ನೈನಿತಾಲ್: ಮತಯಂತ್ರ ದೋಷಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಇವಿಎಂ ವಶಕ್ಕೆ ಆದೇಶಿಸಿದೆ.
ವಿಕಾಸನಗರ ವಿಧಾನಸಭಾ ಚುನಾವಣೆ ವೇಳೆ ಬಳಸಿಕೊಳ್ಳಲಾಗಿದ್ದ ಮತಯಂತ್ರವನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕೆಂದು ಚುನಾವಣಾ ಆಯೋಗಕ್ಕೆ ಉತ್ತರಖಾಂಡ್ ಹೈಕೋರ್ಟ್ ನಿರ್ದೇಶನ ನೀಡಿದೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE https://www.youtube.com/watch?v=p1Oe6fHLRU0
ತಮ್ಮ ಸೋಲಿಗೆ ಮತಯಂತ್ರ (ಇವಿಎಂ) ದೋಷವೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಇತ್ತೀಚೆಗೆ ಉತ್ತರಾಖಂಡ್ ವಿಧಾನಸಭಾ ಚುನಾವಣೆ ನಡೆದಿತ್ತು. ಇಲ್ಲಿನ ವಿಕಾಸನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ನವ್ಪ್ರಭಾತ್ ಎಂಬುವರು ಬಿಜೆಪಿ ಅಭ್ಯರ್ಥಿ ಮುನ್ನಾ ಸಿಂಗ್ ಚೌಹಾಣ್ ಅವರ ವಿರುದ್ಧ ಪರಾಭವಗೊಂಡಿದ್ದರು. ಸುಮಾರು 6 ಸಾವಿರ ಮತಗಳಿಂದ ಹಿನ್ನಡೆಯಾಗಿತ್ತು. ತಮ್ಮ ಸೋಲಿಗೆ ಮತಯಂತ್ರ ದೋಷವೇ ಕಾರಣ ಎಂದು ನವ್ ಪ್ರಭಾತ್ ಆರೋಪಿಸಿದ್ದರು.
ಉತ್ತರಖಾಂಡ್ನ 70 ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ವೇಳೆ 11 ಸಾವಿರ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು. ವಿಕಾಸನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 139 ಇವಿಎಂಗಳ ಬಳಕೆ ಮಾಡಲಾಗಿತ್ತು. (ಏಜೆನ್ಸೀಸ್)
No comments:
Post a Comment