Sunday, April 30, 2017

ಪ್ರಚಲಿತ ವಿದ್ಯಮಾನ : 01 ಮೇ 2017 : NITI Aayog looks at museums to grow tourism

The museums around the country have caught the attention of the NITI Aayog for their cultural tourism potential, and the agency has suggested the creation of a national authority to oversee them.

“There is already an existing national expert committee on museums,” the Aayog has said in its draft Three Year Action Plan for the economy. “However, an overarching authority with a broader mandate is needed to sufficiently address the issues face by museums in a coordinated manner and should be created in three years.”

Currently, all museums in India are under the jurisdiction of different departments and Ministries across the Central and State governments. There is no overarching body for their management, funding, development and maintenance.

The travel and tourism sector is a major driver of growth and employment in India, and tax reforms will be “necessary” to reduce barriers to trade and tourism, the Aayog said. It has also pitched for development of five beach destinations.

“The government and private sector should develop five exclusive tourism zones around beaches. In developing these zones, we should draw upon examples that have successfully developed tourism around beaches such as Bali, Sentosa and Antalya,” the Aayog said.

Beach holidays grow



Globally, beach holidays have grown by 18% over the last five years and remain an important segment accounting for 28% of all holiday trips.

India should “consider placing tourism in the lower tax bracket of the GST to ensure competitiveness with foreign destinations,” it added.

The Aayog has recommended that India be promoted as a tourist destination in richer Asian countries such as China, Thailand, Malaysia, Singapore and South Korea, “where prospects of attracting tourists are excellent.”

With a large population and relatively high incomes, China has been identified as a significant source of tourists.

“Income levels in countries such as Indonesia, Sri Lanka, Bangladesh and Vietnam are also rising rapidly. India also shares cultural similarity with many of these countries with Malaysia, Singapore, Thailand, Indonesia, Sri Lanka and Bangladesh even having substantial populations of Indian origin. Therefore, targeted promotion in these countries using digital media including TV advertisements can have a high yield,” the Aayog plan said.

ಪ್ರಚಲಿತ ವಿದ್ಯಮಾನ : 01 ಮೇ 2017 : EC may change recounting rules

The Election Commission is actively considering revision of its recount rules so that slips generated by the Voter Verifiable Paper Audit Trail (VVPAT) devices can be matched with the Electronic Voting Machine (EVM) count.

A top functionary of the Election Commission (EC) told The Hindu recently that the office of the Chief Election Commissioner had received thousands of representations suggesting that changes be made to the recount rules to allow tallying with VVPAT slips.

“It will be a systematic procedure,” the EC official stated. “The physical count of slips in the VVPAT through a process is very much under our consideration.”

Random count


In a recent interview to this newspaper, Delhi Chief Minister and Aam Aadmi Party (AAP) convener Arvind Kejriwal had demanded that the Election Commission randomly count VVPAT-generated slips and tally them with EVM results.

The EC functionary said that after the Centre approved the purchase of VVPAT machines, there was little point in looking at why the Commission had to send several reminders to the Government to sanction funds. “I really can’t say why it took so long,” the official stated.

Terming the the machine an “indispensable requirement” to go with the EVM, the EC functionary said the controversy around EVMs and the fairness of the voting process should be put to rest.

The EC functionary said the April-May 2019 Lok Sabha elections would be held with a VVPAT device attached to every EVM. Orders for sufficient number of VVPAT machines had already been placed and these should be made available to the EC by September-October 2018.

He said the Commission was looking to hold the Himachal Pradesh and Gujarat Assembly elections at the end of this year with VVPAT machines. Similarly, elections to the Nagaland, Tripura, Mizoram, Karnataka, Rajasthan, Madhya Pradesh and Chhatisgarh Assemblies in 2018 would be held with the VVPATs in place.


Hate speeches


Asked why the Election Commission had been unable to put an end to hate speeches during campaigns, the official said censure was one part of the EC’s actions and it also recommended filing of FIRs.

“It takes time, we don’t control the legal process,” the official said.

Reference: The Hindu

ಪ್ರಚಲಿತ ವಿದ್ಯಮಾನ : 01 ಮೇ 2017 : SAARC satellite to be launched on May 5

The “South Asia satellite” being built by India for use by countries of the South Asian Association for Regional Cooperation (SAARC) region will be launched on May 5.

This was announced by Prime Minister Narendra Modi in his Mann ki Batt radio address on Sunday in which he said the capacities of the satellite and the facilities it provides “will go a long way in addressing South Asia’s economic and developmental priorities.”

“Natural resources mapping, tele-medicine, the field of education, deeper IT connectivity or fostering people to people contact — this satellite will prove to be a boon in the progress of the entire region. It is an important step by India to enhance co-operation with the entire South Asia… it is an invaluable gift. This is an appropriate example of our commitment towards South Asia,” Mr. Modi said in his address.

The satellite was announced by Mr. Modi during the 2014 SAARC summit in Nepal and all SAARC countries have since joined it except Pakistan.

The total cost of launching the satellite is estimated to be about ₹235 crore and the cost associated with the launch will be met by the Government of India, Minister of State for Atomic Energy and Space, Dr Jitendra Singh had stated earlier in the Parliament.

The satellite called GSAT-09 enables full range of applications and services in the areas of telecommunication and broadcasting applications viz. Television, Direct-to-Home (DTH), Very Small Aperture Terminals (VSATs), Tele-education, Telemedicine and Disaster Management Support.

The 2,230 kg satellite was built by the Indian Space Research Organisation (ISRO) and has 12 Ku-band transponders. It is cuboid in shape and built around a central cylinder has a mission life of over 12 years.

It will be launched from Satish Dhawan Space Centre in Sriharikota using a Geostationary Launch Vehicle (GSLV) Mk-II launch vehicle.

The GSLV-F09 is about 50m tall and is the 11th flight of the GSLV. It is also the its fourth consecutive flight with the indigenous Cryogenic Upper Stage (CUS) engine.

Reference: Hindu

ಪ್ರಚಲಿತ ವಿದ್ಯಮಾನ : 01 ಮೇ 2017 : ಪ್ಯಾರಿಸ್ ಹವಾಮಾನ ಒಪ್ಪಂದ ಸದ್ಯವೇ ಪ್ರಮುಖ ನಿರ್ಧಾರ

ತಮ್ಮ ನೂರು ದಿನಗಳ ಆಡಳಿತ ಪೂರ್ಣಗೊಂಡ ನಿಮಿತ್ತ ಪೆನ್ಸಿಲ್ವೇನಿಯಾದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಪ್ಯಾರಿಸ್ ಒಪ್ಪಂದವು ಏಕಪಕ್ಷೀಯ ಎಂದು ದೂರಿದರು...

ವಾಷಿಂಗ್ಟನ್ : ‘ಏಕಪಕ್ಷೀಯವಾದ ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತು ಸದ್ಯದಲ್ಲೇ ದೊಡ್ಡ ನಿರ್ಧಾರ ಕೈಗೊಳ್ಳುತ್ತೇನೆ’ ಅಮೆರಿಕ ಅಧ್ಯಕ್ಷ ಟ್ರಂಪ್ ಭರವಸೆ ನೀಡಿದ್ದಾರೆ.ಹೆಚ್ಚು  ವಾಯುಮಾಲಿನ್ಯಕ್ಕೆ ಕಾರಣವಾಗಿರುವ ರಷ್ಯಾ, ಚೀನಾ, ಭಾರತ ದೇಶಗಳನ್ನು ಬಿಟ್ಟು, ಅಮೆರಿಕವನ್ನು ಮಾತ್ರ ಹವಾಮಾನ ವೈಪರೀತ್ಯ ನಿಧಿಗೆ ಹಣ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ನೂರು ದಿನಗಳ ಆಡಳಿತ ಪೂರ್ಣಗೊಂಡ ನಿಮಿತ್ತ ಪೆನ್ಸಿಲ್ವೇನಿಯಾದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಪ್ಯಾರಿಸ್ ಒಪ್ಪಂದವು ಏಕಪಕ್ಷೀಯ ಎಂದು ದೂರಿದರು.ಮಾಧ್ಯಮಗಳ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ. ‘ಸುಳ್ಳು ಸುದ್ದಿ’ ಮೂಲಕ ಮಾಧ್ಯಮಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದಿದ್ದಾರೆ.

‘ವಾಷಿಂಗ್ಟನ್‌ನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ನೀರಸ ಔತಣಕೂಟದಲ್ಲಿ ಭಾಗಿಯಾಗುವ ಬದಲು ನಿಮ್ಮೊಂದಿಗೆ ಬೆರೆಯಲು ಸಂತಸವಾಗುತ್ತಿದೆ’ ಎಂದು ಹೇಳಿದ್ದಾರೆ.

‘ಅಧ್ಯಕ್ಷರನ್ನು ಹೊರತುಪಡಿಸಿ, ಗಣ್ಯರು, ರಾಜಕೀಯ ನಾಯಕರು, ಹಾಲಿವುಡ್ ನಟರು ಹಾಗೂ ಖ್ಯಾತ ಪತ್ರಕರ್ತರು ಔತಣಕ್ಕೆ ಅಲ್ಲಿ ಸೇರಿದ್ದಾರೆ.  ಪರಸ್ಪರು ಸಾಂತ್ವನ ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ. ಆದರೆ ಮುಂದಿನ ವರ್ಷದ ಔತಣಕೂಟಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ. 30 ವರ್ಷಗಳಲ್ಲಿ ಔತಣಕೂಟಕ್ಕೆ ಗೈರುಹಾಜರಾದ ಅಮೆರಿಕದ  ಮೊದಲ ಅಧ್ಯಕ್ಷ ಎನಿಸಿದ್ದಾರೆ.

ಶ್ವೇತಭವನದ ಆನೆಯೇ ಇಲ್ಲ: ಹಾಸ್ಯ ಕಲಾವಿದ ಹಸನ್ ಮಿನಹಾಜ್ ವ್ಯಂಗ್ಯ
‘ಆನೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಸಿಕ್ಕರೂ, ಆನೆ ಮಾತ್ರ ಸಿಗಲಿಲ್ಲ’

ಭಾರತ ಸಂಜಾತ ಅಮೆರಿಕನ್ ಹಸನ್ ಮಿನಹಾಜ್ ಅವರು ಔತಣಕೂಟಕ್ಕೆ ಗೈರಾದ ಟ್ರಂಪ್ ಅವರನ್ನು ಕುರಿತು ವ್ಯಂಗ್ಯವಾಗಿ ಹೇಳಿದ ಮಾತಿದು.
ಹಸನ್ ಅವರ ಹಾಸ್ಯ ಧಾಟಿಗೆ ಔತಣಕೂಟಕ್ಕೆ ಸೇರಿದ ಜನರಿಂದ ಭಾರಿ ಕರತಾಡನ ಸಿಕ್ಕಿತು.

‘ನಮ್ಮ ದೇಶದ ನಾಯಕ ಇಲ್ಲಿಲ್ಲ. ಏಕೆಂದರೆ ಅವರು ರಷ್ಯಾದ ಮಾಸ್ಕೊದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿಗೆ ಪ್ರಯಾಣಿಸಲು ದೀರ್ಘ ಅವಧಿ ಹಿಡಿಯುತ್ತದೆ. ಅವರು ಈಗ ಪೆನ್ಸಿಲ್ವೇನಿಯಾದಲ್ಲಿ ಇದ್ದಾರೆ ಎಂದು ತಿಳಿಯಿತು. ಏಕೆಂದರೆ ಅವರು ಜೋಕ್ ಸ್ವೀಕರಿಸಲಾರರು’ ಎಂದು ಟ್ರಂಪ್ ಅವರನ್ನು ವ್ಯಂಗ್ಯ ಮಾಡಿದರು.

ಪ್ರಚಲಿತ ವಿದ್ಯಮಾನ : 01 ಮೇ 2017 : ಬಾಹ್ಯಾಕಾಶ ರಾಜತಂತ್ರ

ನವದೆಹಲಿ: ಭಾರತವು 450 ಕೋಟಿ ರೂಪಾಯಿ ವೆಚ್ಚದ ‘ದಕ್ಷಿಣ ಏಷ್ಯಾ ಉಪಗ್ರಹ’ವನ್ನು ಮೇ 5ರಂದು ಉಡಾವಣೆ ಮಾಡಲಿದೆ . ನೆರೆಹೊರೆಯ ರಾಷ್ಟ್ರಗಳಿಗೆ ಇದು ಭಾರತದ ಅತ್ಯಮೂಲ್ಯ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ತಮ್ಮ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.

ಎಂಟು ಸಾರ್ಕ್ ರಾಷ್ಟ್ರಗಳ ಪೈಕಿ ಏಳು ರಾಷ್ಟ್ರಗಳು ಈ ಯೋಜನೆಯಲ್ಲಿ ಪಾಲ್ಗೊಂಡಿವೆ. ಪಾಕಿಸ್ತಾನ ಮಾತ್ರ ಭಾರತದ ‘ಕೊಡುಗೆ’ಯನ್ನು ಬಯಸುವುದಿಲ್ಲ ಎಂದು ಹೇಳಿ ಈ ಯೋಜನೆಗೆ ಸೇರ್ಪಡೆಯಾಗಲು ನಿರಾಕರಿಸಿದೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಪರಿಕಲ್ಪನೆಯ ಅಡಿಯಲ್ಲೇ ಮುಂದುವರಿಯಲು ನಾವು ನಿರಂತರ ಯತ್ನಿಸುತ್ತಿದ್ದೇವೆ. ಈ ಪರಿಕಲ್ಪನೆ ಕೇವಲ ಭಾರತಕ್ಕೆ ಸೀಮಿತವಲ್ಲ, ಜಾಗತಿಕವಾಗಿ, ವಿಶೇಷವಾಗಿ ನೆರೆಹೊರೆಯ ರಾಷ್ಟ್ರಗಳಿಗೂ ಪ್ರಸ್ತುತವೇ ಆಗಿದೆ’ ಎಂದು ಪ್ರಧಾನಿ ನುಡಿದರು.

‘ನೆರೆಹೊರೆಯ ದೇಶ ಜತೆ ಸಹಕಾರ ಇರಬೇಕು, ಹಾಗೆಯೇ ಆ ರಾಷ್ಟ್ರಗಳ ಅಭಿವೃದ್ಧಿಯೂ ಆಗಬೇಕು. ಮೇ 5ರಂದು ಭಾರತವು ದಕ್ಷಿಣ ಏಷ್ಯಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಉಪಗ್ರಹದ ಲಾಭ ವ್ಯಾಪಕವಾಗಿದ್ದು ಯೋಜನೆಯಲ್ಲಿ ಪಾಲ್ಗೊಂಡಿರುವ ಎಲ್ಲ ರಾಷ್ಟ್ರಗಳ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲಿದೆ’ ಎಂದು ಪ್ರಧಾನಿ ಹೇಳಿದರು. ‘ಇದು ಭಾರತ ನೀಡುತ್ತಿರುವ ‘ಬೆಲೆ ಕಟ್ಟಲಾಗದ ಕೊಡುಗೆ’. ದಕ್ಷಿಣ ಏಷ್ಯಾ ಬಗೆಗಿನ ನಮ್ಮ ಬದ್ಧತೆಗೆ ಸೂಕ್ತ ಉದಾಹರಣೆ. ಇಡೀ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಇದು ಮಹತ್ವದ ಕಾಣಿಕೆ ಸಲ್ಲಿಸಲಿದೆ’ ಎಂದು ಪ್ರಧಾನಿ ನುಡಿದರು.

ಯಾವ್ಯಾವ ರಾಷ್ಟ್ರಗಳಿಗೆ ಅನುಕೂಲ: ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯಿಂದ ಭಾರತದ ಹೊರತಾಗಿ ನೇಪಾಳ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ರಾಷ್ಟ್ರಗಳಿಗೆ ಅನುಕೂಲವಾಗಲಿದೆ.

