ಭೋಪಾಲ್: ಎಲ್ಲವೂ ಅಂದು ಕೊಂಡಂತೆಯೇ ನಡೆದರೆ, ಇನ್ನು ಮೂರು ವರ್ಷಗಳ ಅವಧಿಯಲ್ಲಿ ಭೋಪಾಲದ ಹಬೀಬ್ಗಂಜ್ ಉಪನಗರ ರೈಲ್ವೆ ನಿಲ್ದಾಣ ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣವಾಗಲಿದೆ.
ಪಿಪಿಪಿ (ಸಾರ್ವಜನಿಕ- ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಇದರ ಮರು ಅಭಿವೃದ್ಧಿ ಕೆಲಸಗಳಿಗೆ ಜೂನ್ 9ರಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಚಾಲನೆ ನೀಡಲಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ಹಬೀಬ್ ಗಂಜ್ ರೈಲ್ವೆ ನಿಲ್ದಾಣದಲ್ಲಿ ಅಂಗಡಿಗಳು, ಕಚೇರಿಗಳು ಹಾಗೂ ಹೋಟೆಲ್ಗಳು ನಿರ್ವಣವಾಗಲಿದ್ದು, ಪೂರ್ಣ ಪ್ರಮಾಣದಲ್ಲಿ ವಾಣಜ್ಯ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಲಿದೆ.
ಏನಿದರ ಉದ್ದೇಶ: ಹಬೀಬ್ಗಂಜ್ ರೈಲ್ವೆ ನಿಲ್ದಾಣ ಮರುಅಭಿವೃದ್ಧಿ ಯೋಜನೆ ಹಿಂದೆ, ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ.
ರೈಲ್ವೆ ಸ್ಟೇಷನ್ ಸ್ಪೆಷಲ್ಭೋಪಾಲ್ನ ಕೇಂದ್ರಿತವಾದ ಬನ್ಸಾಲ್ ಗ್ರೂಪ್ಗೆ ಈ ನಿಲ್ದಾಣದ ಮರು ಅಭಿವೃದ್ಧಿ ಹೊಣೆಗಾರಿಕೆ ವಹಿಸಲಾಗಿದೆ. ಅಲ್ಲದೆ, 8 ವರ್ಷಗಳ ನಿರ್ವಹಣೆಯ ಹೊಣೆಯೂ ಇದೇ ಕಂಪನಿಯದ್ದು.ಕಂಪನಿಗೆ ಜಮೀನನ್ನು 45 ವರ್ಷಗಳ ಅವಧಿಗೆ ಭೋಗ್ಯಕ್ಕೆ ಒದಗಿಸಲಾಗಿದೆ. ನಿಲ್ದಾಣದ ಅಭಿವೃದ್ಧಿಗಾಗಿ ಈ ಕಂಪನಿ 100 ಕೋಟಿ ರೂ., 17,245 ಚ.ಮೀ. ಜಮೀನು ಅಭಿವೃದ್ಧಿಗಾಗಿ 350 ಕೋಟಿ ರೂ. ಹೂಡಿಕೆ ಮಾಡಲಿದೆ.ಪರಿಸರ ಸ್ನೇಹಿ ನಿಲ್ದಾಣ ದಲ್ಲಿ ಸೌರ ವಿದ್ಯುತ್ ಅಳವಡಿಕೆ, ವಿಕಲಚೇತನರ ಸ್ನೇಹಿ ಸೌಲಭ್ಯ, ಶಾಪಿಂಗ್ ಕಾಂಪ್ಲೆಕ್ಸ್, ರ್ಪಾಂಗ್, ವಿಶ್ವದರ್ಜೆಯ ರೆಸ್ಟೋರೆಂಟ್ಗಳು, ವಿದೇಶ ವಿನಿಮಯ ಕೇಂದ್ರಗಳನ್ನು ಒಳಗೊಂಡ ವಾಣಿಜ್ಯ ಹಬ್ ಈ ನಿಲ್ದಾಣದ ಆಕರ್ಷಣೆಯಾಗಲಿದೆ.
No comments:
Post a Comment