ಬೆಂಗಳೂರು: ಡ್ರೖೆವಿಂಗ್ ಲೈಸನ್ಸ್ ಅಸಲಿಯೋ ಅಥವಾ ನಕಲಿಯೋ? ಆ ಲೈಸನ್ಸ್ದಾರನ ಮೇಲೆ ಪ್ರಕರಣಗಳೇನಾದರೂ ದಾಖಲಾಗಿವೆಯೇ? ಎಂಬಿತ್ಯಾದಿ ಮಾಹಿತಿಗಳು ಇನ್ನು ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಕಲಿ ಡ್ರೖೆವಿಂಗ್ ಲೈಸನ್ಸ್ ಹಾವಳಿ, ವಾಹನ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹೈಟೆಕ್ ತಂತ್ರ ರೂಪಿಸಿದೆ. ಸಂಚಾರ ವಿಭಾಗ ಪೊಲೀಸರು ಪ್ರಸ್ತುತ ಸ್ಮಾರ್ಟ್ ಫೋನ್ ಮಾದರಿಯ ‘ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್’(ಪಿಡಿಎ) ಉಪಕರಣ ಬಳಸುತ್ತಿದ್ದು, ಇದಕ್ಕೆ ಇನ್ನಷ್ಟು ತಂತ್ರಾಂಶ ಸೇರಿಸುವ ಮೂಲಕ ಇನ್ನಷ್ಟು ಸಜ್ಜುಗೊಳಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ 43,73,303 ಜನರ ಬಳಿ ಹಾಗೂ ರಾಜಧಾನಿಯಲ್ಲಿ 15,57,986 ಜನರಲ್ಲಿ ಸ್ಮಾರ್ಟ್ಕಾರ್ಡ್ ರೂಪದ ಡಿಎಲ್ ಇದೆ. ಸಂಚಾರ ಪೊಲೀಸರು ಇವುಗಳನ್ನು ಪರಿಶೀಲಿಸುವಾಗ ಹೆಚ್ಚೆಂದರೆ ಹೆಸರು, ಯಾವ ಪ್ರಕಾರದ ವಾಹನ ಚಾಲನಾ ಪರವಾನಗಿ ಹಾಗೂ ಪರವಾನಗಿಯ ಅವಧಿ ಮುಗಿದಿದೆಯೇ ಎಂದು ಪರಿಶೀಲಿಸುತ್ತಾರೆ.
ಇದನ್ನು ಹೊರತುಪಡಿಸಿ ಸ್ಮಾರ್ಟ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ತಿಳಿಯಲು ಉಪಕರಣಗಳಿಲ್ಲ. ಅನುಮಾನವಿದ್ದರೆ ಸಾರಿಗೆ ಇಲಾಖೆಗೇ ಡಿಎಲ್ ಕಳುಹಿಸಿ ಅದನ್ನು ಪರಿಶೀಲಿಸುವ ಕೆಲಸ ನಡೆಯುತ್ತಿತ್ತು. ಪಿಡಿಎ ಉಪಕರಣದಿಂದ ಇನ್ನು ತ್ವರಿತವಾಗಿ ಮಾಹಿತಿ ಲಭಿಸಲಿದೆ.
ಪ್ರಸ್ತುತ ರಸ್ತೆ ನಿಯಮ ಉಲ್ಲಂಘಿಸಿದರೆ ವಾಹನಗಳ ಮೇಲೆ ಪ್ರಕರಣ ದಾಖಲಾಗುತ್ತದೆ. ವಾಹನದ ಸಂಖ್ಯೆಯನ್ನು ಸಂಚಾರ ಪೊಲೀಸರು ನಮೂದಿಸಿ ದಂಡ ವಿಧಿಸುತ್ತಾರೆ. ಸಾರಿಗೆ ಇಲಾಖೆಯ ಡೇಟಾಬೇಸ್ ಜೋಡಣೆಯಾದ ಬಳಿಕ, ಡಿಎಲ್ ಮೇಲೂ ಪ್ರಕರಣ ದಾಖಲಾಗಲಿವೆ.
ರಾಜ್ಯ ಸಾರಿಗೆ ಇಲಾಖೆ ಡೇಟಾಬೇಸ್ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದಲ್ಲಿ ನೆರೆರಾಜ್ಯಗಳ ಸಾರಿಗೆ ಇಲಾಖೆಯ ಡೇಟಾಬೇಸ್ ಸಂಗ್ರಹಿಸುವ ಚಿಂತನೆಯಿದೆ.