ನೈಸರ್ಗಿಕ ಸಂಪನ್ಮೂಲದ ಮ್ಯಾಪಿಂಗ್, ಟೆಲಿ-ಮೆಡಿಸಿನ್, ಶಿಕ್ಷಣ, ಐಟಿ ಸಂಪರ್ಕ ಮತ್ತು ಜನರ ನಡುವಣ ಸಂಪರ್ಕಕ್ಕೆ ಇದು ಅನುಕೂಲ ಒದಗಿಸುತ್ತದೆ. ಡಿಟಿಎಚ್, ಕೆಲವೊಂದು ವಿಸ್ಯಾಟ್ ಸಾಮರ್ಥ್ಯನ್ನು ಎಲ್ಲ 7 ರಾಷ್ಟ್ರಗಳಿಗೂ ಒದಗಿಸುವ ಈ ಉಪಗ್ರಹ ದಕ್ಷಿಣ ಏಷ್ಯಾ ರಾಷ್ಟ್ರಗಳ ಮಧ್ಯೆ ಸಂಪರ್ಕ ಕಲ್ಪಿಸಿ ಪ್ರಾಕೃತಿಕ ದುರಂತಗಳಾದಾಗ ಪರಸ್ಪರ ನೆರವಾಗಲು ಅನುಕೂಲ ಕಲ್ಪಿಸುತ್ತದೆ.

ಉಪಗ್ರಹ ವೃತ್ತಾಂತ: ದಕ್ಷಿಣ ಏಷ್ಯಾ ಉಪಗ್ರಹದ (ಎಸ್​ಎಎಸ್) ತೂಕ 2230 ಕಿಲೋ ಗ್ರಾಂ. ಇದರ ನಿರ್ವಣಕ್ಕೆ ತಗುಲಿದ ಸಮಯ 3 ವರ್ಷ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪೂರ್ಣವಾಗಿ ಸಂಪರ್ಕ ಉಪಗ್ರಹವಾಗಿ ಬಳಕೆ. 12 ಕೆಯು ಬ್ಯಾಂಡ್ ಟ್ರಾನ್ಸ್​ಪಾಂಡರ್​ಗಳನ್ನು ಹೊಂದಿದ್ದು, ನೆರೆಹೊರೆಯ ರಾಷ್ಟ್ರಗಳು ಇದನ್ನು ಸಂಪರ್ಕ ವೃದ್ಧಿಗೆ ಉಚಿತವಾಗಿ ಬಳಸಿಕೊಳ್ಳಬಹುದು. ಪ್ರತಿಯೊಂದು ರಾಷ್ಟ್ರವೂ ಕನಿಷ್ಠ ಒಂದು ಟ್ರಾನ್ಸ್ ಪಾಂಡರ್ ಸಂಪರ್ಕ ಪಡೆಯಲಿದ್ದು, ಇದನ್ನು ಬಳಸಿ ತಮ್ಮದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದು. ಇದರ ಜತೆಗೇ ದಕ್ಷಿಣ ಏಷ್ಯಾ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಬಹುದು.

ಅಪೂರ್ವ ರಾಜನೀತಿ: ದಕ್ಷಿಣ ಏಷ್ಯಾ ಪ್ರದೇಶದ ರಾಷ್ಟ್ರಗಳಿಗಾಗಿ 450 ಕೋಟಿ ರೂಪಾಯಿ ಮೊತ್ತದ ವಿಶೇಷ ಸಂಪರ್ಕ ‘ಉಪಗ್ರಹ’ ಕೊಡುಗೆ ಒದಗಿಸುವ ಮೂಲಕ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ಪರಾಕ್ರಮ ತೋರಿಸುತ್ತಿರುವ ಭಾರತ ಇದೇ ಮೊತ್ತ ಮೊದಲ ಬಾರಿಗೆ ‘ಬಾಹ್ಯಾಕಾಶ ರಾಜನೀತಿ’ಯನ್ನು ಪ್ರದರ್ಶಿಸಿದೆ.

ಪ್ರಧಾನಿ ಆದೊಡನೆ ಪ್ರಸ್ತಾಪ: ಪ್ರಧಾನಿ ಮೋದಿ ಅವರು 2014ರಲ್ಲಿ ನೇಪಾಳದಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಅಭಿವೃದ್ಧಿಯಲ್ಲಿ ಹಂಚಿಕೊಳ್ಳಬಹುದಾದ ಮಾಹಿತಿ ಉಪಗ್ರಹವನ್ನು ಭಾರತವು ಉಡಾವಣೆ ಮಾಡುವ ಏಕಪಕ್ಷೀಯ ಪ್ರಸ್ತಾಪವನ್ನು ಪ್ರಕಟಿಸಿದ್ದರು. ಮೊದಲಿಗೆ ಇದನ್ನು ‘ಸಾರ್ಕ್ ಉಪಗ್ರಹ’ ಎಂಬುದಾಗಿ ಹೆಸರಿಸಲಾಗಿತ್ತು. ಪಾಕಿಸ್ತಾನವು ಯೋಜನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬಳಿಕ ದಕ್ಷಿಣ ಏಷ್ಯಾ ಉಪಗ್ರಹ ಎಂಬುದಾಗಿ ಹೆಸರಿಸಲಾಯಿತು.

ಚಂದ್ರ ಗ್ರಾಮ ಚೀನಾ, ಯೂರೋಪ್ ಯೋಜನೆ: ಚಂದ್ರನ ಮೈಲ್ಮೈಯಲ್ಲಿ ವಿವಿಧ ರೀತಿಯ ಸಂಶೋಧನೆ ಮತ್ತು ವಾಣಿಜ್ಯ ಉದ್ದೇಶಗಳಿಗೋಸ್ಕರ ಚೀನಾ ಮತ್ತು ಯೂರೋಪ್ ಜಂಟಿಯಾಗಿ ಚಂದ್ರ ಗ್ರಾಮ ನಿರ್ವಣಕ್ಕೆ ಮುಂದಾಗಿವೆ. ಚಂದ್ರನಲ್ಲಿ ಗಣಿಗಾರಿಕೆ ಮತ್ತು ಸ್ಪೇಸ್ ಟೂರಿಸಂನಂತಹ ಕಾರ್ಯಕ್ಕೆ ಚಂದ್ರ ಗ್ರಾಮ ಯೋಜನೆ ಬಳಕೆಯಾಗಲಿದೆ. ಬಾಹ್ಯಾಕಾಶ ಆಧಾರಿತ ವಿವಿಧ ಸಂಶೋಧನೆ ಮತ್ತು ಉದ್ಯಮಕ್ಕಾಗಿ ಜಾಗತಿಕ ಪೈಪೋಟಿ ನಡೆಯುತ್ತಿರುವ ಸಮಯದಲ್ಲೇ ಉಭಯ ರಾಷ್ಟ್ರಗಳು ಚಂದ್ರ ಗ್ರಾಮ ನಿರ್ವಣಕ್ಕೆ ಮುಂದಾಗಿರುವುದು ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗೆ ದಾರಿ ಮಾಡಿಕೊಡಲಿದೆ.

ಪ್ರಚಲಿತ ವಿದ್ಯಮಾನ : 30 ಏಪ್ರಿಲ್ 2017 : ಮಹಾರಾಷ್ಟ್ರದ ಭಿಲಾರ್ ದೇಶದ ಮೊತ್ತಮೊದಲ ಪುಸ್ತಕ ಗ್ರಾಮ

ಮುಂಬೈ: ಮಹಾರಾಷ್ಟ್ರದಲ್ಲಿ ಸಹ್ಯಾದ್ರಿಯ ಮಹಾಬಲೇಶ್ವರ- ಪಂಚಗನಿ ಗಿರಿಧಾಮದ ಮಧ್ಯೆ ಇರುವ ಭಿಲಾರ್ ಗ್ರಾಮ ಇನ್ನು ಮುಂದೆ ಭಾರತದ ಮೊತ್ತ ಮೊದಲ ‘ಪುಸ್ತಕಗಳ ಗ್ರಾಮ’ವೆಂದೇ ಹೆಸರುವಾಸಿಯಾಗಲಿದೆ. ಮೇ 4ರಂದು ಈ ಪುಸ್ತಕಗ್ರಾಮವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಪುಸ್ತಕಗಳನ್ನು ಸಂಗ್ರಹಿಸಲು ಹಳ್ಳಿಯಲ್ಲಿರುವ ಮನೆಗಳು, ಶಾಲೆಗಳು, ದೇವಸ್ಥಾನಗಳು ಹಾಗೂ ಕೆಲವು ಸಾರ್ವಜನಿಕ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸುಮಾರು 15,000 ಪುಸ್ತಕಗಳನ್ನು ಪ್ರವಾಸಿಗರಿಗಾಗಿ ಒದಗಿಸಲಾಗುವುದು. ಗ್ರಾಮದಲ್ಲಿನ ಕಲಾವಿದರು ಪುಸ್ತಕದ ಓದಿಗೆ ನಿಗದಿಪಡಿಸಲಾದ ಸ್ಥಳಗಳನ್ನು ವಿಶೇಷವಾಗಿ ಅಲಂಕರಿಸಿ ಸಜ್ಜುಗೊಳಿಸುತ್ತಿದ್ದು, 25ಕ್ಕೂ ಹೆಚ್ಚು ಸಾಹಿತ್ಯ ಪ್ರಕಾರಗಳನ್ನು ಗ್ರಾಮದಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ಭಾರತದ ಮೊದಲ ಪುಸ್ತಕಗಳ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಹಾರಾಷ್ಟ್ರದ ಸಂಸ್ಕೃತಿ ಹಾಗೂ ಮರಾಠಿ ಭಾಷಾ ಇಲಾಖೆಯ ಸಚಿವ ವಿನೋದ್ ತಾವಡೆ ಶುಕ್ರವಾರ ತಿಳಿಸಿದರು. ಇಂಗ್ಲೆಂಡಿನ ವೇಲ್ಸ್​ನಗರದಲ್ಲಿರುವ ಹೇ ಆನ್ ವೇ ಎಂಬ ಗ್ರಾಮ ಪುಸ್ತಕದ ಅಂಗಡಿಗಳು ಹಾಗೂ ಸಾಹಿತ್ಯೋತ್ಸವಗಳಿಗೆಂದೇ ಹೆಸರುವಾಸಿಯಾಗಿದ್ದು, ಈ ಪರಿಕಲ್ಪನೆ ಹೇ ಆನ್ ವೇ ಗ್ರಾಮದಿಂದಲೇ ಸ್ಪೂರ್ತಿ ಪಡೆದಿದೆ. ಮುಂಬರುವ ದಿನಗಳಲ್ಲಿ ಸಾಹಿತ್ಯೋತ್ಸವಗಳನ್ನು, ವಿಶೇಷ ಪುಸ್ತಕ ಪ್ರದರ್ಶನಗಳು, ಸಾಹಿತಿಗಳೊಂದಿಗೆ ಮಾತುಕತೆ, ಪುಸ್ತಕದ ಓದು ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಪ್ರಚಲಿತ ವಿದ್ಯಮಾನ : 30 ಏಪ್ರಿಲ್ 2017 : ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯ

ಬೆಂಗಳೂರು: ತಾಲೂಕು ಕಚೇರಿಗಳಲ್ಲಿ ವಿವಿಧ ಯೋಜನೆಗಳನ್ನು ಒದಗಿಸುವ ‘ಪಡಸಾಲೆ‘ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಇದೀಗ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ‘ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರ’ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಯೋಜನೆಗಳ ಫಲ ಪಡೆಯಲು ಬರುವವರು ಇಲಾಖೆಯಿಂದ ಇಲಾಖೆಗೆ ಅಲೆದಾಡಿ, ಸಮಯ ವ್ಯರ್ಥ ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ಸರ್ಕಾರ ಈ ಜನಸೇವಾ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದ್ದು, ಇದೊಂದು ಹೊಸ ಪ್ರಯೋಗವಾಗಿದೆ.

ಸರ್ಕಾರ ಈಗಾಗಲೇ ನಾಡಕಚೇರಿಗಳಲ್ಲಿ ಅಟಲ್ಜೀ ಜನಸ್ನೇಹಿ ಕೇಂದ್ರಗಳನ್ನು, ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಜನಸ್ನೇಹಿ ಕೇಂದ್ರಗಳನ್ನು ತೆರೆದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ 100ಕ್ಕೂ ಅಧಿಕ ಸೇವೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದ್ದು, ಈ ಕೇಂದ್ರಗಳು ಯಶಸ್ವಿಯಾಗಿದೆ. ಆ ಕೇಂದ್ರಗಳನ್ನು ಈಗ ಮತ್ತಷ್ಟು ವಿಸ್ತರಿಸಿ ಜಿಲ್ಲಾ ಕೇಂದ್ರಗಳಲ್ಲೂ ವಿವಿಧ ಇಲಾಖೆಯ ಸೌಲಭ್ಯಗಳು ಜನರಿಗೆ ಸಿಗುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ.

ಐದು ಜಿಲ್ಲಾ ಕೇಂದ್ರಗಳಲ್ಲಿ ಪ್ರಾಯೋಗಿಕ ಆರಂಭ: ಸರ್ಕಾರ ಪ್ರಾಯೋಗಿಕವಾಗಿ ಮೈಸೂರು, ದಾವಣಗೆರೆ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸುತ್ತಿದೆ. ಆ ನಂತರ ಉಳಿದ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಿದೆ. ಇದಕ್ಕೆ ಹೆಚ್ಚಿನ ಮೊತ್ತವನ್ನೇನೂ ಖರ್ಚು ಮಾಡುತ್ತಿಲ್ಲ. ಕಂದಾಯ ಇಲಾಖೆಗೆ ಬಜೆಟ್ನಲ್ಲಿ ಒದಗಿಸಿರುವ 5532 ಕೋಟಿ ರೂ.ಗಳ ಮೊತ್ತದಲ್ಲೇ ಈ ಉದ್ದೇಶಕ್ಕೂ ಹಣ ಬಳಕೆ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಮೂಲಗಳು ಖಚಿತಪಡಿಸಿವೆ.

ಎಫ್ಐಆರ್ ದಾಖಲಿಸಲು ಅವಕಾಶ

ಬಹು ಮುಖ್ಯವಾಗಿ ಈ ಕೇಂದ್ರಗಳಲ್ಲಿ ಎಫ್ಐಆರ್ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಪೊಲೀಸ್ ದೂರು ನೀಡುವ ಕಿಯಾಸ್ಕ್ ಗಳನ್ನು ಸ್ಥಾಪಿಸಲಾಗಿತ್ತು. ಆದರೆ ಅವು ವಿಫಲವಾಗಿದ್ದವು. ಆದರೆ ಈ ಸ್ಪಂದನ ಜನಸೇವಾ ಕೇಂದ್ರಗಳಲ್ಲಿ ಎಫ್ಐಆರ್ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಎಫ್ಐಆರ್ನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಠಾಣೆಗಳಿಗೆ ಕಳುಹಿಸಲಾಗುತ್ತದೆ.

ಏನೇನು ಸೇವೆ?


