ಕೆ.ಆರ್. ಸಾಗರ: ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ಪರಿಸ್ಥಿತಿ ಉಲ್ಬಣವಾಗಿರುವ ಬೆನ್ನಲ್ಲೇ ಕನ್ನಂಬಾಡಿ ಕಟ್ಟೆಯಲ್ಲೂ ನೀರಿನ ಪ್ರಮಾಣ ಭಾರಿ ಕುಸಿತ ಕಾಣುತ್ತಿರುವುದು ಆತಂಕ ಮೂಡಿಸಿದೆ. ಮುಂದಿನ ಕೆಲ ದಿನಗಳಲ್ಲಿ ಈ ಭಾಗದಲ್ಲಿ ಮಳೆಯಾಗದಿದ್ದರೆ ಬೆಂಗಳೂರು, ಮೈಸೂರು, ಮಂಡ್ಯ ಸಹಿತ ಕಾವೇರಿ ಕೊಳ್ಳದ ಜನರು ಜಲಕ್ಷಾಮ ಎದುರಿಸಲು ಸಜ್ಜಾಗಬೇಕಿದೆ.
ಪ್ರತಿದಿನ ಬೆಂಗಳೂರು, ಮಂಡ್ಯ, ಮೈಸೂರು ನಗರಕ್ಕೆ ಕುಡಿಯಲು 850 ಕ್ಯೂಸೆಕ್ ನೀರು ಅಗತ್ಯವಿದ್ದು, ಅಣೆಕಟ್ಟೆಯಲ್ಲಿ ಈಗಿರುವ ನೀರು 20-25 ದಿನಗಳಿಗೆ ಸಾಕಾಗಲಿದೆ. ಅಷ್ಟರೊಳಗೆ ಮಳೆ ಬರದಿದ್ದರೆ ‘ಡೆಡ್ ಸ್ಟೋರೇಜ್’ ನೀರನ್ನು ಬಳಸುವುದು ಅನಿವಾರ್ಯವಾಗುತ್ತದೆ.
ಸದ್ಯದಲ್ಲೇ ಮಳೆ ಆಗದಿದ್ದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಜತೆಗೆ ಕಾವೇರಿ ಕೊಳ್ಳದ ಪ್ರದೇಶಗಳಿಗೂ ಕುಡಿವ ನೀರಿನ ಸಂಕಷ್ಟ ಎದುರಾಗುವುದು ನಿಶ್ಚಿತ. ಈಗಾಗಲೇ ನೂರಾರು ಗ್ರಾಮಗಳಲ್ಲಿ ಬೋರ್ವೆಲ್ಗಳು ಬರಿದಾಗಿವೆ. ಕುಡಿಯಲು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.
ಡೆಡ್ ಸ್ಟೋರೇಜ್ ನೀರಿನ ಬಳಕೆಗೆ ಮುಂದಾದಲ್ಲಿ ನದಿಯ ಜಲಚರಗಳು, ಪ್ರಾಣಿ, ಪಕ್ಷಿಗಳಿಗೆ ಅಪಾಯ ಎದುರಾಗುವುದರ ಜತೆಗೆ ಅಣೆಕಟ್ಟೆಗೂ ತೊಂದರೆ ಆಗುವ ಆತಂಕವಿದೆ. ‘60 ಅಡಿ ಕೆಳಮಟ್ಟದ ನೀರನ್ನು ಬಳಕೆ ಮಾಡಬಾರದು. 60 ರಿಂದ 74 ಅಡಿ ತನಕ ನೀರಿದ್ದಲ್ಲಿ ಅದನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಅದಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ ಕೃಷಿಗೆ ಬಳಸಬಹುದು’ ಎಂದು ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲೇ ನಿಯಮ ರೂಪಿಸಲಾಗಿದೆ. ಅಣೆಕಟ್ಟೆಗೆ 50 ಅಡಿಗಳವರೆಗೆ ಗೇಟ್ಗಳಿವೆ. ಆದರೆ ಈ ಗೇಟ್ಗಳ ಮುಂದೆ 60 ಅಡಿ ಮಟ್ಟಕ್ಕೆ ಬಂಡೆಗಳಿದ್ದು, ನೀರು ಹೊರಗೆ ಬರುವುದಿಲ್ಲ. 60 ಅಡಿಗಿಂತ ಕೆಳಗಿನ ನೀರನ್ನು ತೆಗೆಯಬೇಕಾದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಬೇಕಾಗುತ್ತದೆ. ಮೋಟಾರ್ಗಳ ಅಳವಡಿಕೆ ಜತೆಗೆ ಶುದ್ಧೀಕರಣ ಮಾಡಿ ನೀರು ಪೂರೈಸಬೇಕಾಗುತ್ತದೆ.
