ಮಲೇರಿಯಾ ರೋಗ ನಿಯಂತ್ರಣಕ್ಕೆ ಕಂಡುಹಿಡಿದಿರುವ ಆರ್ಟಿಎಸ್ಎಸ್ ಲಸಿಕೆಯನ್ನು ಮುಂದಿನ ವರ್ಷದೊಳಗಾಗಿ ಮಲೇರಿಯ ಪೀಡಿತ ರಾಷ್ಟ್ರಗಳ ಜನತೆಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಉದ್ದೇಶಿಸಿದೆ. ಸೋಮವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಬ್ಲ್ಯೂಎಚ್ಒ, ಮುಂದಿನ ವರ್ಷದೊಳಗಾಗಿ ಆಫ್ರಿಕಾದ ಮೂರು ರಾಷ್ಟ್ರಗಳಾದ ಘಾನ, ಕೀನ್ಯಾ ಮತ್ತು ಮಲಾವಿಯ ಜನತೆಗೆ ಲಸಿಕೆ ನೀಡಲಾಗುತ್ತದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಲೇರಿಯ ಪ್ರಕರಣಗಳು ಕಂಡುಬರುತ್ತಿದ್ದು, ಅಧಿಕ ಸಾವು ಸಂಭವಿಸುತ್ತಿದೆ. ಆರ್ಟಿಎಸ್ಎಸ್ ಲಸಿಕೆಯು ಸೊಳ್ಳೆಯಿಂದ ಹರಡುವ ಮಲೇರಿಯ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಡಬ್ಲ್ಯೂಎಚ್ಒ ತಿಳಿಸಿದೆ. ಲಸಿಕೆಯನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಮಲೇರಿಯ ಪಡೀತರಿಗೆ ನಾಲ್ಕು ಬಾರಿ ಲಸಿಕೆ ನೀಡಬೇಕಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಂದು ಮತ್ತು ನಾಲ್ಕನೇ ಲಸಿಕೆಯನ್ನು 18 ತಿಂಗಳ ನಂತರ ತೆಗೆದುಕೊಳ್ಳಬೇಕಿದೆ. ಮಲೇರಿಯದಿಂದ ಆಫ್ರಿಕಾದಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸುತ್ತಿದೆ.
Subscribe to:
Post Comments (Atom)
Kannada GK You Tube Channel
🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...
-
🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...
-
ಹ್ಯಾಂಬರ್ಗ್: ಸುಸ್ಥಿರ ಆರ್ಥಿಕ ಬೆಳವಣಿಗೆ, ನವೋದ್ಯಮ ನಿಧಿ (ಸ್ಟಾರ್ಟಪ್ ಫಂಡಿಂಗ್) ಒದಗಿಸುವಿಕೆ, ಉದ್ಯಮಕ್ಕೆ ಉತ್ತೇಜನ ಹಾಗೂ ಕಾರ್ಮಿಕ ಸುಧಾರಣೆಗೆ ಭಾರತ ಕೈಗೊಂಡಿರುವ...
-
ಭೋಪಾಲ್: ಶಾಲೆ ಆವರಣದಲ್ಲಿ ಪತ್ತೆಯಾದ ಬಾಂಬ್ ಅನ್ನು ಕಾನ್ಸ್ಟೇಬಲ್ ಒಂದು ಕಿ.ಮೀವರೆಗೆ ಹೆಗಲ ಮೇಲೆ ಹೊತ್ತೊಯ್ದ 400 ಮಕ್ಕಳ ಜೀವ ಉಳಿಸಿದ ಘಟನೆ ಮಧ್ಯಪ್ರದೇಶದ ಚಿತೋರಾ...
No comments:
Post a Comment