ನಾಡ ಕಚೇರಿಗಳಲ್ಲಿರುವ ಅಟಲ್ಜಿ ಜನಸ್ನೇಹಿ ಕೇಂದ್ರ, ಭೂಮಿ, ಸರ್ವೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಾಗುವ ಸೇವೆಗಳನ್ನು ಕಾಲಾವಧಿಯಲ್ಲಿ ಒದಗಿಸುವುದು ಈ ಕೇಂದ್ರಗಳ ಸ್ಥಾಪನೆಯ ಉದ್ದೇಶವಾಗಿದೆ. ಅಟಲ್ಜಿ ಕೇಂದ್ರಗಳಲ್ಲಿ ಜಾತಿ, ಆದಾಯ, ಮದುವೆ, ಭೂಮಿ ವಸತಿ, ಕೃಷಿ, ವಿಧವಾ, ನಿರುದ್ಯೋಗ ಪ್ರಮಾಣ ಪತ್ರಗಳು ದೊರಕುತ್ತವೆ. ಆ ಸೇವೆಗಳಿಗೆ ಜಿಲ್ಲಾ ಕೇಂದ್ರಗಳಲ್ಲಿ ಅಟಲ್ಜಿ ಕೇಂದ್ರವನ್ನು ಹುಡುಕಿ ಅಲೆಯಬೇಕಾಗಿಲ್ಲ. ಪಡಿತರ ಚೀಟಿ, ಆಹಾರ ಪೂರೈಕೆಯ ಸಮಸ್ಯೆ, ಡಿಎಲ್ಗೆ ಅರ್ಜಿ, ಪಹಣಿ ಹೀಗೆ ವಿವಿಧ ಸೌಲಭ್ಯಗಳು ಒಂದೇ ಸೂರಿನಲ್ಲಿ ದೊರಕುತ್ತವೆ. ಇಲ್ಲಿ ದಾಖಲಾಗುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇಲಾಖೆಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ. ತಕ್ಷಣ ನೀಡಬಹುದಾದ ಸೌಲಭ್ಯಗಳನ್ನು ಅಲ್ಲಿಯೇ ಒದಗಿಸಲಾಗುತ್ತದೆ. ಎಷ್ಟು ಸೇವೆಗಳು ಒದಗಿಸಬೇಕು ಎಂಬುದು ಸದ್ಯದಲ್ಲಿಯೇ ನಿರ್ಧಾರವಾಗಲಿದೆ. ಸಾಧಕಬಾಧಕಗಳನ್ನು ಪರಿಶೀಲನೆ ಮಾಡಿಕೊಂಡು ಇನ್ನೂ ಹೆಚ್ಚಿನ ಇಲಾಖೆಗಳ ಸೇವೆಗಳನ್ನು ಒದಗಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ಜಿಲ್ಲಾಧಿಕಾರಿಗೆ ಜವಾಬ್ದಾರಿ

ಜಿಲ್ಲಾಧಿಕಾರಿಗಳು ಈ ಕೇಂದ್ರಗಳ ಸ್ಥಾಪನೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅಗತ್ಯ ಸಿಬ್ಬಂದಿ ಹಾಗೂ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕವೇ ಒದಗಿಸಲಾಗುತ್ತದೆ. ಸಿಬ್ಬಂದಿಯನ್ನು ಹೊರಗುತ್ತಿಗೆಯ ಮೂಲಕ ನೇಮಕ ಮಾಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಡಿಸೆಂಬರ್ನಲ್ಲಿ ಐದು ಜಿಲ್ಲೆಗಳಲ್ಲಿಯೂ ಸೇವೆ ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿವೆ.

ಬಾಪೂಜಿ ಕೇಂದ್ರ ಯಶಸ್ವಿ


ರಾಜ್ಯದ 4545 ಗ್ರಾಮ ಪಂಚಾಯಿತಿಗಳಲ್ಲಿ ಆರಂಭವಾಗಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಹಣಿ ಕೊಡುವ ಯೋಜನೆ ಯಶಸ್ವಿಯಾಗಿದ್ದು ಕೇವಲ 5 ತಿಂಗಳಿನಲ್ಲಿ 6,78,459 ಪಹಣಿಯನ್ನು ನೀಡಲಾಗಿದೆ. ಆ ಕೇಂದ್ರದ ಯಶಸ್ಸೇ ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರದ ಸ್ಥಾಪನೆಗೆ ಕಾರಣ ಎಂದು ಮೂಲಗಳು ಖಚಿತಪಡಿಸಿವೆ.

ಸಾಫ್ಟ್ವೇರ್ ಸಿದ್ಧ


ಭೂ ಮಾಲೀಕರಿಗೆ ಪಹಣಿಯಲ್ಲಿ ಆಗುವ ಬದಲಾವಣೆಗಳ ಮಾಹಿತಿಯನ್ನು ಎಸ್ಎಂಎಸ್ ಮೂಲಕ ರವಾನಿಸುವ ಕಾರ್ಯವನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ. ಅದಕ್ಕಾಗಿ ತಂತ್ರಾಂಶವನ್ನು ಸಿದ್ಧಪಡಿಸಿದೆ. ಭೂಮಾಲೀಕರ ಆಧಾರ್ ಸಂಖ್ಯೆ, ಭಾವಚಿತ್ರವನ್ನು ಸರ್ವೆ ನಂಬರ್ ಜತೆಗೆ ಜೋಡಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಈ ಯೋಜನೆ ಶೀಘ್ರದಲ್ಲಿ ಆರಂಭವಾಗಲಿದೆ.

ಪ್ರಚಲಿತ ವಿದ್ಯಮಾನ : 30 ಏಪ್ರಿಲ್ 2017 : ಜಗದಗಲಕ್ಕೆ ಜಗಜ್ಯೋತಿ ವಚನ ಸಂಪುಟ

ನವದೆಹಲಿ: ಅಕ್ಕಮಹಾದೇವಿ, ಅಲ್ಲಮಪ್ರಭು ಸಹಿತ 173 ಶರಣರು ಬರೆದಿರುವ ಬಸವಣ್ಣನವರ ಆಯ್ದ 2500 ವಚನಗಳನ್ನೊಳಗೊಂಡ, 23 ಭಾಷೆಗಳಿಗೆ ಅನುವಾದವಾಗಿರುವ ವಚನ ಸಂಪುಟಗಳನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.

ಬಸವಣ್ಣನವರ ತತ್ವ, ವಚನ, ಉಪದೇಶಗಳು ಎಲ್ಲಾ ಕಾಲದಲ್ಲೂ ಪ್ರಸ್ತುತ ಎಂದು ಕೊಂಡಾಡಿದ ಪ್ರಧಾನಿ ಮೋದಿ, ತ್ರಿವಳಿ ತಲಾಖ್ ಪದ್ಧತಿಯಿಂದ ಕಂಗೆಟ್ಟಿರುವ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಮುಸ್ಲಿಂ ಸಮುದಾಯದ ಜನರಿಗೆ ಬಸವಣ್ಣನವರ ತತ್ವಗಳೇ ಪ್ರೇರಕ ಶಕ್ತಿಯಾಗಬೇಕು. ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್​ನಿಂದ ಮುಕ್ತಿ ನೀಡಿ, ಭಾರತೀಯ ಮುಸ್ಲಿಮರು ಜಗತ್ತಿನ ಮುಸ್ಲಿಂ ಸಮುದಾಯಕ್ಕೆ ಆದರ್ಶಪ್ರಾಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ಅನಿಷ್ಟ ಪದ್ಧತಿ ಬಡಿದಟ್ಟಲು ಮುಸ್ಲಿಂ ಸಮುದಾಯದವರು ಮುಂದೆ ಬಂದೇ ಬರುತ್ತಾರೆ ಎಂಬ ಭರವಸೆ ನನ್ನದು ಎಂದು ತಿಳಿಸಿದರು.

23 ಭಾಷೆಗಳಿಗೆ ಅನುವಾದವಾಗಿರುವ ವಚನ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, 50 ವರ್ಷ ಪೂರೈಸಿರುವ ಬಸವ ಸಮಿತಿ, ಬಸವೇಶ್ವರನ ಸಂದೇಶವನ್ನು ವಿಶ್ವಕ್ಕೆ ರವಾನಿಸಿ ಬಹುದೊಡ್ಡ ಸಾಧನೆ ಮಾಡಿದೆ. ಆ ಸಮಿತಿಗೆ ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ. ಬಸವಣ್ಣನವರ ವಚನಗಳನ್ನೊಳಗೊಂಡ ವಚನ ಸಂಪುಟ ರಚಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದ ಹಿಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಹಾಗೂ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಡಾ.ಎಂ.ಎಂ. ಕಲ್ಬುರ್ಗಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ. ತಂದೆ ಶುರು ಮಾಡಿದ್ದ ಕಾರ್ಯವನ್ನು ನಿಜಾರ್ಥದಲ್ಲಿ ಪೂರ್ಣಗೊಳಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟವರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಎಂದರು.

ನೋಟು ರದ್ಧತಿ ನಂತರ


ವಚನ ಸಂಪುಟ ಬಿಡುಗಡೆ ಬಗ್ಗೆ ಅರವಿಂದ ಜತ್ತಿ ನನ್ನೊಂದಿಗೆ ರ್ಚಚಿಸಿದ್ದರು ಎಂದ ಪ್ರಧಾನಿ, ಆಗ ಸಂಸತ್ತಿನಲ್ಲಿ ನೋಟು ರದ್ದತಿಯದ್ದೇ ಚರ್ಚೆ. ಪ್ರತಿ ದಿನ ಬೇರೆಯವರ ಜೇಬುಗಳಿಗೆ ಕೈ ಹಾಕುತ್ತಿದ್ದ ಮಂದಿ ಅಂದು ಅವರ ಜೇಬುಗಳಿಗೇ ಕೈ ಹಾಕಿ ಈ ನೋಟು ಏನು ಮಾಡುವುದಪ್ಪಾ ಎಂದು ಚಿಂತೆಗೀಡಾಗಿದ್ದರು ಎಂದರು.

ತ್ರಿವಳಿ ತಲಾಕ್ ಬೇಡ, ಬಸವಣ್ಣ ಹೇಳಿದ್ದು ಇದನ್ನೇ


ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ತ್ರಿವಳಿ ತಲಾಕ್ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆಧುನಿಕ ವ್ಯವಸ್ಥೆಗಳನ್ನು ಒಪ್ಪಿಕೊಂಡು, ಸಮಾಜದ ನಿಕೃಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಜನರೇ ಮುಂದಾಗುತ್ತಾರೆ ಎಂಬ ಆಶಾಭಾವನೆ ನನ್ನದು. ಮುಸ್ಲಿಂ ಸಮುದಾಯದಲ್ಲೂ ಇಂಥ ಪ್ರಬುದ್ಧ ವ್ಯಕ್ತಿಗಳು ಖಂಡಿತಾ ಮುಂದೆ ಬಂದು ಅಸಮಾನತೆಯಿಂದ ಬಳಲಿರುವ ಮುಸ್ಲಿಂ ಮಹಿಳೆಯರನ್ನು ರಕ್ಷಿಸುತ್ತಾರೆ. ಇದರಿಂದ ಮುಸ್ಲಿಂ ಮಹಿಳೆಯರು ಸಂತೋಷ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲೂ ಸಾಧ್ಯವಾಗುತ್ತದೆ. ಭಾರತೀಯ ಮುಸಲ್ಮಾನರೇ ಈ ಘನ ಕಾರ್ಯಕ್ಕೆ ಮುಂದಾಗಿ ವಿಶ್ವದ ಮುಸ್ಲಿಂ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಆಶಯ, ವಿಶ್ವಾಸ ನನ್ನಲ್ಲಿದೆ. ಏಕೆಂದರೆ ನಮ್ಮ ದೇಶದ ಮಣ್ಣಿನ ಗುಣವೇ ಅಂಥದ್ದು. ಬಸವಣ್ಣನವರು ಕೂಡ ಅನುಭವ ಮಂಟಪದಲ್ಲಿ ಇದನ್ನಲ್ಲವೆ ಹೇಳಿದ್ದು. ಈ ಅತಿ ಸೂಕ್ಷ್ಮ ವಿಷಯ ರಾಜಕಾರಣದಲ್ಲಿ ಸಿಲುಕುವಂತೆ ಮಾಡಬೇಡಿ. ಮುಸ್ಲಿಂ ಮಹಿಳೆಯರ ರಕ್ಷಣೆ ನಿಮ್ಮ ಕೈಯಲ್ಲಿದೆ ಎಂದು ಮುಸ್ಲಿಂ ಸಮಾಜದ ನನ್ನ ಸಹೋದರರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮೋದಿ ಹೇಳಿದರು.

ನಿಸ್ವಾರ್ಥ ಮನಸ್ಸಿನಿಂದ ಬಂದಿದ್ದರು


ಬಸವಣ್ಣನವರ ವಿಚಾರಗಳು ಲಂಡನ್​ನ ಥೇಮ್್ಸ ನದಿ ದಂಡೆವರೆಗೆ ವಿಸ್ತರಿಸಿದೆ. ಅಲ್ಲಿ ಬಸವಣ್ಣನವರ ಪ್ರತಿಮೆ ಉದ್ಘಾಟನೆ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಆ ದಿನದಂದು ಅಲ್ಲಿ ಮಳೆ ಬರುತ್ತಿದ್ದರೂ, ಜನ ಪ್ರತಿಮೆ ನೋಡಲು, ಅವರ ಆದರ್ಶಗಳ ಬಗ್ಗೆ ಕೇಳಲು ನಿಸ್ವಾರ್ಥ ಮನಸ್ಸಿನಿಂದ ಬಂದಿದ್ದರು. 800 ವರ್ಷಗಳ ಹಿಂದಿನ ಬಸವಣ್ಣನವರ ವಚನಗಳು, ನೀತಿ, ಉಪದೇಶಗಳು ಇಂದಿಗೂ ನೂರಕ್ಕೆ ನೂರರಷ್ಟು ಪ್ರಸ್ತುತ ಎಂದು ಮೋದಿ ಕೊಂಡಾಡಿದರು.

ಪ್ರಚಲಿತ ವಿದ್ಯಮಾನ : 30 ಏಪ್ರಿಲ್ 2017 : ಗೂಗಲ್ ಸಿಇಒ ಪಿಚೈ ವೇತನ 1,285 ಕೋಟಿ ರೂಪಾಯಿ!

ಹ್ಯೂಸ್ಟನ್: ಗೂಗಲ್ಸ್​ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭಾರತೀಯ ಸಂಜಾತ (ಸಿಇಒ) ಸುಂದರ್ ಪಿಚೈ ಅವರು ಕಳೆದ ವರ್ಷ ಪಡೆದ ವೇತನ ಅಂದಾಜು 200 ಮಿಲಿಯನ್ ಡಾಲರ್ (1,285 ಕೋಟಿ ರೂಪಾಯಿ). ಇದು ಅವರು 2015ರ ಸಾಲಿನಲ್ಲಿ ಗಳಿಸಿದ್ದ ವೇತನದ ಮೊತ್ತದ ದುಪ್ಪಟ್ಟು. 44ರ ಹರೆಯದ ಪಿಚೈ

ಅವರು ಕಳೆದ ಸಾಲಿನಲ್ಲಿ 650 ಸಾವಿರ ಡಾಲರ್ ವೇತನವನ್ನು ಪಡೆದಿದ್ದಾರೆ. ಇದು 2015ರಲ್ಲಿ ಅವರು ಗಳಿಸಿದ್ದ ವೇತನಕ್ಕಿಂತ ಸ್ವಲ್ಪ ಕಡಿಮೆ. ದೀರ್ಘಕಾಲದಿಂದ ಗೂಗಲ್ ನೌಕರರಾಗಿದ್ದು, 2015ರ ಆಗಸ್ಟ್ ತಿಂಗಳಲ್ಲಿ ಕಂಪನಿಯ ಮರುಸಂಘಟನೆಯಾದಾಗ ಸಿಇಒ ಆಗಿ ನೇಮಕಗೊಂಡಿದ್ದ ಪಿಚೈ, 2016ರಲ್ಲಿ 198.7 ಮಿಲಿಯನ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ಪಡೆದಿದ್ದರು. ಇದು 2015ರಲ್ಲಿ ಅವರು ಪಡೆದಿದ್ದ 99.8 ಮಿಲಿಯನ್ ಡಾಲರ್ ಬಹುಮಾನದ ದುಪ್ಪಟ್ಟು ಮೊತ್ತವಾಗಿತ್ತು. ಹೀಗಾಗಿ 2016ರ ಸಾಲಿನ ಅವರ ವೇತನ 2015ರ ದುಪ್ಪಟ್ಟು ಪ್ರಮಾಣಕ್ಕೆ ಏರಿತ್ತು. 2015ರ ಸಾಲಿನಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚು ವೇತನ ಗಳಿಸಿದ ಸಿಇಒಗಳ ಸಾಲಿನಲ್ಲಿ ಪಿಚೈ 5ನೇ ಸ್ಥಾನದಲ್ಲಿ ಇದ್ದರು. ಪ್ಯಾಟ್ರಿಕ್ ಸೂನ್ ಶಿಯೊಂಗ್ (ನ್ಯಾಂಟ್​ಕೆ ವೆಸ್ಟ್, 147.6 ಮಿಲಿಯನ್ ಡಾಲರ್), ಜೊ. ಕಿಯಾನಿ (ಮಾಸಿಮೊ ಕಾರ್ಪೆರೇಷನ್, 119 ಮಿಲಿಯನ್ ಡಾಲರ್), ಮೈಕೆಲ್ ಫ್ರೖೆಸ್(ಲಿಬರ್ಟಿ ಗ್ಲೋಬಲ್, 111.9 ಮಿಲಿಯನ್ ಡಾಲರ್), ಸರ್ ಮಾರ್ಟಿನ್ ಸೊರ್ರೆಲ್ (ಡಬ್ಲ್ಯೂಪಿಪಿ, 103 ಮಿಲಿಯನ್ ಡಾಲರ್) ಅವರು ಮೊದಲ ನಾಲ್ಕು ಸ್ಥಾನಗಳಲ್ಲಿ ಇದ್ದರು.

