ಹ್ಯೂಸ್ಟನ್: ಗೂಗಲ್ಸ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭಾರತೀಯ ಸಂಜಾತ (ಸಿಇಒ) ಸುಂದರ್ ಪಿಚೈ ಅವರು ಕಳೆದ ವರ್ಷ ಪಡೆದ ವೇತನ ಅಂದಾಜು 200 ಮಿಲಿಯನ್ ಡಾಲರ್ (1,285 ಕೋಟಿ ರೂಪಾಯಿ). ಇದು ಅವರು 2015ರ ಸಾಲಿನಲ್ಲಿ ಗಳಿಸಿದ್ದ ವೇತನದ ಮೊತ್ತದ ದುಪ್ಪಟ್ಟು. 44ರ ಹರೆಯದ ಪಿಚೈ
ಅವರು ಕಳೆದ ಸಾಲಿನಲ್ಲಿ 650 ಸಾವಿರ ಡಾಲರ್ ವೇತನವನ್ನು ಪಡೆದಿದ್ದಾರೆ. ಇದು 2015ರಲ್ಲಿ ಅವರು ಗಳಿಸಿದ್ದ ವೇತನಕ್ಕಿಂತ ಸ್ವಲ್ಪ ಕಡಿಮೆ. ದೀರ್ಘಕಾಲದಿಂದ ಗೂಗಲ್ ನೌಕರರಾಗಿದ್ದು, 2015ರ ಆಗಸ್ಟ್ ತಿಂಗಳಲ್ಲಿ ಕಂಪನಿಯ ಮರುಸಂಘಟನೆಯಾದಾಗ ಸಿಇಒ ಆಗಿ ನೇಮಕಗೊಂಡಿದ್ದ ಪಿಚೈ, 2016ರಲ್ಲಿ 198.7 ಮಿಲಿಯನ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ಪಡೆದಿದ್ದರು. ಇದು 2015ರಲ್ಲಿ ಅವರು ಪಡೆದಿದ್ದ 99.8 ಮಿಲಿಯನ್ ಡಾಲರ್ ಬಹುಮಾನದ ದುಪ್ಪಟ್ಟು ಮೊತ್ತವಾಗಿತ್ತು. ಹೀಗಾಗಿ 2016ರ ಸಾಲಿನ ಅವರ ವೇತನ 2015ರ ದುಪ್ಪಟ್ಟು ಪ್ರಮಾಣಕ್ಕೆ ಏರಿತ್ತು. 2015ರ ಸಾಲಿನಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚು ವೇತನ ಗಳಿಸಿದ ಸಿಇಒಗಳ ಸಾಲಿನಲ್ಲಿ ಪಿಚೈ 5ನೇ ಸ್ಥಾನದಲ್ಲಿ ಇದ್ದರು. ಪ್ಯಾಟ್ರಿಕ್ ಸೂನ್ ಶಿಯೊಂಗ್ (ನ್ಯಾಂಟ್ಕೆ ವೆಸ್ಟ್, 147.6 ಮಿಲಿಯನ್ ಡಾಲರ್), ಜೊ. ಕಿಯಾನಿ (ಮಾಸಿಮೊ ಕಾರ್ಪೆರೇಷನ್, 119 ಮಿಲಿಯನ್ ಡಾಲರ್), ಮೈಕೆಲ್ ಫ್ರೖೆಸ್(ಲಿಬರ್ಟಿ ಗ್ಲೋಬಲ್, 111.9 ಮಿಲಿಯನ್ ಡಾಲರ್), ಸರ್ ಮಾರ್ಟಿನ್ ಸೊರ್ರೆಲ್ (ಡಬ್ಲ್ಯೂಪಿಪಿ, 103 ಮಿಲಿಯನ್ ಡಾಲರ್) ಅವರು ಮೊದಲ ನಾಲ್ಕು ಸ್ಥಾನಗಳಲ್ಲಿ ಇದ್ದರು.
ಭಾರತದಲ್ಲಿ ಅತ್ಯಂತ ಹೆಚ್ಚು ವೇತನ ಪಡೆಯುತ್ತಿರುವ ಸಿಇಒಗಳು
ಎನ್.ಎಂ. ನಾಯ್್ಕ (ಎಲ್ ಆಂಡ್ ಟಿ) 66.14 ಕೋಟಿ ರೂ.
ವಿಶಾಲ್ ಸಿಕ್ಕ (ಇನ್ಫೋಸಿಸ್) 48.73 ಕೋಟಿ ರೂ.
ದೇಶಬಂಧು ಗುಪ್ತ (ಲ್ಯುಪಿನ್ ಲಿಮಿಟೆಡ್) 44.8 ಕೋಟಿ ರೂ.

No comments:
Post a Comment