ಬೆಂಗಳೂರು: ರಾಮ ಲಲಿತಕಲಾ ಮಂದಿರವು ಸಂಗೀತ ವಿದುಷಿ ವಿಶಾಖಾ ಹರಿ ಅವರನ್ನು ‘ಸಂಗೀತ ವೇದಾಂತ ಧುರೀಣ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏ. 29ರಂದು ಕೆ.ಆರ್.ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಮತ್ತು ಬೆಳ್ಳಿಯ ಪದಕ ಒಳಗೊಂಡಿದೆ ಎಂದು ಕಲಾಮಂದಿರದ ಪ್ರಕಟಣೆ ತಿಳಿಸಿದೆ.
ಉದ್ಯೋಗ ತರಬೇತಿ
ಎಪಿಡಿ ಸಂಸ್ಥೆಯು ಅಂಗವಿಕಲ ನಿರುದ್ಯೋಗಿಗಳಿಗಾಗಿ ಆತಿಥ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಏ. 29 ಕೊನೆಯ ದಿನಾಂಕ. ಮಾಹಿತಿಗೆ: www.apd-india.org

ಬ್ಯೂಟಿಪಾರ್ಲರ್ ತರಬೇತಿ
ಅರಿಶಿನಕುಂಟೆಯ ರುಡ್‌ಸೆಟ್ ಸಂಸ್ಥೆಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಯ ನಿರುದ್ಯೋಗಿ ಯುವತಿಯರಿಗಾಗಿ ಉಚಿತ ಬ್ಯೂಟಿಪಾರ್ಲರ್ ತರಬೇತಿ ಆಯೋಜಿಸಿದೆ. ತರಬೇತಿ ವೇಳೆ 30 ದಿನಗಳ ವಸತಿ ಸೌಲಭ್ಯ ಕಲ್ಪಿಸುವುದಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ಏ. 28 ಕೊನೆಯ ದಿನ.
ಸಂಪರ್ಕ: 080 27728166

ಸಾಮೂಹಿಕ ಉಪನಯನ
ದೊಡ್ಡನೆಕ್ಕುಂದಿ ಬ್ರಾಹ್ಮಣರ ಸಂಘದ ಆಶ್ರಯದಲ್ಲಿ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ ಹಾಗೂ ಸತ್ಯನಾರಾಯಣ ಪೂಜೆ ಗಾಯತ್ರಿ ಮಂದಿರದಲ್ಲಿ ಇದೇ 30ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗೆ: 9482393717.

ಪ್ರಮಾಣಪತ್ರಕ್ಕಾಗಿ ನೋಂದಣಿ
ಪಿಂಚಣಿದಾರರು ಜೀವನ್ ಪ್ರಮಾಣ್ ಸಿಸ್ಟಮ್‌ನಲ್ಲಿ ‘ಡಿಜಿಟಲ್ ಲೈಫ್ ಪ್ರಮಾಣಪತ್ರ’ಕ್ಕಾಗಿ ಹೆಸರು ನೋಂದಾಯಿಸಲು ಏ. 30ರವರೆಗೆ ಅವಧಿ ವಿಸ್ತರಿಸಲಾಗಿದೆ.

ನಗರದ ರಾಜಾರಾಮ್ ಮೋಹನ್‌ರಾಯ್ ರಸ್ತೆ, ಪೀಣ್ಯ, ಕೆ.ಆರ್.ಪುರ, ಬೊಮ್ಮಸಂದ್ರ, ಆರ್.ಆರ್.ನಗರ, ಯಲಹಂಕದಲ್ಲಿರುವ ಭವಿಷ್ಯನಿಧಿ ಕಚೇರಿಗಳಲ್ಲಿ ನೋಂದಣಿ ಮಾಡಲಾಗುತ್ತದೆ. ಪಿಂಚಣಿದಾರರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌್ ತರುವಂತೆ ಭವಿಷ್ಯ ನಿಧಿಯ ಪ್ರಾದೇಶಿಕ ಕಚೇರಿಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ: 080 25611955
ಸಂಪರ್ಕ: 080 25611955
ಹೊಲಿಗೆ ತರಬೇತಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉಚಿತ ಹೊಲಿಗೆ ತರಬೇತಿ ನೀಡಲು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಯಲಹಂಕದ ಮಿನಿ ವಿಧಾನಸೌಧದಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ಏ. 28 ಕೊನೆಯ ದಿನಾಂಕ.
ಗೋರಕ್ಷಣೆ ಹೆಸರಿನಲ್ಲಿ ಹಲ್ಲೆ: ಆರೋಪ
ಗೋರಕ್ಷಣೆ ಹೆಸರಿನಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ ಎಂದು ಅಖಿಲ ಭಾರತ ತೌಹೀದ್ ಜಮಾತ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಎ.ಮಹಮ್ಮದ್ ಘನಿ, ‘ದಾಳಿ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಅವರು ಮೌನ ವಹಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶ
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ‘ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶ’ ಮೇ 4ರಂದು ಮೈಸೂರಿನಲ್ಲಿ ನಡೆಯಲಿದೆ.