ಭಾರತದಲ್ಲಿ ಅತ್ಯಂತ ಹೆಚ್ಚು ವೇತನ ಪಡೆಯುತ್ತಿರುವ ಸಿಇಒಗಳು

ಎನ್.ಎಂ. ನಾಯ್್ಕ (ಎಲ್ ಆಂಡ್ ಟಿ) 66.14 ಕೋಟಿ ರೂ.

ವಿಶಾಲ್ ಸಿಕ್ಕ (ಇನ್​ಫೋಸಿಸ್) 48.73 ಕೋಟಿ ರೂ.

ದೇಶಬಂಧು ಗುಪ್ತ (ಲ್ಯುಪಿನ್ ಲಿಮಿಟೆಡ್) 44.8 ಕೋಟಿ ರೂ.

ಪ್ರಚಲಿತ ವಿದ್ಯಮಾನ : 29 ಏಪ್ರಿಲ್ 2017 : ಕನ್ನಂಬಾಡಿ ಖಾಲಿ, ಡೆಡ್​ಸ್ಟೋರೇಜ್​ಗೂ ಕನ್ನ

ಕೆ.ಆರ್. ಸಾಗರ: ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ಪರಿಸ್ಥಿತಿ ಉಲ್ಬಣವಾಗಿರುವ ಬೆನ್ನಲ್ಲೇ ಕನ್ನಂಬಾಡಿ ಕಟ್ಟೆಯಲ್ಲೂ ನೀರಿನ ಪ್ರಮಾಣ ಭಾರಿ ಕುಸಿತ ಕಾಣುತ್ತಿರುವುದು ಆತಂಕ ಮೂಡಿಸಿದೆ. ಮುಂದಿನ ಕೆಲ ದಿನಗಳಲ್ಲಿ ಈ ಭಾಗದಲ್ಲಿ ಮಳೆಯಾಗದಿದ್ದರೆ ಬೆಂಗಳೂರು, ಮೈಸೂರು, ಮಂಡ್ಯ ಸಹಿತ ಕಾವೇರಿ ಕೊಳ್ಳದ ಜನರು ಜಲಕ್ಷಾಮ ಎದುರಿಸಲು ಸಜ್ಜಾಗಬೇಕಿದೆ.

ಪ್ರತಿದಿನ ಬೆಂಗಳೂರು, ಮಂಡ್ಯ, ಮೈಸೂರು ನಗರಕ್ಕೆ ಕುಡಿಯಲು 850 ಕ್ಯೂಸೆಕ್ ನೀರು ಅಗತ್ಯವಿದ್ದು, ಅಣೆಕಟ್ಟೆಯಲ್ಲಿ ಈಗಿರುವ ನೀರು 20-25 ದಿನಗಳಿಗೆ ಸಾಕಾಗಲಿದೆ. ಅಷ್ಟರೊಳಗೆ ಮಳೆ ಬರದಿದ್ದರೆ ‘ಡೆಡ್ ಸ್ಟೋರೇಜ್’ ನೀರನ್ನು ಬಳಸುವುದು ಅನಿವಾರ್ಯವಾಗುತ್ತದೆ.


ಕಾವೇರಿ ಕೊಳ್ಳದಲ್ಲಿ ಸಂಕಷ್ಟ


ಸದ್ಯದಲ್ಲೇ ಮಳೆ ಆಗದಿದ್ದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಜತೆಗೆ ಕಾವೇರಿ ಕೊಳ್ಳದ ಪ್ರದೇಶಗಳಿಗೂ ಕುಡಿವ ನೀರಿನ ಸಂಕಷ್ಟ ಎದುರಾಗುವುದು ನಿಶ್ಚಿತ. ಈಗಾಗಲೇ ನೂರಾರು ಗ್ರಾಮಗಳಲ್ಲಿ ಬೋರ್​ವೆಲ್​ಗಳು ಬರಿದಾಗಿವೆ. ಕುಡಿಯಲು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.

ಜಲಚರಗಳಿಗೆ ಕಂಟಕ


ಡೆಡ್ ಸ್ಟೋರೇಜ್ ನೀರಿನ ಬಳಕೆಗೆ ಮುಂದಾದಲ್ಲಿ ನದಿಯ ಜಲಚರಗಳು, ಪ್ರಾಣಿ, ಪಕ್ಷಿಗಳಿಗೆ ಅಪಾಯ ಎದುರಾಗುವುದರ ಜತೆಗೆ ಅಣೆಕಟ್ಟೆಗೂ ತೊಂದರೆ ಆಗುವ ಆತಂಕವಿದೆ. ‘60 ಅಡಿ ಕೆಳಮಟ್ಟದ ನೀರನ್ನು ಬಳಕೆ ಮಾಡಬಾರದು. 60 ರಿಂದ 74 ಅಡಿ ತನಕ ನೀರಿದ್ದಲ್ಲಿ ಅದನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಅದಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ ಕೃಷಿಗೆ ಬಳಸಬಹುದು’ ಎಂದು ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲೇ ನಿಯಮ ರೂಪಿಸಲಾಗಿದೆ. ಅಣೆಕಟ್ಟೆಗೆ 50 ಅಡಿಗಳವರೆಗೆ ಗೇಟ್​ಗಳಿವೆ. ಆದರೆ ಈ ಗೇಟ್​ಗಳ ಮುಂದೆ 60 ಅಡಿ ಮಟ್ಟಕ್ಕೆ ಬಂಡೆಗಳಿದ್ದು, ನೀರು ಹೊರಗೆ ಬರುವುದಿಲ್ಲ. 60 ಅಡಿಗಿಂತ ಕೆಳಗಿನ ನೀರನ್ನು ತೆಗೆಯಬೇಕಾದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಬೇಕಾಗುತ್ತದೆ. ಮೋಟಾರ್​ಗಳ ಅಳವಡಿಕೆ ಜತೆಗೆ ಶುದ್ಧೀಕರಣ ಮಾಡಿ ನೀರು ಪೂರೈಸಬೇಕಾಗುತ್ತದೆ.

ಬಂಡೆ ಒಡೆದು ನೀರು ಬಿಟ್ಟಿದ್ದರು!


2012ರಲ್ಲಿ ಅತಿಯಾದ ನೀರಿನ ಅಭಾವ ಉಂಟಾಗಿದ್ದಾಗ ಜಲಾಶಯದ ನೀರು 62 ಅಡಿಗೆ ಇಳಿದಿತ್ತು. ಆಗ ಬಂಡೆಗಳನ್ನು ಒಡೆದು ನೀರು ಬಿಡಲಾಗಿತ್ತು. ನಂತರ ಮಳೆಯಾದ ಕಾರಣ ನೀರಿನ ಬವಣೆ ದೂರಾಗಿತ್ತು.

Friday, April 28, 2017

ಪ್ರಚಲಿತ ವಿದ್ಯಮಾನ : 28 ಏಪ್ರಿಲ್ 2017 : ಡಿಎಲ್​ನಲ್ಲೇ ಅಪರಾಧ ಜಾತಕ!

ಬೆಂಗಳೂರು: ಡ್ರೖೆವಿಂಗ್ ಲೈಸನ್ಸ್ ಅಸಲಿಯೋ ಅಥವಾ ನಕಲಿಯೋ? ಆ ಲೈಸನ್ಸ್​ದಾರನ ಮೇಲೆ ಪ್ರಕರಣಗಳೇನಾದರೂ ದಾಖಲಾಗಿವೆಯೇ? ಎಂಬಿತ್ಯಾದಿ ಮಾಹಿತಿಗಳು ಇನ್ನು ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಕಲಿ ಡ್ರೖೆವಿಂಗ್ ಲೈಸನ್ಸ್ ಹಾವಳಿ, ವಾಹನ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹೈಟೆಕ್ ತಂತ್ರ ರೂಪಿಸಿದೆ. ಸಂಚಾರ ವಿಭಾಗ ಪೊಲೀಸರು ಪ್ರಸ್ತುತ ಸ್ಮಾರ್ಟ್ ಫೋನ್ ಮಾದರಿಯ ‘ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್’(ಪಿಡಿಎ) ಉಪಕರಣ ಬಳಸುತ್ತಿದ್ದು, ಇದಕ್ಕೆ ಇನ್ನಷ್ಟು ತಂತ್ರಾಂಶ ಸೇರಿಸುವ ಮೂಲಕ ಇನ್ನಷ್ಟು ಸಜ್ಜುಗೊಳಿಸಲು ನಿರ್ಧರಿಸಲಾಗಿದೆ.

ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ 43,73,303 ಜನರ ಬಳಿ ಹಾಗೂ ರಾಜಧಾನಿಯಲ್ಲಿ 15,57,986 ಜನರಲ್ಲಿ ಸ್ಮಾರ್ಟ್​ಕಾರ್ಡ್ ರೂಪದ ಡಿಎಲ್ ಇದೆ. ಸಂಚಾರ ಪೊಲೀಸರು ಇವುಗಳನ್ನು ಪರಿಶೀಲಿಸುವಾಗ ಹೆಚ್ಚೆಂದರೆ ಹೆಸರು, ಯಾವ ಪ್ರಕಾರದ ವಾಹನ ಚಾಲನಾ ಪರವಾನಗಿ ಹಾಗೂ ಪರವಾನಗಿಯ ಅವಧಿ ಮುಗಿದಿದೆಯೇ ಎಂದು ಪರಿಶೀಲಿಸುತ್ತಾರೆ.

ಇದನ್ನು ಹೊರತುಪಡಿಸಿ ಸ್ಮಾರ್ಟ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ತಿಳಿಯಲು ಉಪಕರಣಗಳಿಲ್ಲ. ಅನುಮಾನವಿದ್ದರೆ ಸಾರಿಗೆ ಇಲಾಖೆಗೇ ಡಿಎಲ್ ಕಳುಹಿಸಿ ಅದನ್ನು ಪರಿಶೀಲಿಸುವ ಕೆಲಸ ನಡೆಯುತ್ತಿತ್ತು. ಪಿಡಿಎ ಉಪಕರಣದಿಂದ ಇನ್ನು ತ್ವರಿತವಾಗಿ ಮಾಹಿತಿ ಲಭಿಸಲಿದೆ.

ಡಿಎಲ್ ಮೇಲೂ ಪ್ರಕರಣ?


ಪ್ರಸ್ತುತ ರಸ್ತೆ ನಿಯಮ ಉಲ್ಲಂಘಿಸಿದರೆ ವಾಹನಗಳ ಮೇಲೆ ಪ್ರಕರಣ ದಾಖಲಾಗುತ್ತದೆ. ವಾಹನದ ಸಂಖ್ಯೆಯನ್ನು ಸಂಚಾರ ಪೊಲೀಸರು ನಮೂದಿಸಿ ದಂಡ ವಿಧಿಸುತ್ತಾರೆ. ಸಾರಿಗೆ ಇಲಾಖೆಯ ಡೇಟಾಬೇಸ್ ಜೋಡಣೆಯಾದ ಬಳಿಕ, ಡಿಎಲ್ ಮೇಲೂ ಪ್ರಕರಣ ದಾಖಲಾಗಲಿವೆ.

 ರಾಜ್ಯ ಸಾರಿಗೆ ಇಲಾಖೆ ಡೇಟಾಬೇಸ್ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದಲ್ಲಿ ನೆರೆರಾಜ್ಯಗಳ ಸಾರಿಗೆ ಇಲಾಖೆಯ ಡೇಟಾಬೇಸ್ ಸಂಗ್ರಹಿಸುವ ಚಿಂತನೆಯಿದೆ.

ವಾಹನ ಕಳ್ಳರ ಪತ್ತೆ ಸುಲಭ…


ಹೊಸ ಪದ್ಧತಿಯಿಂದ ವಾಹನ ಕಳ್ಳತನ ಪ್ರಕರಣ ಪತ್ತೆ ಸುಲಭವಾಗಲಿದೆ. ಡಿಎಲ್ ಹಾಗೂ ನೋಂದಣಿ ಪ್ರಮಾಣಪತ್ರವನ್ನು ಪಿಡಿಎನಲ್ಲಿ ಸ್ವೈಪ್ ಮಾಡುತ್ತಿದ್ದಂತೆ ವ್ಯಕ್ತಿಯ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಸಾರಿಗೆ ಇಲಾಖೆಗೆ ನೀಡಿದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ವ್ಯಕ್ತಿಯ ಮೇಲೆ ಅಪರಾಧ ಪ್ರಕರಣಗಳಿದ್ದರೆ ಅದರ ಮಾಹಿತಿಯೂ ಸಿಗುತ್ತದೆ. ಇದರಿಂದ ವಾಹನ ಕಳ್ಳತನ ಸಹಿತ ವಿವಿಧ ಅಪರಾಧಿಗಳನ್ನು ಸೆರೆ ಹಿಡಿಯಲು ಸಹಾಯಕವಾಗಲಿದೆ. ಸದ್ಯ 650 ಪಿಡಿಎ ಯಂತ್ರಗಳನ್ನು ಬೆಂಗಳೂರು ಸಂಚಾರ ಪೊಲೀಸರಿಗೆ ನೀಡಲು ಇಲಾಖೆ ನಿರ್ಧರಿಸಿದೆ. ಈ ಉಪಕರಣದ ಮೂಲದ ನಗದುರಹಿತ ದಂಡ ಸಂಗ್ರಹಕ್ಕೂ ಯೋಜನೆ ಸಿದ್ಧಪಡಿಸಲಾಗಿದೆ.

ಹೇಗೆ ಕೆಲಸ ಮಾಡುತ್ತೆ?


ಮೊದಲ ಹಂತದಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯಲ್ಲಿನ ಅಂಕಿ ಅಂಶ (ಡೇಟಾಬೇಸ್) ಜೋಡಣೆಗೆ ಬೆಂಗ ಳೂರು ನಗರ ಸಂಚಾರ ಪೊಲೀಸ್ ವಿಭಾಗ ಮುಂದಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪಿಡಿಎ ಮೂಲಕವೇ ಸಂಚಾರ ಪೊಲೀಸರು ಡೇಟಾಬೇಸ್ ಪಡೆದುಕೊಳ್ಳಲಿದ್ದಾರೆ. ಇದರಿಂದ ಡಿಎಲ್ ಹೊಂದಿದ ವ್ಯಕ್ತಿಯ ಕುರಿತ ಎಲ್ಲ ಮಾಹಿತಿಗಳು ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ.

ಪ್ರಚಲಿತ ವಿದ್ಯಮಾನ : 28 ಏಪ್ರಿಲ್ 2017 : ವರ್ಷಾಂತ್ಯದಲ್ಲಿ ಐದು ಸಂವಹನ ಉಪಗ್ರಹ ಉಡಾವಣೆ – ಇಸ್ರೋ

ಹೈದರಾಬಾದ್​: ಇದೇ ವರ್ಷಾಂತ್ಯದಲ್ಲಿ ಇಸ್ರೋ ಐದು ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್​ ತಿಳಿಸಿದ್ದಾರೆ.

