ಬರ್ನ್/ನವದೆಹಲಿ: ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಜಯ ದೊರೆತಿದ್ದು, ಸ್ವಿಸ್ ಬ್ಯಾಂಕ್ಗಳ ಖಾತೆದಾರರ ಮಾಹಿತಿ ನೀಡಲು ಸ್ವಿಜರ್ಲೆಂಡ್ ಒಪ್ಪಿಗೆ ಸೂಚಿಸಿದೆ.
ಸ್ವಿಸ್ ಬ್ಯಾಂಕ್ಗಳನ್ನು ಖಾತೆ ಹೊಂದಿರುವವರ ಮಾಹಿತಿ ಒದಗಿಸುವಂತೆ ಭಾರತ ಸಲ್ಲಿಸಿದ್ದ ಮನವಿಗೆ ಸ್ವಿಸ್ ಫೆಡರ್ ಕೌನ್ಸಿಲ್ ಶುಕ್ರವಾರ ನಡೆದ ಸಭೆಯಲ್ಲಿ ಅನುಮೋದಿಸಿದೆ. ಭಾರತ ಸೇರಿದಂತೆ ಇತರ 40 ದೇಶಗಳಿಗೆ ಸ್ವಯಂ ಚಾಲಿತ ಮಾಹಿತಿ ವಿನಿಮಯ (AEOI) ವ್ಯವಸ್ಥೆಯಡಿ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿದೆ.
2018ನೇ ಸಾಲಿನಿಂದ ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರನ್ವಯ 2019ರಲ್ಲಿ ಮೊದಲ ಹಂತದಲ್ಲಿ ಮಾಹಿತಿಯನ್ನು ಭಾರತ ಮತ್ತು ಇತರ ರಾಷ್ಟ್ರಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದು. 2019ರಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ದಿನಾಂಕದ ಕುರಿತು ಸ್ವಿಜರ್ಲೆಂಡ್ ಶೀಘ್ರದಲ್ಲೇ ಭಾರತ ಸರ್ಕಾರಕ್ಕೆ ಮಾಹಿತಿ ಒದಗಿಸಲಿದೆ.

No comments:
Post a Comment