‘20 ದಿನಗಳ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದರಲ್ಲಿ ದಲಿತರು, ಶೂದ್ರರು ಮತ್ತು ಮಹಿಳಾ ಸಂಘಟನೆಗಳ ಜೊತೆಗೆ ಟಿಪ್ಪು ಚರಿತ್ರೆಯ ಸಂವಾದ ನಡೆಸುತ್ತೇವೆ’ ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಯೋಗೀಶ್ವರ ಸ್ವಾಮಿ ಮಠವು ಏ. 30ರಂದು ‘ಉಚಿತ ಆಯುರ್ವೇದ ತಪಾಸಣಾ ಶಿಬಿರ’ ಹಮ್ಮಿಕೊಂಡಿದೆ.
ವಿಳಾಸ: ಸೋಫಿಯಾ ಪ್ರೌಢಶಾಲೆ ಆವರಣ, ಬೈಯಪ್ಪಪಾಳ್ಯ, ವಜ್ರಹಳ್ಳಿ, ಕೆಎಸ್‌ಐಟಿ ಕಾಲೇಜು ಹತ್ತಿರ, ಕನಕಪುರ ರಸ್ತೆ.
ಸಂಪರ್ಕ: 9449084025

ಏರ್‌ಮನ್ ಹುದ್ದೆಗೆ ನೇಮಕಾತಿ
ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಏಪ್ರಿಲ್ 27ರಿಂದ 29ರವರೆಗೆ ಭಾರತೀಯ ವಾಯುಪಡೆಯ ಏರ್‌ಮನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

1997ರ ಜುಲೈ 7 ಹಾಗೂ 2000ದ ಡಿಸೆಂಬರ್ 20ರ ನಡುವೆ ಜನಿಸಿದ, ಕನಿಷ್ಠ 165 ಸೆಂ.ಮೀ ಎತ್ತರವುಳ್ಳ ಅವಿವಾಹಿತ ಪುರುಷರಿಗೆ ಮಾತ್ರ ಅವಕಾಶವಿದೆ. ಸಂಪರ್ಕ: 080 25592199
ತಾಂತ್ರಿಕತೆ ಕಾರ್ಯಾಗಾರ
ಕೃಷಿ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯು ಮೇ 5ರಂದು ‘ತರಕಾರಿ ಬೆಳೆಗಳ ಸಾವಯವ ಬೇಸಾಯ ತಾಂತ್ರಿಕತೆ’ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಏರ್ಪಡಿಸಿದೆ.

ನರ್ಸರಿ ನಿರ್ವಹಣೆ, ಬೇಸಾಯ ಕ್ರಮಗಳು, ರೋಗ–ಕೀಟ ನಿರ್ವಹಣೆ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ವಿಳಾಸ: ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ. ಸಂಪರ್ಕ: 9945803463
ಇಂದು ವಿದ್ಯುತ್ ವ್ಯತ್ಯಯ
ಬೆಂಗಳೂರು: ಬೆಸ್ಕಾಂ ನಿರ್ವಹಣಾ ಕಾಮಗಾರಿ ನಡೆಸಲಿರುವ ಕಾರಣ ಗುರುವಾರ ಏ. 27ರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

No comments:
Post a Comment