹೆಸರುವಾಸಿಯಾಗಿದ್ದು, ಈ ಪರಿಕಲ್ಪನೆ ಹೇ ಆನ್ ವೇ ಗ್ರಾಮದಿಂದಲೇ ಸ್ಪೂರ್ತಿ ಪಡೆದಿದೆ. ಮುಂಬರುವ ದಿನಗಳಲ್ಲಿ ಸಾಹಿತ್ಯೋತ್ಸವಗಳನ್ನು, ವಿಶೇಷ ಪುಸ್ತಕ ಪ್ರದರ್ಶನಗಳು, ಸಾಹಿತಿಗಳೊಂದಿಗೆ ಮಾತುಕತೆ, ಪುಸ್ತಕದ ಓದು ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
Subscribe to:
Post Comments (Atom)
Kannada GK You Tube Channel
🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...
-
🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...
-
ಭೋಪಾಲ್: ಶಾಲೆ ಆವರಣದಲ್ಲಿ ಪತ್ತೆಯಾದ ಬಾಂಬ್ ಅನ್ನು ಕಾನ್ಸ್ಟೇಬಲ್ ಒಂದು ಕಿ.ಮೀವರೆಗೆ ಹೆಗಲ ಮೇಲೆ ಹೊತ್ತೊಯ್ದ 400 ಮಕ್ಕಳ ಜೀವ ಉಳಿಸಿದ ಘಟನೆ ಮಧ್ಯಪ್ರದೇಶದ ಚಿತೋರಾ...
-
,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇತ್ತು ಎಂದು ಭಾವಿಸಲಾಗಿರುವ ಸರಸ್ವತಿ ನದಿಯ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲ. ಹೊಸ ಅಧ್ಯಯನವೊಂದು ಸತ್ಯ ಸಂಗತಿ ಮೇಲೆ ಬೆ...
No comments:
Post a Comment