Tuesday, July 4, 2017

ಪ್ರಚಲಿತ ವಿದ್ಯಮಾನ : ಜುಲೈ 2017 : ಕಡಿಮೆ ದರದ ಎ.ಸಿ ರೈಲು ಶೀಘ್ರ ಆರಂಭ

ನವದೆಹಲಿ: ರೈಲು ಪ್ರಯಾಣಿಕರಿಗೆ ಮಿತದರದ ‘ಎಕಾನಮಿ ಎ.ಸಿ’ ದರ್ಜೆಯಲ್ಲಿ ಪ್ರಯಾಣಿಸುವ ಸೌಲಭ್ಯ ಶೀಘ್ರದಲ್ಲಿಯೇ ದೊರೆಯಲಿದೆ. ಸಾಮಾನ್ಯ 3 ಟೈರ್‌ ಎ.ಸಿಗಿಂತ ಈ ದರ್ಜೆಯ ಪ್ರಯಾಣ ದರ ಕಡಿಮೆ ಇರಲಿದೆ.
ಈ ಹೊಸ ರೈಲುಗಳು ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ. ಇದರಲ್ಲಿ ಎಕಾನಮಿ ದರ್ಜೆ ಅಲ್ಲದೆ ಎ.ಸಿ 3 ಟೈರ್‌, ಎ.ಸಿ 2 ಟೈರ್‌ ಮತ್ತು ಮೊದಲ ದರ್ಜೆ ಎ.ಸಿ ಕೋಚ್‌ಗಳೂ ಇರುತ್ತವೆ. ಸ್ವಯಂಚಾಲಿತ ಬಾಗಿಲುಗಳು ಈ ರೈಲುಗಳ ಇನ್ನೊಂದು ವಿಶೇಷ.
ಎಕಾನಮಿ ದರ್ಜೆಯ ಕೋಚ್‌ಗಳಲ್ಲಿ ಉಷ್ಣತೆ  24–25 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಹೊದಿಕೆಯ ಅಗತ್ಯ ಇಲ್ಲ.
ಈಗ ಎಕ್ಸ್‌ಪ್ರೆಸ್‌ ಮತ್ತು ಮೇಲ್‌ ರೈಲುಗಳಲ್ಲಿ ಸ್ಲೀಪರ್‌, 3 ಟೈರ್‌, 2 ಟೈರ್‌ ಮತ್ತು ಮೊದಲ ದರ್ಜೆ ಎ.ಸಿ ಕೋಚ್‌ಗಳಿರುತ್ತವೆ. ರಾಜಧಾನಿ, ಶತಾಬ್ದಿ ಹಾಗೂ ಇತ್ತೀಚೆಗೆ ಆರಂಭಿಸಲಾದ ಹಮ್‌ಸಫರ್‌ ಮತ್ತು ತೇಜಸ್‌ ರೈಲುಗಳು ಸಂಪೂರ್ಣ ಹವಾ ನಿಯಂತ್ರಿತ.
3 ಟೈರ್‌ ಎ.ಸಿ ಕೋಚ್‌ಗಳು ಮಾತ್ರ ಇರುವ ಹಮ್‌ಸಫರ್‌ ರೈಲು ಭಾರಿ ಜನಪ್ರಿಯವಾಗಿದೆ. ಅದೇ ರೀತಿಯಲ್ಲಿ ಎಕಾನಮಿ ದರ್ಜೆಯೂ ಜನರ ಮೆಚ್ಚುಗೆ ಗಳಿಸಬಹುದು ಎಂಬ ನಿರೀಕ್ಷೆಯನ್ನು ರೈಲ್ವೆ ಹೊಂದಿದೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...