2012ರಲ್ಲಿ ಅತಿಯಾದ ನೀರಿನ ಅಭಾವ ಉಂಟಾಗಿದ್ದಾಗ ಜಲಾಶಯದ ನೀರು 62 ಅಡಿಗೆ ಇಳಿದಿತ್ತು. ಆಗ ಬಂಡೆಗಳನ್ನು ಒಡೆದು ನೀರು ಬಿಡಲಾಗಿತ್ತು. ನಂತರ ಮಳೆಯಾದ ಕಾರಣ ನೀರಿನ ಬವಣೆ ದೂರಾಗಿತ್ತು.

ಕಾವೇರಿ ಕೊಳ್ಳದಲ್ಲಿ ಸಂಕಷ್ಟ
ಸದ್ಯದಲ್ಲೇ ಮಳೆ ಆಗದಿದ್ದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಜತೆಗೆ ಕಾವೇರಿ ಕೊಳ್ಳದ ಪ್ರದೇಶಗಳಿಗೂ ಕುಡಿವ ನೀರಿನ ಸಂಕಷ್ಟ ಎದುರಾಗುವುದು ನಿಶ್ಚಿತ. ಈಗಾಗಲೇ ನೂರಾರು ಗ್ರಾಮಗಳಲ್ಲಿ ಬೋರ್ವೆಲ್ಗಳು ಬರಿದಾಗಿವೆ. ಕುಡಿಯಲು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.
ಜಲಚರಗಳಿಗೆ ಕಂಟಕ
ಡೆಡ್ ಸ್ಟೋರೇಜ್ ನೀರಿನ ಬಳಕೆಗೆ ಮುಂದಾದಲ್ಲಿ ನದಿಯ ಜಲಚರಗಳು, ಪ್ರಾಣಿ, ಪಕ್ಷಿಗಳಿಗೆ ಅಪಾಯ ಎದುರಾಗುವುದರ ಜತೆಗೆ ಅಣೆಕಟ್ಟೆಗೂ ತೊಂದರೆ ಆಗುವ ಆತಂಕವಿದೆ. ‘60 ಅಡಿ ಕೆಳಮಟ್ಟದ ನೀರನ್ನು ಬಳಕೆ ಮಾಡಬಾರದು. 60 ರಿಂದ 74 ಅಡಿ ತನಕ ನೀರಿದ್ದಲ್ಲಿ ಅದನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಅದಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ ಕೃಷಿಗೆ ಬಳಸಬಹುದು’ ಎಂದು ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲೇ ನಿಯಮ ರೂಪಿಸಲಾಗಿದೆ. ಅಣೆಕಟ್ಟೆಗೆ 50 ಅಡಿಗಳವರೆಗೆ ಗೇಟ್ಗಳಿವೆ. ಆದರೆ ಈ ಗೇಟ್ಗಳ ಮುಂದೆ 60 ಅಡಿ ಮಟ್ಟಕ್ಕೆ ಬಂಡೆಗಳಿದ್ದು, ನೀರು ಹೊರಗೆ ಬರುವುದಿಲ್ಲ. 60 ಅಡಿಗಿಂತ ಕೆಳಗಿನ ನೀರನ್ನು ತೆಗೆಯಬೇಕಾದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಬೇಕಾಗುತ್ತದೆ. ಮೋಟಾರ್ಗಳ ಅಳವಡಿಕೆ ಜತೆಗೆ ಶುದ್ಧೀಕರಣ ಮಾಡಿ ನೀರು ಪೂರೈಸಬೇಕಾಗುತ್ತದೆ.
ಬಂಡೆ ಒಡೆದು ನೀರು ಬಿಟ್ಟಿದ್ದರು!
2012ರಲ್ಲಿ ಅತಿಯಾದ ನೀರಿನ ಅಭಾವ ಉಂಟಾಗಿದ್ದಾಗ ಜಲಾಶಯದ ನೀರು 62 ಅಡಿಗೆ ಇಳಿದಿತ್ತು. ಆಗ ಬಂಡೆಗಳನ್ನು ಒಡೆದು ನೀರು ಬಿಡಲಾಗಿತ್ತು. ನಂತರ ಮಳೆಯಾದ ಕಾರಣ ನೀರಿನ ಬವಣೆ ದೂರಾಗಿತ್ತು.
No comments:
Post a Comment