ಲೊನಾಟೊ, ಇಟಲಿ : ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ರುಹಾನ್ ಆಳ್ವಾ ಅವರು ಇಟಾಲಿಯನ್ ಈಸಿಕಾರ್ಟ್ ಚಾಂಪಿ ಯನ್‌ಷಿಪ್‌ನ ನಾಲ್ಕನೇ ರೇಸ್‌ನಲ್ಲಿ ಗೆಲುವು ಗಳಿಸಿದ್ದಾರೆ.
ಭಾನುವಾರ ನಡೆದ ಸ್ಪರ್ಧೆಯಲ್ಲಿ 10 ವರ್ಷದ ಬೆಂಗಳೂರಿನ ರುಹಾನ್ ಅವರು ಮಿಂಚಿನ ವೇಗದಲ್ಲಿ ಕಾರ್ಟ್ ಚಲಾಯಿಸಿದರು. ಇಟಲಿಯ ಬಿರೆಲ್ ಆರ್ಟ್ ಸಂಸ್ಥೆಯ ಪ್ರಾಯೋಜಕತ್ವ ಪಡೆದಿ ರುವ ರುಹಾನ್ ಅವರು ನಾಲ್ಕನೇ ರೇಸ್ ನಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಐದನೇ ರೇಸ್‌ನಲ್ಲಿ ಅವರು ಮೂರನೇ ಯವರಾಗಿ ನಿಗದಿತ ದೂರ ಕ್ರಮಿಸಿದರು.
ಈ ಮೂಲಕ ಒಟ್ಟು ಪಾಯಿಂಟ್ಸ್ ಅನ್ನು 90ಕ್ಕೆ ಹೆಚ್ಚಿಸಿಕೊಂಡಿರುವ ಅವರು ಒಟ್ಟಾರೆ ಎರಡನೇ ಸ್ಥಾನದಲ್ಲಿದ್ದಾರೆ. ಎಂಎಲ್‌ಜಿ ರೇಸಿಂಗ್ ತಂಡದ ಪ್ಯಾಟ್ರೀಸ್ ಲೊರೆಂಜೊ ಅವರು ಅಗ್ರಸ್ಥಾನ ಹೊಂದಿದ್ದಾರೆ.
‘ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಹೀಗಾಗಿ ಪ್ರತಿ ಹಂತದಲ್ಲೂ ಕಠಿಣ ಪೈಪೋಟಿ ಎದುರಾಗುತ್ತಿದೆ. ಇದರ ನಡುವೆಯೂ ನಾಲ್ಕು ಸುತ್ತುಗಳಲ್ಲೂ ಉತ್ತಮ ಸಾಮರ್ಥ್ಯ ತೋರಿರುವುದು ಖುಷಿ ನೀಡಿದೆ’ ಎಂದು ರುಹಾನ್ ಖುಷಿ ವ್ಯಕ್ತಪಡಿಸಿದ್ದಾರೆ.
ಚಾಂಪಿಯನ್‌ಷಿಪ್‌ನ ಆರು ಮತ್ತು ಏಳನೇ ಸುತ್ತಿನ ಸ್ಪರ್ಧೆಗಳು ಜುಲೈ 1 ಮತ್ತು 2ರಂದು ಇಟಲಿಯ ಕ್ಯಾಸ್ಟೆಲ್ಲೆಟ್ಟೊದಲ್ಲಿ ನಡೆಯಲಿದೆ.

No comments:
Post a Comment