ದೇಶದಲ್ಲಿ ಸಂವಹನ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಐದು ಉಪಗ್ರಹಗಳ ಉಡಾವಣೆಗೆ ಇಸ್ರೋ ಸಜ್ಜಾಗಿದೆ ಎಂದು ತಿಳಿಸಿದರು.

ಈ ಐದು ಉಪಗ್ರಹಗಳು ಇದೇ ವರ್ಷದ ಕೊನೆಯಲ್ಲಿ ಅಂತರಿಕ್ಷಕ್ಕೆ ತಲುಪಲಿವೆ. ದೇಶಾದ್ಯಂತ ಸಂಖ್ಯೆ ಬಳಕೆಯಲ್ಲಿ ಯಾವುದೇ ಅನಾನುಕೂಲವಿಲ್ಲದ ಹಾಗೆ ಈ ಉಪಗ್ರಹಗಳು ಕಾರ್ಯ ನಿರ್ವಹಿಸಲಿವೆ ಎಂದು ಇಸ್ರೋ ಅಧ್ಯಕ್ಷ ಮಾಹಿತಿ ನೀಡಿದರು.

ಗುರುವಾರ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವ ವೇಳೆ ಇಸ್ರೋ ಅಧ್ಯಕ್ಷ ಕಿರಣ್​ ಕುಮಾರ್ ಈ ಮಾಹಿತಿ ನೀಡಿದರು.

ವಿಶ್ವದಲ್ಲೇ ಭಾರತ ಏಕಕಾಲಕ್ಕೆ ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆಗೊಳಿಸಿದ ಮೊದಲ ರಾಷ್ಟ್ರವಾಗಿದೆ ಎಂದು ಹೇಳಿದರು.

ಕಳೆದ ಫೆಬ್ರವರಿಯಲ್ಲಿ ಶ್ರೀಹರಿಕೋಟಾದಿಂದ 104 ಉಪಗ್ರಹಗಳನ್ನು ಏಕಕಾಲಕ್ಕೆ ಯಶಸ್ವಿ ಉಡಾವಣೆಗೊಳಿಸಲಾಗಿತ್ತು. ಈ ಮೂಲಕ ಮತ್ತೊಂದು ದಾಖಲೆಯನ್ನು ಇಸ್ರೋ ದಾಖಲಿಸಿತ್ತು. (ಏಜೆನ್ಸೀಸ್)

Thursday, April 27, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಅಂಚೆ ಕಚೇರೀಲಿ ಔಷಧ!

ನವದೆಹಲಿ: ಅಂಚೆ ಕಚೇರಿಗಳಲ್ಲಿ ಇನ್ಮುಂದೆ ಅಂಚೆ ಸೇವೆಯ ಜತೆಗೆ ಆರೋಗ್ಯ ಸೇವೆ, ಹವಾಮಾನ ಮಾಹಿತಿ ಸಹ ದೊರೆಯಲಿದೆ. ಈ ಸಂಬಂಧ ಆರೋಗ್ಯ ಇಲಾಖೆ ಮತ್ತು ಭೂ ವಿಜ್ಞಾನ ಸಚಿವಾಲಯ ಮಾತುಕತೆ ನಡೆಸುತ್ತಿದ್ದು, ಇನ್ನೆರಡು ತಿಂಗಳೊಳಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ.
ಆರೋಗ್ಯ ಸಚಿವಾಲಯ ಅಂಚೆ ಕಚೇರಿಗಳನ್ನು ಬಳಸಿಕೊಂಡು ಕೆಲ ಅಗತ್ಯ ಔಷಧಗಳನ್ನು ವಿತರಿಸಲು ಚಿಂತನೆ ನಡೆಸುತ್ತಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಔಷಧದ ಅಗತ್ಯತೆ ಇದ್ದರೂ, ಸೂಕ್ತ ಲಭ್ಯತೆ ಇಲ್ಲದಿದ್ದು, ಅಂಚೆ ಕಚೇರಿ ಮೂಲಕ ತಲುಪಿಸಲು ಉದ್ದೇಶಿಸಲಾಗಿದೆ. ಪತ್ರ ವ್ಯವಹಾರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಬ್ಬಿರುವ ಅಂಚೆ ಇಲಾಖೆಯ ಜಾಲದ ಮೂಲಕ ಮತ್ತು ಸಿಬ್ಬಂದಿ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಅಂಚೆ ಇಲಾಖೆಯ ಕಾರ್ಯದರ್ಶಿ ಬಿ.ವಿ. ಸುಧಾಕರ್ ಪ್ರಕಾರ, ಅಂಚೆ ಇಲಾಖೆಯ ಮೂಲಕ ಹವಾಮಾನ ಮಾಹಿತಿಯನ್ನು ಸಂಗ್ರಹಿಸಿ ರೈತರಿಗೆ, ಕಡಲತೀರದ ಮೀನುಗಾರರಿಗೆ ನೀಡಲಾಗುತ್ತದೆ. ಭೂ ವಿಜ್ಞಾನ ಸಚಿವಾಲಯ ಮತ್ತು ಜನರ ಮಧ್ಯೆ ಸಂಪರ್ಕ ಕೊಂಡಿಯಾಗಿ ಅಂಚೆ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಹಾಕಿ ಕ್ರೀಡಾಂಗಣಕ್ಕೆ ಕೆಎಂ ಕಾರಿಯಪ್ಪ ಹೆಸರು

ಬೆಂಗಳೂರು: ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಎಂದು ಮರು ನಾಮಕರಣ ಮಾಡಿ ಗುರುವಾರ ಉದ್ಘಾಟಿಸಲಾಯಿತು. ಸುಮಾರು 3.75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾಗಿರುವ ನೂತನ ಸಿಂಥೆಟಿಕ್ ಟರ್ಫ್ ಹಾಗೂ ಫ್ಲಡ್ ಲೈಟಿಂಗ್ ವ್ಯವಸ್ಥೆಗೂ ಇದೇ ವೇಳೆ ಚಾಲನೆ ನೀಡಲಾಯಿತು.
ರಾಜ್ಯ ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್ವಾಲ್, ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ನೂತನ ವ್ಯವಸ್ಥೆಗೆ ಚಾಲನೆ ನೀಡಿದರು. ನೂತನ ಟರ್ಫ್​ಗೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಆಟಗಾರನ್ನೊಳಗೊಂಡ ಹಾಕಿ ಕರ್ನಾಟಕ ಅಧ್ಯಕ್ಷರ ಇಲೆವೆನ್ ಹಾಗೂ ಹಾಕಿ ಕರ್ನಾಟಕ ರಾಜ್ಯ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಹಾಕಿ ಪಂದ್ಯ ಏರ್ಪಡಿಸಲಾಗಿತ್ತು.
ಎಫ್​ಐಎಚ್ ಮಟ್ಟದ ಟರ್ಫ್ ಹಾಕಲಾಗಿದ್ದು, 1800 ಲಕ್ಸ್​ಗಳ ಸಾಮರ್ಥ್ಯವುಳ್ಳ ಫ್ಲಡ್-ಲೈಟ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಯೋಗ್ಯ ಮೈದಾನ ಇದಾಗಿದೆ. ಕ್ರೀಡಾಂಗಣ ನವೀಕರಣ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದೆಂದು ಅನುಪಮ್ ಅಗರ್ವಾಲ್ ತಿಳಿಸಿದರು.
ಅಧ್ಯಕ್ಷರ ಇಲೆವೆನ್​ಗೆ ಜಯ
ಪ್ರಾಯೋಗಿಕವಾಗಿ ನಡೆದ ಪ್ರದರ್ಶನ ಪಂದ್ಯದಲ್ಲಿ ಕರ್ನಾಟಕ ಅಧ್ಯಕ್ಷರ ಇಲೆವೆನ್ ತಂಡ 1-0 ಗೋಲುಗಳಿಂದ ರಾಜ್ಯ ಇಲೆವೆನ್ ತಂಡವನ್ನು ಸೋಲಿಸಿತು. ಬಹುತೇಕ ರಾಷ್ಟ್ರೀಯ ಆಟಗಾರರಿಂದಲೇ ಕೂಡಿದ್ದ ಅಧ್ಯಕ್ಷರ ಇಲೆವೆನ್ ತಂಡದ ಪರ ಸಿಮ್ರಾನ್​ಜಿತ್ ಸಿಂಗ್ ಏಕೈಕ ಗೋಲುಗಳಿಸಿದರು. ರಾಜ್ಯ ಇಲೆವೆನ್ ಪರ ವಿಆರ್ ರಘುನಾಥ್ ಕಣಕ್ಕಿಳಿದರೆ, ಅಧ್ಯಕ್ಷರ ಇಲೆವೆನ್ ಪರ ನಿಕ್ಕಿನ್ ತಿಮ್ಮಯ್ಯ, ಎಸ್​ಕೆ ಉತ್ತಪ್ಪ, ವಿಕಾಸ್ ದಹಿಯಾ, ಗುರಿಂದರ್ ಸಿಂಗ್, ಹರ್ಜಿತ್ ಸಿಂಗ್, ರಮಣದೀಪ್ ಸಿಂಗ್, ಸತ್ಬೀರ್ ಸಿಂಗ್ ಗಮನಸೆಳೆದರು.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಮಲ್ಟಿಪ್ಲೆಕ್ಸ್​ಗಳಲ್ಲಿನ್ನು ಗರಿಷ್ಠ 200 ರೂ. ಟಿಕೆಟ್ ದರ

ಬೆಂಗಳೂರು: ಏಕಪರದೆ ಚಿತ್ರಮಂದಿರ ಸೇರಿ ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್ ಗಳಲ್ಲಿನ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಏಕರೂಪದ ದರ ನಿಗದಿಪಡಿಸಿದ್ದು, ಗುರುವಾರದಿಂದಲೇ (ಏ.27) ಜಾರಿಯಾಗಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ತಿಳಿಸಿದ್ದಾರೆ. ಈ ಮೂಲಕ ‘ಬಾಹುಬಲಿ 2’ ಹಾಗೂ ಇತರೆ ಚಿತ್ರಗಳಿಗೆ ಅಧಿಕ ಮೊತ್ತ ನೀಡಿ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿದವರು 200 ರೂ. ಹೊರತುಪಡಿಸಿ ಮೇಲ್ಪಟ್ಟ ಹಣವನ್ನು ತಾವೇ ಚಿತ್ರಮಂದಿರಗಳ ಕಡೆಯಿಂದ ಪಡೆಯಬೇಕೆಂದು ತಿಳಿಸಿದ್ದಾರೆ.
ಸರ್ಕಾರದ ಆದೇಶ ಜಾರಿ ಮುನ್ಸೂಚನೆ ಇದ್ದರೂ ನಗರದ ತಾವರೆಕೆರೆಯ ಬಾಲಾಜಿ, ಲಾಲ್​ಬಾಗ್ ರಸ್ತೆಯ ಊರ್ವಶಿ ಸೇರಿ ಹಲವು ಚಿತ್ರಮಂದಿರಗಳು ‘ಬಾಹುಬಲಿ 2’ ಪ್ರದರ್ಶನಕ್ಕೆ ಹೆಚ್ಚಿನ ದರದಲ್ಲಿ ಮುಂಗಡ ಟಿಕೆಟ್ ವಿತರಿಸಿವೆ. ಚಿತ್ರಮಂದಿರಗಳ ಈ ನಡೆ ವಾಣಿಜ್ಯ ಮಂಡಳಿ ಗಮನಕ್ಕೂ ಬಂದಿದ್ದು, ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ನೀತಿಗೆ ಚಿತ್ರಮಂದಿರಗಳ ಮಾಲೀಕರು ಸಹಕರಿಸಬೇಕು. ಆದೇಶವನ್ನು ನಿರ್ಲಕ್ಷಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ರಾಮಮೂರ್ತಿ, ಉಮೇಶ್ ಬಣಕಾರ್, ಎನ್. ಎಂ. ಸುರೇಶ್ ಮತ್ತಿತರರಿದ್ದರು.
ಮೂಲಗಳ ಪ್ರಕಾರ, ಸರ್ಕಾರದ ಏಕರೂಪ ಟಿಕೆಟ್ ದರದ ಆದೇಶ ಬುಧವಾರ ಹೊರಬೀಳಬೇಕಿತ್ತು. ಮಂಗಳವಾರವೇ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದರು. ಗುರುವಾರ ಬೆಳಗ್ಗೆ 11ಕ್ಕೆ ಈ ಆದೇಶ ಅಧಿಕೃತವಾಗಿ ಹೊರಬೀಳಲಿದೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ರೂಪಾಯಿ ಆಯ್ತು ಬಡಪಾಯಿ

ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ನಿರಂತರವಾಗಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಕುಸಿತ ಕಂಡಿದ್ದು, ಆರು ವರ್ಷಗಳಲ್ಲಿ ಕನಿಷ್ಠ ಹಂತಕ್ಕೆ ತಲುಪಿದೆ. ಗುರುವಾರದ ವಹಿವಾಟಿನಲ್ಲಿ 30 ಪೈಸೆ ಇಳಿಕೆ ಕಂಡ ರೂಪಾಯಿ, 68.86ಕ್ಕೆ ಕುಸಿದಿತ್ತು. 2013ರ ಆಗಸ್ಟ್ 28ರಂದು ರೂಪಾಯಿ ಮೌಲ್ಯ 68.84ಕ್ಕೆ ಕುಸಿದಿತ್ತು. ಮುಂದಿನ ದಿನಗಳಲ್ಲಿ ಇದು 70 ರೂ.ಗಳಿಗೂ ಇಳಿಕೆ ಕಾಣುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.
2016ರ ಮಾರ್ಚ್ನಿಂದ 66 ಹಾಗೂ 68.2 ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ರೂಪಾಯಿ ಮೌಲ್ಯ, ಅಮೆರಿಕ ಚುನಾವಣೆಯ ನಂತರ ಗಣನೀಯ ಕುಸಿತ ಕಾಣುತ್ತಿದೆ. ನವೆಂಬರ್ 8ರಂದು 66.6 ಇದ್ದ ರೂಪಾಯಿ 15 ದಿನಗಳ ಅವಧಿಯಲ್ಲಿ ಶೇ.3.3ರಷ್ಟು ಕುಸಿತ ಕಂಡಿದೆ. ವಿದೇಶಿ ಹೂಡಿಕೆದಾರರು ಡಾಲರ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಬಂಡವಾಳ ವಾಪಸು ಪಡೆದುಕೊಳ್ಳುತ್ತಿದ್ದಾರೆ. ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಲು ಮುಂದಾಗಿದೆ.
ಇತರ ಕರೆನ್ಸಿಗೂ ಪೆಟ್ಟು: ಟ್ರಂಪ್ ಆಯ್ಕೆಯಿಂದ ಭಾರತೀಯ ಕರೆನ್ಸಿ ಮಾತ್ರವಲ್ಲ, ಮೆಕ್ಸಿಕನ್ ಪೆಕ್ಸೋ(ಶೇ.11), ಟರ್ಕಿಯ ಲೀರಾ(ಶೇ.7), ಕೊಲಂಬಿಯಾದ ಪೆಸ್ಕೋ(ಶೇ.6.9), ಬ್ರೆಜಿಲ್ನ ರಿಯಲ್(ಶೇ.6.5)ನಲ್ಲೂ ಗಣನೀಯ ಕುಸಿತ ಕಂಡುಬಂದಿದೆ. -ಏಜೆನ್ಸೀಸ್
ಕುಸಿತಕ್ಕೆ ಕಾರಣಗಳೇನು?
ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಡಾಲರ್ ಮೌಲ್ಯ 14 ವರ್ಷಗಳ ಗರಿಷ್ಠಕ್ಕೆ ತಲುಪಿದೆ. ಟ್ರಂಪ್ ಅವರು ಮೂಲ ಸೌಕರ್ಯಗಳ ಮೇಲೆ ಹೂಡಿಕೆ ಹೆಚ್ಚು ಮಾಡಿ ತೆರಿಗೆಗಳನ್ನು ಕಡಿತಗೊಳಿಸಿದಲ್ಲಿ ಹಣದುಬ್ಬರ ಹೆಚ್ಚಾಗಲಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಮುಂದಿನ ತಿಂಗಳಿಂದ ಬಡ್ಡಿಯ ದರ ಹೆಚ್ಚಿಸುವ ಸೂಚನೆ ನೀಡಿದೆ. ಜತೆಗೆ ಹೂಡಿಕೆದಾರರು ಅಮೆರಿಕದ ಷೇರುಪೇಟೆಯಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ನವೆಂಬರ್ 8ರಿಂದ ವಿದೇಶಿ ಹೂಡಿಕೆದಾರರು ಭಾರತದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ರೂಪಾಯಿ ಮೌಲ್ಯದ ಮೇಲೆ ಒತ್ತಡ ಉಂಟಾಗಿದೆ. ಭಾರತದಲ್ಲಿನ ನೋಟು ನಿಷೇಧ ನೀತಿ ನಂತರ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಭಾರತ ನಿಗದಿತ ಜಿಡಿಪಿ ದಾಖಲಿಸುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ದೊಡ್ಡ ಹೂಡಿಕೆದಾರರು ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ.
70ಕ್ಕೆ ಇಳಿಕೆ
ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಟ್ರಂಪ್ ತೆರಿಗೆ ಕಡಿತ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದರಿಂದ ಅಮೆರಿಕದ ಷೇರುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಮುಂದಿನ ಒಂದೆರಡು ತಿಂಗಳಲ್ಲಿ ರೂಪಾಯಿ ಮೌಲ್ಯ 69.30ಕ್ಕೆ ಇಳಿಯಲಿದೆ. ಮುಂಬರುವ 7-8 ತಿಂಗಳಲ್ಲಿ ಅದು 70.51 ಇಲ್ಲವೇ 71ಕ್ಕೆ ಇಳಿಯುವ ಸಾಧ್ಯತೆಗಳಿವೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : 70 ಸಾವಿರ ಕೋಟಿ ರೂ. ಕಪ್ಪು ಹಣ ಪತ್ತೆ, ಎಸ್​ಐಟಿ