ಹೊಸ ಪದ್ಧತಿಯಿಂದ ವಾಹನ ಕಳ್ಳತನ ಪ್ರಕರಣ ಪತ್ತೆ ಸುಲಭವಾಗಲಿದೆ. ಡಿಎಲ್ ಹಾಗೂ ನೋಂದಣಿ ಪ್ರಮಾಣಪತ್ರವನ್ನು ಪಿಡಿಎನಲ್ಲಿ ಸ್ವೈಪ್ ಮಾಡುತ್ತಿದ್ದಂತೆ ವ್ಯಕ್ತಿಯ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಸಾರಿಗೆ ಇಲಾಖೆಗೆ ನೀಡಿದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ವ್ಯಕ್ತಿಯ ಮೇಲೆ ಅಪರಾಧ ಪ್ರಕರಣಗಳಿದ್ದರೆ ಅದರ ಮಾಹಿತಿಯೂ ಸಿಗುತ್ತದೆ. ಇದರಿಂದ ವಾಹನ ಕಳ್ಳತನ ಸಹಿತ ವಿವಿಧ ಅಪರಾಧಿಗಳನ್ನು ಸೆರೆ ಹಿಡಿಯಲು ಸಹಾಯಕವಾಗಲಿದೆ. ಸದ್ಯ 650 ಪಿಡಿಎ ಯಂತ್ರಗಳನ್ನು ಬೆಂಗಳೂರು ಸಂಚಾರ ಪೊಲೀಸರಿಗೆ ನೀಡಲು ಇಲಾಖೆ ನಿರ್ಧರಿಸಿದೆ. ಈ ಉಪಕರಣದ ಮೂಲದ ನಗದುರಹಿತ ದಂಡ ಸಂಗ್ರಹಕ್ಕೂ ಯೋಜನೆ ಸಿದ್ಧಪಡಿಸಲಾಗಿದೆ.
ಮೊದಲ ಹಂತದಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯಲ್ಲಿನ ಅಂಕಿ ಅಂಶ (ಡೇಟಾಬೇಸ್) ಜೋಡಣೆಗೆ ಬೆಂಗ ಳೂರು ನಗರ ಸಂಚಾರ ಪೊಲೀಸ್ ವಿಭಾಗ ಮುಂದಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪಿಡಿಎ ಮೂಲಕವೇ ಸಂಚಾರ ಪೊಲೀಸರು ಡೇಟಾಬೇಸ್ ಪಡೆದುಕೊಳ್ಳಲಿದ್ದಾರೆ. ಇದರಿಂದ ಡಿಎಲ್ ಹೊಂದಿದ ವ್ಯಕ್ತಿಯ ಕುರಿತ ಎಲ್ಲ ಮಾಹಿತಿಗಳು ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ.

ಡಿಎಲ್ ಮೇಲೂ ಪ್ರಕರಣ?

ವಾಹನ ಕಳ್ಳರ ಪತ್ತೆ ಸುಲಭ…

ಹೇಗೆ ಕೆಲಸ ಮಾಡುತ್ತೆ?
ಮೊದಲ ಹಂತದಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯಲ್ಲಿನ ಅಂಕಿ ಅಂಶ (ಡೇಟಾಬೇಸ್) ಜೋಡಣೆಗೆ ಬೆಂಗ ಳೂರು ನಗರ ಸಂಚಾರ ಪೊಲೀಸ್ ವಿಭಾಗ ಮುಂದಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪಿಡಿಎ ಮೂಲಕವೇ ಸಂಚಾರ ಪೊಲೀಸರು ಡೇಟಾಬೇಸ್ ಪಡೆದುಕೊಳ್ಳಲಿದ್ದಾರೆ. ಇದರಿಂದ ಡಿಎಲ್ ಹೊಂದಿದ ವ್ಯಕ್ತಿಯ ಕುರಿತ ಎಲ್ಲ ಮಾಹಿತಿಗಳು ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ.
No comments:
Post a Comment