ಮುಂಬೈ: 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಅಬು ಸಲೇಂ ಹಾಗೂ ಮುಸ್ತಾಫಾ ದೋಸ್ಸಾನನ್ನು ಅಪರಾಧಿ ಎಂದು ಪರಿಗಣಿಸಿ ಮುಂಬೈ ಟಾಡಾ ವಿಶೇಷ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಜೂನ್ 19ರಂದು ಪ್ರಕಟಿಸಲಿದೆ.
ಮುಂಬೈ ಸರಣಿ ಸ್ಫೋಟಕ್ಕೆ ಉಗ್ರ ಅಬು ಸಲೇಂ ಹಾಗೂ ಮುಸ್ತಫಾ ಸಂಚು ರೂಪಿಸಿದ್ದ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಫಿರೋಜ್ ರಷೀದ್ ಖಾನ್ ಹಾಗೂ ತಾಹೀರ್ ಮರ್ಚೆಂಟ್ ಹಾಗೂ ಮುಸ್ತಫಾ ಸಹೋದರ ಮೊಹಮ್ಮದ್ ದೋಸ್ಸಾ ಅವರನ್ನು ಕೂಡ ಅಪರಾಧಿ ಎಂದು ಪರಿಗಣಿಸಲಾಗಿದೆ.
ಅಪರಾಧಿ ಮುಸ್ತಫಾ ದೋಸ್ಸಾ ಉಗ್ರರಿಗೆ ತರಬೇತಿ ನೀಡಿದ್ದ. ಮುಂಬೈ ಮೇಲೆ ದಾಳಿ ನಡೆಸಲು ಫಿರೋಜ್ ರಷೀದ್ ಖಾನ್ ಎಂಬ ಅಪರಾಧಿ ಶಸ್ತ್ರಾಸ್ತ್ರ ಪೂರೈಸಿದ್ದ. ಈ ಪ್ರಕರಣದ ಮೊದಲ ಹಂತದ ವಿಚಾರಣೆ 2007 ರಲ್ಲಿ ಮುಕ್ತಾಯವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 129 ಜನರ ಪೈಕಿ 100 ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಮೃತಪಟ್ಟಿದ್ದರು. ಅಲ್ಲದೆ 700ಕ್ಕೂ ಅಧಿಕ ಮಂದಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದರು.

No comments:
Post a Comment