ನವದೆಹಲಿ: ಕಪ್ಪು ಹಣವನ್ನು ಪತ್ತೆ ಹಚ್ಚಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ ಇದುವರೆಗೆ ಭಾರತೀಯರು ವಿದೇಶಗಳಲ್ಲಿ ಕೂಡಿಟ್ಟಿದ್ದ 16 ಸಾವಿರ ಕೋಟಿ ರೂ. ಸೇರಿದಂತೆ ಒಟ್ಟು 70 ಸಾವಿರ ಕೋಟಿ ರೂ. ಕಪ್ಪು ಹಣವನ್ನು ಪತ್ತೆ ಹಚ್ಚಿದೆ ಎಂದು ಎಸ್​ಐಟಿಯ ಉಪಾಧ್ಯಕ್ಷ ಜಸ್ಟೀಸ್ (ನಿವೃತ್ತ) ಅರ್ಜಿತ್ ಪಸಾಯತ್ ತಿಳಿಸಿದ್ದಾರೆ.
ಕಳೆದ 2 ವರ್ಷಗಳಿಂದ ಎಸ್​ಐಟಿ ಕಪ್ಪುಹಣವನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತವಾಗಿದೆ. ಎಸ್​ಐಟಿ ಏಪ್ರಿಲ್ ಮೊದಲ ವಾರದಲ್ಲಿ 6ನೇ ಮಧ್ಯಂತರ ವರದಿ ಸಲ್ಲಿಕೆ ಮಾಡಲಿದೆ. ಈ ಮೊದಲು ಸಲ್ಲಿಸಿರುವ 5 ಮಧ್ಯಂತರ ವರದಿಗಳಲ್ಲಿ ಕಪ್ಪು ಹಣ ಸಂಗ್ರಹಣೆ ತಡೆಯಲು ಮತ್ತು ಕಪ್ಪು ಹಣ ಪತ್ತೆ ಹಚ್ಚುವ ಸಂಬಂಧ ಹಲವಾರು ಶಿಫಾರಸುಗಳನ್ನು ಮಾಡಿದೆ. ಎಸ್​ಐಟಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಅವರನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಅರ್ಜಿತ್ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ 15 ಲಕ್ಷಕ್ಕಿಂತಲೂ ಹೆಚ್ಚಿನ ನಗದನ್ನು ಹೊಂದಿದ್ದರೆ, ಆ ಮೊತ್ತವನ್ನು ಘೊಷಣೆ ಮಾಡದಿರುವ ಮೊತ್ತ ಎಂದು ಪರಿಗಣಿಸಲು ಎಸ್​ಐಟಿ ಶಿಫಾರಸು ಮಾಡಿದೆ. ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. 3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡಬಾರದು ಎಂಬ ಶಿಫಾರಸು ಈಗಾಗಲೇ ಅನುಷ್ಠಾನಕ್ಕೆ ಬಂದಿದೆ ಎಂದು ಅರ್ಜಿತ್ ಮಾಹಿತಿ ನೀಡಿದ್ದಾರೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ನ್ಯಾಯಾಂಗ ವಶಕ್ಕೆ ಇವಿಎಂ ಯಂತ್ರಗಳು – ಕೋರ್ಟ್​ ಆದೇಶ

ನೈನಿತಾಲ್: ಮತಯಂತ್ರ ದೋಷಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಇವಿಎಂ ವಶಕ್ಕೆ ಆದೇಶಿಸಿದೆ.
ವಿಕಾಸನಗರ ವಿಧಾನಸಭಾ ಚುನಾವಣೆ ವೇಳೆ ಬಳಸಿಕೊಳ್ಳಲಾಗಿದ್ದ ಮತಯಂತ್ರವನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕೆಂದು ಚುನಾವಣಾ ಆಯೋಗಕ್ಕೆ ಉತ್ತರಖಾಂಡ್‌ ಹೈಕೋರ್ಟ್ ನಿರ್ದೇಶನ ನೀಡಿದೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE https://www.youtube.com/watch?v=p1Oe6fHLRU0
ತಮ್ಮ ಸೋಲಿಗೆ ಮತಯಂತ್ರ (ಇವಿಎಂ) ದೋಷವೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್​ ಅಭ್ಯರ್ಥಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಇತ್ತೀಚೆಗೆ ಉತ್ತರಾಖಂಡ್‌ ವಿಧಾನಸಭಾ ಚುನಾವಣೆ ನಡೆದಿತ್ತು. ಇಲ್ಲಿನ ವಿಕಾಸನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ನವ್​ಪ್ರಭಾತ್ ಎಂಬುವರು ಬಿಜೆಪಿ ಅಭ್ಯರ್ಥಿ ಮುನ್ನಾ ಸಿಂಗ್​ ಚೌಹಾಣ್​ ಅವರ ವಿರುದ್ಧ ಪರಾಭವಗೊಂಡಿದ್ದರು. ಸುಮಾರು 6 ಸಾವಿರ ಮತಗಳಿಂದ ಹಿನ್ನಡೆಯಾಗಿತ್ತು. ತಮ್ಮ ಸೋಲಿಗೆ ಮತಯಂತ್ರ ದೋಷವೇ ಕಾರಣ ಎಂದು ನವ್​ ಪ್ರಭಾತ್​ ಆರೋಪಿಸಿದ್ದರು.
ಉತ್ತರಖಾಂಡ್​ನ 70 ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ವೇಳೆ 11 ಸಾವಿರ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು. ವಿಕಾಸನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 139 ಇವಿಎಂಗಳ ಬಳಕೆ ಮಾಡಲಾಗಿತ್ತು. (ಏಜೆನ್ಸೀಸ್)

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಗಂಗೂಲಿ ಕನಸಿನ ತಂಡದಲ್ಲಿ ‘ಧೋನಿ’ಗೆ ಸ್ಥಾನವಿಲ್ಲ

ಮುಂಬೈ: ಭಾರತೀಯ ಕ್ರಿಕೆಟ್​ನ ಸುವರ್ಣಯುಗದಲ್ಲಿ ತಂಡವನ್ನು ಮುನ್ನಡೆಸಿದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಮತ್ತೊಬ್ಬ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ಅವರ ಐಪಿಎಲ್ ಕನಸಿನ ತಂಡದಲ್ಲಿ ಸ್ಥಾನ ದೊರೆತಿಲ್ಲ. ಟಿ20 ಕ್ರಿಕೆಟ್ ಮಾದರಿಯಲ್ಲಿ ‘ಕೂಲ್ ಕ್ಯಾಪ್ಟನ್’ ಕಳಪೆ ನಿರ್ವಹಣೆಯೇ ಇದಕ್ಕೆ ಕಾರಣವಾಗಿದ್ದು, ಧೋನಿ ಬದಲಿಗೆ ಡೆಲ್ಲಿ ಡೇರ್​ಡೆವಿಲ್ಸ್​ನ ರಿಷಬ್ ಪಂತ್​ಗೆ ಗಂಗೂಲಿ ಮಣೆ ಹಾಕಿದ್ದಾರೆ.
ಟಿ20 ಆಟಗಾರನಾಗಿ ಧೋನಿ ಅರ್ಹತೆಯ ಬಗ್ಗೆ ಈಚೆಗಷ್ಟೆ ಸಂಶಯ ವ್ಯಕ್ತಪಡಿಸಿದ್ದ ಬಂಗಾಳದ ಹುಲಿ ಎಂದೇ ಪ್ರಸಿದ್ಧರಾದ ಗಂಗೂಲಿ, ‘ಧೋನಿ ಉತ್ತಮ ಟಿ20 ಆಟಗಾರ ಎನ್ನುವುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಏಕದಿನ ಮಾದರಿಯಲ್ಲಿ ಅವರೊಬ್ಬ ಚಾಂಪಿಯನ್. ಟಿ20 ಮಾದರಿಯಲ್ಲಿ ಕಳೆದ 10 ವರ್ಷಗಳಲ್ಲಿ ಏಕೈಕ ಅರ್ಧಶತಕ ಗಳಿಸಿರುವ ಧೋನಿ ಸಾಧನೆ ಹೇಳಿಕೊಳ್ಳುವಂತಹದ್ದೇನಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಂಗೂಲಿ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದ್ದು, ಇದನ್ನೂ ಗಂಗೂಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ‘ಧೋನಿಗೆ ದೊಡ್ಡ ಅಭಿಮಾನಿ ಬಳಗ ಇದ್ದು, ಅವರನ್ನು ಟೀಕಿಸಿದರೆ ಅಭಿಮಾನಿಗಳು ಮುಗಿಬೀಳುತ್ತಾರೆ. 2006ರಲ್ಲಿ ನನ್ನನ್ನು ತಂಡದಿಂದ ಕೈಬಿಟ್ಟಾಗಲೂ ಇದೇ ಸ್ಥಿತಿ ಇತ್ತು’ ಎಂದಿದ್ದಾರೆ.
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ ಧೋನಿ ಒಂದು ಅರ್ಧಶತಕ ಸೇರಿದಂತೆ 152 ರನ್​ಗಳಿಸಿದ್ದಾರೆ. ಸನ್ ರೈಸರ್ ಹೈದರಾಬಾದ್ ವಿರುದ್ಧ ಅತ್ಯುತ್ತಮ ಆಟವಾಡುವ ಮೂಲಕ ತಂಡಕ್ಕೆ ಜಯತಂದುಕೊಟ್ಟಿದ್ದು ಇದುವರೆಗಿನ ಅವರ ಉತ್ತಮ ನಿರ್ವಹಣೆಯಾಗಿದೆ.
ಇನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಸಹ ತಮ್ಮ ಐಪಿಎಲ್ ಕನಸಿನ ತಂಡದಲ್ಲಿ ಧೋನಿಗೆ ಸ್ಥಾನ ಕಲ್ಪಿಸಿರಲಿಲ್ಲ. ಈಚೆಗಷ್ಟೆ ತಮ್ಮ ತಂದೆಯನ್ನು ಕಳೆದುಕೊಂಡ 19 ವರ್ಷದ ರಿಷಬ್ ಪಂತ್ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಐಪಿಎಲ್​ನಲ್ಲಿ ಗಮನಾರ್ಹ ಪ್ರದರ್ಶನ ಮುಂದುವರಿಸಿದ್ದಾರೆ.
ಗಂಗೂಲಿ ಕನಸಿನ ಐಪಿಎಲ್ ತಂಡ: ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸ್ಟೀವನ್ ಸ್ಮಿತ್, ಎಬಿಡಿ ವಿಲಿಯರ್ಸ್, ನಿತಿಶ್ ರಾಣಾ, ಮನೀಷ್ ಪಾಂಡೆ, ರಿಷಬ್ ಪಂತ್, ಸುನಿಲ್ ನಾರಾಯಣ್, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಕ್ರಿಸ್ ಮೋರಿಸ್.

Wednesday, April 26, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ‘ಸಂಗೀತ ವೇದಾಂತ ಧುರೀಣ’ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ರಾಮ ಲಲಿತಕಲಾ ಮಂದಿರವು ಸಂಗೀತ ವಿದುಷಿ ವಿಶಾಖಾ ಹರಿ ಅವರನ್ನು ‘ಸಂಗೀತ ವೇದಾಂತ ಧುರೀಣ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏ. 29ರಂದು ಕೆ.ಆರ್‌.ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಮತ್ತು ಬೆಳ್ಳಿಯ ಪದಕ ಒಳಗೊಂಡಿದೆ ಎಂದು ಕಲಾಮಂದಿರದ ಪ್ರಕಟಣೆ ತಿಳಿಸಿದೆ.
ಉದ್ಯೋಗ ತರಬೇತಿ
ಎಪಿಡಿ ಸಂಸ್ಥೆಯು ಅಂಗವಿಕಲ ನಿರುದ್ಯೋಗಿಗಳಿಗಾಗಿ ಆತಿಥ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.  ಆಸಕ್ತರು ಅರ್ಜಿ ಸಲ್ಲಿಸಲು ಏ. 29 ಕೊನೆಯ ದಿನಾಂಕ. ಮಾಹಿತಿಗೆ:  www.apd-india.org
ಬ್ಯೂಟಿಪಾರ್ಲರ್‌ ತರಬೇತಿ
ಅರಿಶಿನಕುಂಟೆಯ ರುಡ್‌ಸೆಟ್‌ ಸಂಸ್ಥೆಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಯ ನಿರುದ್ಯೋಗಿ ಯುವತಿಯರಿಗಾಗಿ ಉಚಿತ ಬ್ಯೂಟಿಪಾರ್ಲರ್‌ ತರಬೇತಿ ಆಯೋಜಿಸಿದೆ. ತರಬೇತಿ ವೇಳೆ 30 ದಿನಗಳ ವಸತಿ ಸೌಲಭ್ಯ ಕಲ್ಪಿಸುವುದಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ಏ. 28 ಕೊನೆಯ ದಿನ.
ಸಂಪರ್ಕ:  080 27728166
ಸಾಮೂಹಿಕ ಉಪನಯನ
ದೊಡ್ಡನೆಕ್ಕುಂದಿ ಬ್ರಾಹ್ಮಣರ ಸಂಘದ ಆಶ್ರಯದಲ್ಲಿ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ ಹಾಗೂ ಸತ್ಯನಾರಾಯಣ ಪೂಜೆ ಗಾಯತ್ರಿ ಮಂದಿರದಲ್ಲಿ ಇದೇ 30ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗೆ:  9482393717.
ಪ್ರಮಾಣಪತ್ರಕ್ಕಾಗಿ ನೋಂದಣಿ
ಪಿಂಚಣಿದಾರರು ಜೀವನ್‌ ಪ್ರಮಾಣ್‌ ಸಿಸ್ಟಮ್‌ನಲ್ಲಿ ‘ಡಿಜಿಟಲ್‌ ಲೈಫ್‌ ಪ್ರಮಾಣಪತ್ರ’ಕ್ಕಾಗಿ ಹೆಸರು ನೋಂದಾಯಿಸಲು ಏ. 30ರವರೆಗೆ ಅವಧಿ ವಿಸ್ತರಿಸಲಾಗಿದೆ.
ನಗರದ ರಾಜಾರಾಮ್‌ ಮೋಹನ್‌ರಾಯ್‌ ರಸ್ತೆ, ಪೀಣ್ಯ, ಕೆ.ಆರ್.ಪುರ, ಬೊಮ್ಮಸಂದ್ರ, ಆರ್‌.ಆರ್‌.ನಗರ, ಯಲಹಂಕದಲ್ಲಿರುವ ಭವಿಷ್ಯನಿಧಿ ಕಚೇರಿಗಳಲ್ಲಿ ನೋಂದಣಿ ಮಾಡಲಾಗುತ್ತದೆ. ಪಿಂಚಣಿದಾರರು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌್ ತರುವಂತೆ ಭವಿಷ್ಯ ನಿಧಿಯ ಪ್ರಾದೇಶಿಕ ಕಚೇರಿಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ:  080 25611955
ಹೊಲಿಗೆ ತರಬೇತಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉಚಿತ ಹೊಲಿಗೆ ತರಬೇತಿ ನೀಡಲು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಯಲಹಂಕದ ಮಿನಿ ವಿಧಾನಸೌಧದಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ಏ. 28 ಕೊನೆಯ ದಿನಾಂಕ.
ಗೋರಕ್ಷಣೆ ಹೆಸರಿನಲ್ಲಿ ಹಲ್ಲೆ: ಆರೋಪ
ಗೋರಕ್ಷಣೆ ಹೆಸರಿನಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ ಎಂದು ಅಖಿಲ ಭಾರತ ತೌಹೀದ್ ಜಮಾತ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಎ.ಮಹಮ್ಮದ್ ಘನಿ, ‘ದಾಳಿ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಅವರು ಮೌನ ವಹಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶ
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ‘ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶ’ ಮೇ 4ರಂದು ಮೈಸೂರಿನಲ್ಲಿ ನಡೆಯಲಿದೆ.
‘20 ದಿನಗಳ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದರಲ್ಲಿ ದಲಿತರು, ಶೂದ್ರರು ಮತ್ತು ಮಹಿಳಾ ಸಂಘಟನೆಗಳ ಜೊತೆಗೆ ಟಿಪ್ಪು  ಚರಿತ್ರೆಯ ಸಂವಾದ ನಡೆಸುತ್ತೇವೆ’ ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಯೋಗೀಶ್ವರ ಸ್ವಾಮಿ ಮಠವು ಏ. 30ರಂದು ‘ಉಚಿತ ಆಯುರ್ವೇದ ತಪಾಸಣಾ ಶಿಬಿರ’ ಹಮ್ಮಿಕೊಂಡಿದೆ.
ವಿಳಾಸ: ಸೋಫಿಯಾ ಪ್ರೌಢಶಾಲೆ ಆವರಣ, ಬೈಯಪ್ಪಪಾಳ್ಯ, ವಜ್ರಹಳ್ಳಿ, ಕೆಎಸ್‌ಐಟಿ ಕಾಲೇಜು ಹತ್ತಿರ, ಕನಕಪುರ ರಸ್ತೆ. 
ಸಂಪರ್ಕ:  9449084025
ಏರ್‌ಮನ್ ಹುದ್ದೆಗೆ ನೇಮಕಾತಿ
ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಏಪ್ರಿಲ್ 27ರಿಂದ 29ರವರೆಗೆ ಭಾರತೀಯ ವಾಯುಪಡೆಯ ಏರ್‌ಮನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
1997ರ ಜುಲೈ 7 ಹಾಗೂ 2000ದ ಡಿಸೆಂಬರ್ 20ರ ನಡುವೆ ಜನಿಸಿದ, ಕನಿಷ್ಠ 165 ಸೆಂ.ಮೀ ಎತ್ತರವುಳ್ಳ ಅವಿವಾಹಿತ ಪುರುಷರಿಗೆ ಮಾತ್ರ ಅವಕಾಶವಿದೆ. ಸಂಪರ್ಕ:  080 25592199
ತಾಂತ್ರಿಕತೆ  ಕಾರ್ಯಾಗಾರ
ಕೃಷಿ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯು ಮೇ 5ರಂದು ‘ತರಕಾರಿ ಬೆಳೆಗಳ ಸಾವಯವ ಬೇಸಾಯ ತಾಂತ್ರಿಕತೆ’ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಏರ್ಪಡಿಸಿದೆ.
ನರ್ಸರಿ ನಿರ್ವಹಣೆ, ಬೇಸಾಯ ಕ್ರಮಗಳು, ರೋಗ–ಕೀಟ ನಿರ್ವಹಣೆ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ವಿಳಾಸ:  ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ. ಸಂಪರ್ಕ:   9945803463
ಇಂದು ವಿದ್ಯುತ್ ವ್ಯತ್ಯಯ
ಬೆಂಗಳೂರು:
  ಬೆಸ್ಕಾಂ ನಿರ್ವಹಣಾ ಕಾಮಗಾರಿ ನಡೆಸಲಿರುವ ಕಾರಣ ಗುರುವಾರ ಏ. 27ರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ  ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಕೆರೆತೊಣ್ಣೂರು: 36 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ

ಪಾಂಡವಪುರ: ಧಾರ್ಮಿಕ ಮತ್ತು ಸಮಾಜ ಸುಧಾರಕ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ 36 ಅಡಿ ಎತ್ತರದ ಪ್ರತಿಮೆಯನ್ನು ಐತಿಹಾಸಿಕ ಪ್ರವಾಸಿ ತಾಣವಾದ ತಾಲ್ಲೂಕಿನ ಕೆರೆತೊಣ್ಣೂರಿನಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು.
ಬೆಂಗಳೂರಿನ ಯದುಗಿರಿ ಯತಿರಾಜ ಮಠದಿಂದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮಠದ ಪೀಠಾಧಿಪತಿ ಯತಿರಾಜ ಜೀಯರ್ ಸ್ವಾಮೀಜಿ, ಸಂಸದ ಸಿ.ಎಸ್.ಪುಟ್ಟರಾಜು ಪುಷ್ಪಾರ್ಚನೆ ಮಾಡುವುದರ ಮೂಲಕ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಯತಿರಾಜ ಜೀಯರ್‌ ಸ್ವಾಮೀಜಿ, ‘ರಾಮಾನುಜಾಚಾರ್ಯರು 950 ವರ್ಷಗಳ ಹಿಂದೆ ತಮಿಳುನಾಡಿನಿಂದ ಅಂದಿನ ತೊಂಡನೂರು ಗ್ರಾಮಕ್ಕೆ (ಈಗ ತೊಣ್ಣೂರು) ಬಂದು 13 ವರ್ಷಗಳ ಕಾಲ ನೆಲೆಸಿದ್ದರು. ಸಾಮಾಜಿಕ, ಧಾರ್ಮಿಕ ಸುಧಾರಣೆಗಳನ್ನು ಮಾಡಿದರು’ ಎಂದು ಹೇಳಿದರು.
ಜಾತಿ ಪದ್ಧತಿ ಮತ್ತು ಅಸ್ಪ್ಯಶ್ಯತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಶ್ರಮಿಸಿದ್ದರು. ಕೆರೆ ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿ ಜೀರ್ಣೋದ್ಧಾರಗೊಳಿಸಿದ್ದರು. ಅವರ ನೆನಪಿಗಾಗಿ ರಾಮಾನುಜಾಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ ಎಂದರು.
ಕೆರೆತೊಣ್ಣೂರು ರಾಮಾನುಜಾಚಾರ್ಯರ ಕರ್ಮಭೂಮಿ, ಪುಣ್ಯಭೂಮಿ, ತಪೋಭೂಮಿಯಾಗಿತ್ತು. ಸರ್ಕಾರ ಈ ಸ್ಥಳವನ್ನು ಅಭಿವೃದ್ಧಿಗೊಳಿಸಬೇಕು. ಪ್ರತಿಮೆಯ ಸ್ಥಳದಲ್ಲಿ ಉದ್ಯಾನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ‘ರಾಮಾನುಜಾಚಾರ್ಯರು ಬಂದು ನೆಲೆಸಿದ ಮೇಲೆ ಕೆರೆತೊಣ್ಣೂರು ಐತಿಹಾಸಿಕ ಸ್ಥಳವಾಗಿ ಪರಿವರ್ತನೆಯಾಯಿತು. ಅದನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ‘ಪ್ರತಿಮೆ ಪ್ರತಿಷ್ಠಾಪನೆಯಿಂದಾಗಿ ಇದು ಪ್ರವಾಸಿ ತಾಣವಾಗಲಿದೆ. ಗ್ರಾಮವನ್ನು ಆದರ್ಶ ಗ್ರಾಮದಡಿ ಆಯ್ಕೆ ಮಾಡಿಕೊಂಡಿದ್ದು, ಅಭಿವೃದ್ಧಿ ಮಾಡಲಾಗುವುದು’ ಎಂದು ತಿಳಿಸಿದರು.
ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ಜಿ.ಪಂ. ಸಿಇಒ ಶರತ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ತ್ಯಾಗರಾಜು, ಶಾಂತಲಾ ರಾಮಕೃಷ್ಣ ಇದ್ದರು.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ‘ಉಡಾನ್‌’ಗೆ ಇಂದು ಚಾಲನೆ

ನವದೆಹಲಿ: ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ‘ಉಡಾನ್‌’ ಯೋಜನೆ ಗುರುವಾರದಿಂದ ಆರಂಭವಾಗಲಿದೆ.

ಪ್ರಾದೇಶಿಕವಾಗಿ ವಾಯು ಸಂಪರ್ಕ ಕಲ್ಪಿಸುವ ‘ಉಡಾನ್‌’ (ಶ್ರೀಸಾಮಾನ್ಯನಿಗೂ ವಿಮಾನ ಯಾನ ಯೋಗ)’ ಯೋಜನೆ ಅಡಿಯಲ್ಲಿ ಒಂದು ಸೀಟಿಗೆ, ಒಂದು ಗಂಟೆ ಪ್ರಯಾಣಕ್ಕೆ ₹2,500 ದರ ನಿಗದಿಪಡಿಸಲಾಗಿದೆ. ಇದು ಅಂದಾಜು 500 ಕಿಲೋ ಮೀಟರ್‌ಗೆ ಅನ್ವಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಪ್ರಥಮ ವಿಮಾನ ಹಾರಾಟ ಶಿಮ್ಲಾ–ದೆಹಲಿ ನಡುವೆ ಆರಂಭವಾಗಲಿದೆ. ಬಳಿಕ ಕಡಪ–ಹೈದರಾಬಾದ್‌ ಮತ್ತು ನಾಂದೇಡ್‌–ಹೈದರಾಬಾದ್‌ ನಡುವೆ ಆರಂಭವಾಗಲಿವೆ.

ಈ ಯೋಜನೆ ಅಡಿಯಲ್ಲಿ ಮೈಸೂರು, ಬೀದರ್‌ ಸೇರಿದಂತೆ ದೇಶದ ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ 128 ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಐದು  ಏರ್‌ಲೈನ್ಸ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಚ್‌ 30ರಂದು ಪ್ರಕಟಿಸಿತ್ತು.

‘ಮಾರುಕಟ್ಟೆ ಆಧಾರಿತ ವ್ಯವಸ್ಥೆ ಅಡಿಯಲ್ಲಿ ಪ್ರಾದೇಶಿಕ ಸಂಪರ್ಕ ಕಲ್ಪಿಸುವ  ಉಡಾನ್‌ ಪ್ರಥಮ ಜಾಗತಿಕ ಯೋಜನೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್‌ ಮಾಡಿದ್ದಾರೆ.

‘ಪ್ರಾದೇಶಿಕವಾಗಿ ಮಹತ್ವ ಪಡೆದಿರುವ ನಗರಗಳಿಗೆ ವಿಮಾನ ಮೂಲಕ ನಾಗರಿಕರು ತೆರಳುವ ಸೌಲಭ್ಯ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ. ಉಡಾನ್‌ ಯೋಜನೆಯನ್ನು ರಾಷ್ಟ್ರೀಯ ನಾಗರಿಕ ವಿಮಾನ ನೀತಿಯ ಅಂಗವಾಗಿ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಂದಾಜು ₹205 ಕೋಟಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಸಹ ನೆರವು ನೀಡಲಿದ್ದು, 19 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಈ ಉದ್ದೇಶಕ್ಕಾಗಿ ಒಪ್ಪಂದ ಮಾಡಿಕೊಂಡಿವೆ.

ಏರ್‌ಇಂಡಿಯಾದ ಅಲಯನ್ಸ್‌ ಏರ್‌, ಸ್ಪೈಸ್‌ ಜೆಟ್‌, ಟ್ರುಜೆಟ್‌, ಏರ್‌ ಡೆಕ್ಕನ್‌ ಮತ್ತು ಏರ್‌ ಒಡಿಶಾ ಏರ್‌ಲೈನ್ಸ್‌ಗಳು ಬಿಡ್ಡಿಂಗ್‌ನಲ್ಲಿ ಆಯ್ಕೆಯಾಗಿವೆ.
ಈ ಏರ್‌ಲೈನ್‌ಗಳ ವಿಮಾನಗಳಲ್ಲಿ ವಿಶೇಷ ರಿಯಾಯಿತಿ ದರದ ಸೌಲಭ್ಯ 40 ಸೀಟುಗಳಿಗೆ ಮಾತ್ರ ದೊರೆಯಲಿದೆ.

ಅಲಯನ್ಸ್‌ ಏರ್‌ ಮತ್ತು ಏರ್  ಡೆಕ್ಕನ್‌ ಶಿಮ್ಲಾ–ದೆಹಲಿ ವಲಯ ಹಾಗೂ ಟ್ರುಜೆಟ್‌ ಕಡಪ–ಹೈದರಾಬಾದ್‌ ಮತ್ತು ನಂದೇಡ್‌–ಹೈದರಾಬಾದ್‌ ವಲಯದಲ್ಲಿ ಹಾರಾಟ ನಡೆಸಲು ಹಕ್ಕುಗಳನ್ನು ಪಡೆದಿದೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಬಂಧನ

ಶ್ರೀನಗರ: ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನ್ವಯ ಅವರನ್ನು ಬಂಧಿಸಲಾಗಿದೆ.
ಗುರುವಾರ ಬೆಳಿಗ್ಗೆ ಆಸಿಯಾ ಅವರ ನಿವಾಸದಿಂದ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡುವಂತೆ ಕಾಶ್ಮೀರ ಕಣಿವೆಯ ಮಹಿಳೆಯರನ್ನು ಪ್ರಚೋದಿಸುವುದು ಮತ್ತು ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಳಿಸಲು ಕುಮ್ಮಕ್ಕು ನೀಡುತ್ತಿರುವ ಆರೋಪ ಆಸಿಯಾ ಮೇಲಿದೆ.
ಭದ್ರತಾ ಪರಾಮರ್ಶೆ ಸಭೆ: ಜಮ್ಮು ಮತ್ತು ಕಾಶ್ಮೀರದಲ್ಲಿನ ಸದ್ಯದ ಪರಿಸ್ಥಿತಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಭದ್ರತಾ ಪರಾಮರ್ಶೆ ಸಭೆ ನಡೆಸುವ ನಿರೀಕ್ಷೆ ಇದೆ. ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಸೇನಾ ಶಿಬಿರದ ಮೇಲೆ ಉಗ್ರ ದಾಳಿ: ಮೂವರು ಯೋದರು ಹುತಾತ್ಮ

ಶ್ರೀನಗರ: ಕುಪ್ವಾರಾದ ಪಂಜ್‌ಗಾಂನಲ್ಲಿ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಇರುವ ಸೇನಾ ಶಿಬಿರದ ಮೇಲೆ ಗುರುವಾರ ಮುಂಜಾನೆ 4ರ ಸುಮಾರಿಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ಸೇನಾಧಿಕಾರಿಯೂ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಐವರು ಯೋಧರು ಗಂಭೀರ ಗಾಯಗೊಂಡಿದ್ದಾರೆ.
ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ದಾಳಿಕೋರರಲ್ಲಿ ಇಬ್ಬರಿಗಿಂತ ಹೆಚ್ಚು ಉಗ್ರರು ಇದ್ದಿರಬಹುದು ಎಂದು ಭದ್ರತಾ ಪಡೆಗಳು ಅನುಮಾನ ವ್ಯಕ್ತಪಡಿಸಿವೆ. ತಲೆಮರೆಸಿಕೊಂಡಿರಬಹುದು ಎನ್ನಲಾದ ಉಗ್ರರಿಂದ ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ಸೇನೆ ಕ್ರಮ ಕೈಗೊಳ್ಳುತ್ತಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮೃತಪಟ್ಟಿರುವ ಸೇನಾಧಿಕಾರಿಯನ್ನು ಕ್ಯಾಪ್ಟನ್ ಆಯುಷ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಯೋಧರ ಗುರುತನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ.
ಗಾಯಗೊಂಡಿರುವ ಯೋಧರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರಕ್ಕೆ ಕರೆದೊಯ್ಯಲಾಗಿದ್ದು, ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಮಲೇರಿಯಕ್ಕೆ ಮೊದಲ ಲಸಿಕೆ

ಲೇರಿಯಾ ರೋಗ ನಿಯಂತ್ರಣಕ್ಕೆ ಕಂಡುಹಿಡಿದಿರುವ ಆರ್​ಟಿಎಸ್​ಎಸ್ ಲಸಿಕೆಯನ್ನು ಮುಂದಿನ ವರ್ಷದೊಳಗಾಗಿ ಮಲೇರಿಯ ಪೀಡಿತ ರಾಷ್ಟ್ರಗಳ ಜನತೆಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಉದ್ದೇಶಿಸಿದೆ. ಸೋಮವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಬ್ಲ್ಯೂಎಚ್​ಒ, ಮುಂದಿನ ವರ್ಷದೊಳಗಾಗಿ ಆಫ್ರಿಕಾದ ಮೂರು ರಾಷ್ಟ್ರಗಳಾದ ಘಾನ, ಕೀನ್ಯಾ ಮತ್ತು ಮಲಾವಿಯ ಜನತೆಗೆ ಲಸಿಕೆ ನೀಡಲಾಗುತ್ತದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಲೇರಿಯ ಪ್ರಕರಣಗಳು ಕಂಡುಬರುತ್ತಿದ್ದು, ಅಧಿಕ ಸಾವು ಸಂಭವಿಸುತ್ತಿದೆ. ಆರ್​ಟಿಎಸ್​ಎಸ್ ಲಸಿಕೆಯು ಸೊಳ್ಳೆಯಿಂದ ಹರಡುವ ಮಲೇರಿಯ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. ಲಸಿಕೆಯನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಮಲೇರಿಯ ಪಡೀತರಿಗೆ ನಾಲ್ಕು ಬಾರಿ ಲಸಿಕೆ ನೀಡಬೇಕಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಂದು ಮತ್ತು ನಾಲ್ಕನೇ ಲಸಿಕೆಯನ್ನು 18 ತಿಂಗಳ ನಂತರ ತೆಗೆದುಕೊಳ್ಳಬೇಕಿದೆ. ಮಲೇರಿಯದಿಂದ ಆಫ್ರಿಕಾದಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸುತ್ತಿದೆ.

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : 15 ಸಾರ್ವಜನಿಕ ರಜೆ ರದ್ದುಗೊಳಿಸಿದ ಆದಿತ್ಯನಾಥ್

ನವದೆಹಲಿ: ಅಧಿಕಾರಕ್ಕೇರಿದಾಗಿನಿಂದ ಹಲವು ಜನಪ್ರಿಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೆಚ್ಚುಗೆ ಗಳಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 15 ಸಾರ್ವಜನಿಕ ರಜೆಗಳನ್ನು ರದ್ದುಗೊಳಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಕ್ರಮಕ್ಕೆ ಸಹಜವಾಗಿಯೇ ಪರ-ವಿರೋಧದ ಟೀಕೆಗಳು ವ್ಯಕ್ತವಾಗಿವೆ.
ಪ್ರಮುಖವಾಗಿ ಮಿಲಾದ್-ಉನ್-ನಬಿ, ಛತ್ ಮತ್ತು ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಗೂ ಕತ್ತರಿ ಹಾಕಲಾಗಿದೆ. ಬಿಜೆಪಿ ಸರ್ಕಾರ ಸ್ಥಾಪಿಸಿರುವ ಹಲವು ರಾಜ್ಯಗಳಲ್ಲಿ ಮಿಲಾದ್ ಉನ್ ನಬಿ (ಪ್ರೊಫೆಟ್ ಮೊಹಮ್ಮದ್ ಜನ್ಮದಿನ) ಅಂಗವಾಗಿ ಸರ್ಕಾರಿ ರಜೆ ನೀಡಲಾಗುತ್ತಿದೆ. ಮಿಲಾದ್ ಉನ್ ನಬಿ ಹಾಗೂ ಅಲ್ವಿದಾ (ಈದ್​ಗೂ ಮುನ್ನ ರಮ್ಜಾನ್ ಕೊನೆಯ ದಿನ) ಅಂಗವಾಗಿ ನೀಡಲಾಗುತ್ತಿರುವ ರಜೆಯನ್ನೂ ಸರ್ಕಾರ ರದ್ದು ಮಾಡಿರುವುದು ಮುಸ್ಲಿಂ ಮುಖಂಡರು ಹುಬ್ಬೇರಿಸುವಂತೆ ಮಾಡಿದೆ.
‘ವಿಶೇಷ ದಿನಗಳಂದು ನೀಡುವ ರಜೆಗಳನ್ನು ರದ್ದುಮಾಡುವ ಉತ್ತರಪ್ರದೇಶದ ಕ್ರಮ ದುರದೃಷ್ಟಕರ. ಕೆಲವು ಹಬ್ಬಗಳನ್ನು ಮುಸ್ಲಿಂ ಸಮುದಾಯದವರೇ ಆಚರಿಸಿದರೂ ಹಿಂದೂಗಳು ಪಾಲ್ಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಿಲಾದ್ ಉನ್ ನಬಿ ಅಂಗವಾಗಿ ನೀಡುವ ರಜೆಯು ಕೇಂದ್ರದಲ್ಲಿ ಯು.ಪಿ. ಸಿಂಗ್ ನೇತೃತ್ವದ ಸರ್ಕಾರ ಇದ್ದಾಗಿನಿಂದಲೂ ನೀಡಲಾಗುತ್ತಿದೆ’ ಎಂದು ಮುಸ್ಲಿಂ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಬೇರೆ ಸಮುದಾಯಗಳ ಪ್ರಮುಖರ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಯನ್ನು ಸರ್ಕಾರ ರದ್ದು ಮಾಡಿರುವುದರಿಂದ ಇದು ಉದ್ದೇಶಪೂರ್ವಕವಾಗಿ ಕೈಗೊಂಡ ನಿರ್ಧಾರ ಎನಿಸುವುದಿಲ್ಲ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಕಲ್ಬೆ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ: ಸಿಎಂ

ಗುಂಡ್ಲುಪೇಟೆ: ‘ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅಳವಡಿಸುವ ಸಂಬಂಧ ಸುತ್ತೋಲೆ ಹೊರಡಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಮಹದೇವ ಪ್ರಸಾದ್ ನಗರದಲ್ಲಿ ಬುಧವಾರ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಲ್ಲಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.
ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಸಂಬಂಧ ಆದೇಶ ಹೊರಡಿಸಿತ್ತು. ಇದರಿಂದ ಬಸವಣ್ಣನ ತವರು ರಾಜ್ಯವಾದ ಕರ್ನಾಟಕದಲ್ಲೂ ಇಂಥ ಕ್ರಮಕೈಗೊಳ್ಳಬೇಕು ಎಂಬ ಕೂಗು ವಿವಿಧ ಸ್ತರಗಳಿಂದ ಕೇಳಿ ಬಂದಿತ್ತು.
12ನೇ ಶತಮಾನದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದ್ದ ಬಸವಣ್ಣ, ಅನುಭವ ಮಂಟದ ಮೂಲಕ ಎಲ್ಲ ಸಮುದಾಯವರಿಗೂ ಸಮಾನ ಅವಕಾಶ ನೀಡುವ ನಿಯಮ ಜಾರಿಗೆ ತಂದಿದ್ದರು. ತಮ್ಮ ಕ್ರಾಂತಿಕಾರಿ ನಡೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ಪದ್ಧತಿ, ಮೌಢ್ಯದ ವಿರುದ್ಧ ಹೋರಾಟ ನಡೆಸಿದ್ದರು.

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ: ಸಿಎಂ

ಗುಂಡ್ಲುಪೇಟೆ: ‘ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅಳವಡಿಸುವ ಸಂಬಂಧ ಸುತ್ತೋಲೆ ಹೊರಡಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಮಹದೇವ ಪ್ರಸಾದ್ ನಗರದಲ್ಲಿ ಬುಧವಾರ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಲ್ಲಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.
ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಸಂಬಂಧ ಆದೇಶ ಹೊರಡಿಸಿತ್ತು. ಇದರಿಂದ ಬಸವಣ್ಣನ ತವರು ರಾಜ್ಯವಾದ ಕರ್ನಾಟಕದಲ್ಲೂ ಇಂಥ ಕ್ರಮಕೈಗೊಳ್ಳಬೇಕು ಎಂಬ ಕೂಗು ವಿವಿಧ ಸ್ತರಗಳಿಂದ ಕೇಳಿ ಬಂದಿತ್ತು.
12ನೇ ಶತಮಾನದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದ್ದ ಬಸವಣ್ಣ, ಅನುಭವ ಮಂಟದ ಮೂಲಕ ಎಲ್ಲ ಸಮುದಾಯವರಿಗೂ ಸಮಾನ ಅವಕಾಶ ನೀಡುವ ನಿಯಮ ಜಾರಿಗೆ ತಂದಿದ್ದರು. ತಮ್ಮ ಕ್ರಾಂತಿಕಾರಿ ನಡೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ಪದ್ಧತಿ, ಮೌಢ್ಯದ ವಿರುದ್ಧ ಹೋರಾಟ ನಡೆಸಿದ್ದರು.

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಭಾರತೀಯರೇ, ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಬನ್ನಿ

ಭಾರತೀಯರೇ, ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಬನ್ನಿ

| ಮೇರಿ ಕೇ ಲಾಸ್ ಕಾರ್ಲ್ಸ್​ಸನ್

ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ 10 ಲಕ್ಷಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯುತ್ತಿದ್ದು, ಇದರಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ 1.66 ಲಕ್ಷದಷ್ಟಿದೆ. ಕಳೆದೆರಡು ವರ್ಷಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ವರ್ಷವೂ ಅಮೆರಿಕದ 4,500 ಪ್ರಮಾಣೀಕೃತ ಶೈಕ್ಷಣಿಕ ಸಂಸ್ಥೆಗಳಿಂದ ಉನ್ನತ ವ್ಯಾಸಂಗಕ್ಕೆ ದಾಖಲಾಗುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆಹ್ವಾನ ಕಳುಹಿಸಲಾಗಿದ್ದು, ಅವರಿಗೆಲ್ಲಾ ಅಭಿನಂದನೆಗಳು. ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಓದಿ ಪದವಿ ಪಡೆದವರೆಲ್ಲ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಉಭಯ ದೇಶಗಳ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವಣ ಸಹಭಾಗಿತ್ವಕ್ಕೆ ಒತ್ತಾಸೆ ನೀಡುವುದು ಅಮೆರಿಕದ ರಾಯಭಾರ ಕಚೇರಿಯ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ.

ಅಮೆರಿಕದಲ್ಲಿ ಓದುವ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಕೂಲಂಕಷವಾದ ಪರಿಶೀಲನೆ ಅಗತ್ಯವಾಗಿದೆ. ತುಲನೆ ಮಾಡಿ ಅತ್ಯುತ್ತಮವಾದುದನ್ನು ಆಯ್ದುಕೊಳ್ಳಬೇಕು. ಎಜ್ಯುಕೇಶನ್​ಯುುಎಸ್​ಎ (educationusa.state.gov)ಗೆ ಭೇಟಿ ನೀಡಿ ಶೈಕ್ಷಣಿಕ ಸಂಸ್ಥೆಗಳು, ಲಭ್ಯವಿರುವ ಕೋರ್ಸ್​ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಭಾರತದಲ್ಲಿ ಏಳು ಎಜ್ಯುಕೇಶನ್ ಯುಎಸ್​ಎ ಸಲಹಾ ಕೇಂದ್ರಗಳಿದ್ದು, ಇವುಗಳಿಂದಲೂ ನಿಖರ ಮತ್ತು ಸಮಗ್ರ ಮಾಹಿತಿ ಸಿಗುತ್ತವೆ. ಈ ಬಾರಿ ಎಜ್ಯುಕೇಷನ್​ಯುುಎಸ್​ಎ ಭಾರತದ 7 ನಗರಗಳು ಮತ್ತು ಸಲಹಾಕೇಂದ್ರಗಳಿಗೆ ಭೇಟಿ ನೀಡಲಿದೆ. ಅಮೆರಿಕದ ಶಿಕ್ಷಣ ಸಂಸ್ಥೆಗಳು ವೈವಿಧ್ಯತೆಗೆ ಆದ್ಯತೆ ನೀಡುತ್ತಿದ್ದು, ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತದೆ. ವಿದ್ಯಾರ್ಥಿಗಳು ಹೊತ್ತುತರುವ ವಿಶಿಷ್ಟ ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಗೌರವಿಸುತ್ತವೆ. ಸದ್ಯದ ಅಂಕಿಅಂಶಗಳಂತೆ ಅಮೆರಿಕಕ್ಕೆ ಉನ್ನತ ವ್ಯಾಸಂಗ ಪಡೆದುಕೊಳ್ಳಲು ಬರುವ ಪ್ರತಿ ಆರು ವಿದೇಶಿ ವಿದ್ಯಾರ್ಥಿಗಳಲ್ಲಿ ಓರ್ವ ಭಾರತೀಯನಿರುತ್ತಾನೆ. ಇವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ್ದು, ವಿಶ್ವವಿದ್ಯಾಲಯ ಮತ್ತು ತಮ್ಮ ಸುತ್ತಮುತ್ತಲಿನ ಸಮುದಾಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಅಮೆರಿಕಕ್ಕೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಲ್ಯಾಣ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿಯೇ ನೂತನ ಆಂದೋಲನ You Are Welcome Here ಅಮೆರಿಕದ ವಿವಿಗಳು ನಡೆಸುತ್ತಿವೆ. ಇಲ್ಲಿನ ವಿವಿಗಳ ಕ್ಯಾಂಪಸ್ಸಿನ ಗುಣಮಟ್ಟ ಉತ್ತಮವಾಗಿದ್ದು, ಈ ಹಿಂದೆ ಇಲ್ಲಿ ವಿದ್ಯಾಭ್ಯಾಸ ಪಡೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ನವೆಂಬರ್​ನಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಸಪ್ತಾಹದ ಅಂಗವಾಗಿ ಅಮೆರಿಕ ರಾಯಭಾರ ಕಚೇರಿ ಸರಣಿ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಿಮ್ಮ ಬದುಕು ಮತ್ತು ವೃತ್ತಿಜೀವನದ ಗುರಿಗಳನ್ನು ತಲುಪಲು ನೆರವಾಗುವ ನಿಟ್ಟಿನಲ್ಲಿ ಮೌಲ್ಯಯುತ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಮ್ಮ ಕಾಲೇಜುಗಳು ನಿಮ್ಮ ಸ್ವಾಗತಕ್ಕೆ ಸಜ್ಜಾಗಿವೆ. ಅವರೊಂದಿಗೆ ನಾನೂ ದನಿ ಗೂಡಿಸುತ್ತಿರುವೆ ಅಮೆರಿಕಕ್ಕೆ ನಿಮಗಿದೋ ಸ್ವಾಗತ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...